Kannada News Now

1.8M Followers

`KSRTC' ನೌಕರರಿಗೆ ಗುಡ್ ನ್ಯೂಸ್ : ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

02 Jul 2021.07:24 AM

ಬೆಂಗಳೂರು : ಕೊರೋನಾ ಲಾಕ್ ಡೌನ್ ನಿಂದಾಗಿ, ಸ್ಥಗಿತಗೊಂಡಿದ್ದಂತ ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆಗೆ ಮತ್ತೆ ಚಾಲನೆ ಅನ್ ಲಾಕ್ ನಂತ್ರ ಶುರುವಾಗಿದೆ. ವಿವಿಧ ವರ್ಗದ ಸಾರಿಗೆ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಸಲ್ಲಿಸಲು ನೀಡಲಾಗಿದ್ದಂತ ಕೊನೆಯ ದಿನಾಂಕವನ್ನು ಈಗ ಜುಲೈ 15, 2021ರವರೆಗೆ ವಿಸ್ತರಿಸಿದೆ. ಈ ಮೂಲಕ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.

ಲಸಿಕೀಕರಣದ ಬಳಿಕ ರಾಜ್ಯದಲ್ಲಿ ಕಾಲೇಜು ಆರಂಭ : ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದಂತ ಶಿವಯೋಗಿ ಸಿ ಕಳಸದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಿನಾಂಕ 09-03-2021 ಹಾಗೂ ದಿನಾಂಕ 23-03-2021ರನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಮಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4ರ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ದಿನಾಂಕ 30-04-2021ರ ಸಂಜೆ 5.30ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ ಪೈನ್ ಕಿಲ್ಲರ್ ಬಳಸಬೇಕೇ? ಎಚ್ಚರ… ಎನ್ನುತ್ತಿದೆ ವಿಶ್ವ ಅರೋಗ್ಯ ಸಂಸ್ಥೆ

ಪ್ರಸ್ತುತ ಕೋವಿಡ್-19ರ ಹಿನ್ನಲೆಯಲ್ಲಿ ದಿನಾಂಕ 27-04-2021ರಿಂದ ಲಾಕ್ ಡೌನ್ ಘೋಷಿಸಿದ್ದರಿಂದ ನೌಕರರಿಗೆ ಅರ್ಜಿ ಸಲ್ಲಿಸಲು ಕಷ್ಟಸಾಧ್ಯವಾಗಿರುವುದನ್ನು ಮನಗಂಡು, ನೌಕರರ ಅನುಕೂಲಕ್ಕಾಗಿ ಅಂತರ ನಿಗಮ ವರ್ಗಾವಣೆಗೆ ಆನ್ ಲೈನ್ ಮೂಲಕ www.ksrtc.org/transfer ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 01-07-2021ರ ಬೆಳಿಗ್ಗೆ 10 ಗಂಟೆಯಿಂದ ದಿನಾಂಕ 15-07-2021ರ ಸಂಜೆ 5.30ರವರೆಗೆ ವಿಸ್ತರಿಸಲಾಗಿದೆ. ನೌಕರರು ಸದರಿ ಸೌಲಭ್ಯದ ಉಪಯೋಗವನ್ನು ಪಡೆಯಲು ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags