News18 ಕನ್ನಡ

400k Followers

LIC Saral Pension: ಸರಳ ಪಿಂಚಣಿ ಯೋಜನೆ ಪರಿಚಯಿಸಿದ ಎಲ್​ಐಸಿ; ಇದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಮಾಹಿತಿ

03 Jul 2021.06:00 AM

ನವದೆಹಲಿ(ಜು.02): ಜನಸಾಮಾನ್ಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಭಾರತೀಯ ಜೀವ ವಿಮಾ ನಿಗಮ(LIC)ವು ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. 2021ರ ಜುಲೈ 1ರಿಂದ ಸರಳ ಪಿಂಚಣಿ ವರ್ಷಾಶನ ಯೋಜನೆಯನ್ನು ಎಲ್​ಐಸಿ ಜಾರಿಗೆ ತಂದಿದೆ. ನಾನ್​-ಲಿಂಕ್ಡ್, ನಾನ್​-ಪಾರ್ಟಿಸಿಪೇಟಿಂಗ್, ಸಿಂಗಲ್ ಪ್ರೀಮಿಯಂ, ಇಂಡಿವಿಜುಯಲ್ ಇಮ್ಮಿಡಿಯೆಟ್ ಅನ್ಯುಟಿ ಪ್ಲ್ಯಾನ್​ ಇದಾಗಿದೆ.

ಈ ಯೋಜನೆಯನ್ನು ವಿಡಿಯೋ ಕಾನ್ಫೆರೆನ್ಸಿಂಗ್​ ಮೂಲಕ ನಡೆದ ಹಿರಿಯ ವಿಭಾಗೀಯ ಜನರಲ್​ ಮ್ಯಾನೇಜರ್​ಗಳ ಸಮಾವೇಶದ ಸಂದರ್ಭದಲ್ಲಿ, ಹೈದರಾಬಾದ್​ನ ವಲಯ ಲಚೇರಿಯಲ್ಲಿ ರೆನಲ್​ ಮ್ಯಾನೇಜನರ್​ ಎಂ. ಜಗನ್ನಾಥ್ ಅವರು ಲೋಕಾರ್ಪಣೆಗೊಳಿಸಿದರು. ವಿಮೆಯ ಮಾರ್ಗಸೂಚಿ ಪ್ರಕಾರ, ಇದು ಪ್ರಮಾಣಿತ ತತ್​ಕ್ಷಣದ ವರ್ಷಾಶನ ಯೋಜನೆಯಾಗಿದೆ. ಜುಲೈ 1ರಿಂದ ಎಲ್​ಐಸಿಯ ಸರಳ ಪಿಂಚಣಿ ಯೋಜನೆ ಜಾರಿಯಾಗಿದೆ.

40 ವರ್ಷದಿಂದ 80 ವರ್ಷದೊಳಗಿನ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ರೆಗ್ಯುಲೇಟರಿ ಆಯಂಡ್ ಡೆವಲಪ್​ಮೆಂಟ್ ಅಥಾರಿಟಿ ಆಫ್​ ಇಂಡಿಯಾ ಈ ಯೋಜನೆಯನ್ನು ನೀಡುತ್ತಿದೆ. ಎಲ್ಲಾ ಜೀವ ವಿಮಾದಾರರಿಗೆ ಇದರ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಲಿವೆ.

ಸರಳ ಪಿಂಚಣಿ ಯೋಜನೆ ಪಾಲಿಸಿದಾರರಿಗೆ ಎರಡು ಆಯ್ಕೆಗಳು ಲಭ್ಯವಿದ್ದು, ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶವಿದೆ.

ಆಯ್ಕೆ 1- ಲೈಫ್​ ಅನ್ಯುಟಿ ವಿದ್ ರಿಟರ್ನ್ ಆಫ್​ 100 ಪರ್ಸೆಂಟ್​ ಪರ್ಚೇಸ್ ಪ್ರೈಸ್

ಆಯ್ಕೆ 2- ಜಾಯಿಂಟ್​ ಲೈಫ್​ ಲಾಸ್ಟ್​ ಸರ್ವವೈವರ್ ಅನ್ಯುಟಿ ವಿದ್ ರಿಟರ್ನ್​ ಆಫ್​​ 100 ಪರ್ಸೆಂಟ್​ ಆಫ್​ ಪರ್ಚೇಸ್ ಪ್ರೈಸ್​ ಆನ್​​ ಡೆತ್​ ಆಫ್​ಈ ಯೋಜನೆಯನ್ನು ಆಫ್​ಲೈನ್​ ಮತ್ತು ಆನ್​​ಲೈನ್​ನಲ್ಲಿ ನೇರವಾಗಿ ಖರೀದಿಸಬಹುದು. ಆಸಕ್ತಿಯುಳ್ಳವರು ಕನಿಷ್ಠ 12 ಸಾವಿರ ವರ್ಷಾಶನದೊಂದಿಗೆ ಯೋಜನೆಯನ್ನು ಖರೀದಿಸಬಹುದಾಗಿದೆ. ಕನಿಷ್ಠ ಖರೀದಿ ಬೆಲೆ ವರ್ಷಾಶನ ಮೋಡ್, ಆಯ್ಕೆ ಮತ್ತು ವಯಸ್ಸಿನ​ ಮೇಲೆ ಅವಲಂಬಿತವಾಗಿರುತ್ತದೆ. ಗರಿಷ್ಠ ಖರೀದಿ ಬೆಲೆಯಲ್ಲಿ ಯಾವುದೇ ಸೀಲಿಂಗ್ ಇರುವುದಿಲ್ಲ ಎಂಬುದನ್ನು ಗಮನಿಸಬೇಕು.

ವರ್ಷಾಶನವು ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕಗಳಲ್ಲಿ ಲಭ್ಯವಿರುತ್ತದೆ. 5,00,000 ರೂ. ಗಿಂತ ಹೆಚ್ಚಿನ ಖರೀದಿ ಬೆಲೆ ಹೆಚ್ಚಳದ ಮೂಲಕವೂ ಲಭ್ಯವಿದೆ. 6 ತಿಂಗಳ ಬಳಿಕ ಯಾವುದೇ ಸಮಯದಲ್ಲಿ ಸಾಲ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ licindia.in. ವೆಬ್​ಸೈಟ್​ಗೆ ಭೇಟಿ ನೀಡಬಹುದಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags