ಕನ್ನಡದುನಿಯಾ

1.6M Followers

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 12 ಸಾವಿರ ರೂ. ವಿದ್ಯಾರ್ಥಿ ವೇತನ ಸೇರಿ ಪ್ರಮುಖ ʼಸ್ಕಾಲರ್ ಶಿಪ್ʼ ಗಳ ಬಗ್ಗೆ ಇಲ್ಲಿದೆ ಮಾಹಿತಿ

02 Jul 2021.08:34 AM

ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿವಿಧ ರೀತಿಯ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿ ವೇತನದಿಂದ ಪ್ರತಿವರ್ಷ ಲಕ್ಷಾಂತರ ಮಕ್ಕಳಿಗೆ ಪ್ರಯೋಜನವಾಗಲಿದೆ. ಹಣಕಾಸಿನ ನೆರವಿನ ಹೊರತಾಗಿ ಇತರ ಸಹಾಯವನ್ನೂ ಇದರಲ್ಲಿ ನೀಡಲಾಗುತ್ತದೆ. ಅಂತಹ ಟಾಪ್ 5 ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಇಲ್ಲಿದೆ.

ಎನ್‌ಎಂಎಂಎಸ್- ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ ಪರೀಕ್ಷೆ:

ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಸ್ತುತ 9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ದ್ವಿತೀಯ ಹಂತದಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುವುದನ್ನು ಪ್ರೋತ್ಸಾಹಿಸಲು ವಾರ್ಷಿಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ಒಟ್ಟು ವಾರ್ಷಿಕ ಆದಾಯ 1.50 ಲಕ್ಷ ರೂ.ಗಿಂತ ಕಡಿಮೆಯಿರಬೇಕು.

ಅರ್ಹತೆ - 7 ಮತ್ತು 8 ನೇ ತರಗತಿಯಲ್ಲಿ 55% ಅಂಕಗಳು

ವಿದ್ಯಾರ್ಥಿ ವೇತನ - ವರ್ಷಕ್ಕೆ 12,000 ರೂ.

ಅಪ್ಲಿಕೇಶನ್ ಗಡುವು - ಆಗಸ್ಟ್ ನಿಂದ ನವೆಂಬರ್

ಅಪ್ಲಿಕೇಶನ್ ಮೋಡ್- ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್‌ಎಸ್ಪಿ) ಮೂಲಕ ಆನ್‌ಲೈನ್ ಅರ್ಜಿ

https://scholarships.wbsed.gov.in/

ಎನ್ಟಿಎಸ್‌ಇ - ರಾಷ್ಟ್ರೀಯ ಪ್ರತಿಭಾ ಪರೀಕ್ಷೆ:

ಇದನ್ನು ಎನ್‌ಸಿಇಆರ್‌ಟಿ ನಡೆಸುತ್ತದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಡೆಸುವ ಈ ವಿದ್ಯಾರ್ಥಿ ವೇತನ ಪಡೆಯಲು ಯಾವುದೇ ಮಾನ್ಯತೆ ಪಡೆದ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪರೀಕ್ಷೆಯನ್ನು ರಾಜ್ಯಮಟ್ಟದಲ್ಲಿ ಮತ್ತು ಅಖಿಲ ಭಾರತ ಮಟ್ಟದಲ್ಲಿ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.

ಅರ್ಹತೆ - 10 ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು

ವಿದ್ಯಾರ್ಥಿ ವೇತನ - ತಿಂಗಳಿಗೆ 1250 ರೂ.

ಅರ್ಜಿ ಸಲ್ಲಿಕೆ ಗಡುವು - ಆಗಸ್ಟ್ ನಿಂದ ಸೆಪ್ಟೆಂಬರ್

ಅಪ್ಲಿಕೇಶನ್ ಮೋಡ್- ಸಂಬಂಧಪಟ್ಟ ರಾಜ್ಯ ಅಥವಾ ಕೇಂದ್ರ ಪ್ರದೇಶದ ಸಂಪರ್ಕ ಅಧಿಕಾರಿ ಮೂಲಕ ಅರ್ಜಿ

https://scholarships.wbsed.gov.in/index.php

ಸಿಬಿಎಸ್‌ಇ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ

ಒಬ್ಬಳೇ ಮಗಳಾಗಿರುವಂತಹ ಹೆಣ್ಣು ಮಕ್ಕಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಈ ಮೆರಿಟ್ ಆಧಾರಿತ ವಿದ್ಯಾರ್ಥಿವೇತನ ಬಾಲಕಿಯರ ಶಿಕ್ಷಣ ಉತ್ತೇಜಿಸುವ ಪೋಷಕರ ಪ್ರಯತ್ನ ಬಲಪಡಿಸುವ ಗುರಿ ಹೊಂದಿದೆ. ಸಿಬಿಎಸ್‌ಇ ಅಂಗಸಂಸ್ಥೆ ಶಾಲೆಯಲ್ಲಿ 11 ಅಥವಾ 12 ನೇ ತರಗತಿ ಓದುತ್ತಿರುವ ಮತ್ತು ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೆ 500 -1,500 ಮೀರದ ಬೋಧನಾ ಶುಲ್ಕ ಹೊಂದಿರುವ ಬಾಲಕಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ- ಸಿಬಿಎಸ್‌ಇ ಮಂಡಳಿಯಿಂದ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 60 ರಷ್ಟು ಅಂಕಗಳು

ವಿದ್ಯಾರ್ಥಿ ವೇತನ- ಎರಡು ವರ್ಷಗಳವರೆಗೆ(11 ಮತ್ತು 12 ನೇ ಅವಧಿಯಲ್ಲಿ) ತಿಂಗಳಿಗೆ 500 ರೂ.

ಅರ್ಜಿ ಸಲ್ಲಿಕೆ ಗಡುವು - ಸೆಪ್ಟೆಂಬರ್ ನಿಂದ ಅಕ್ಟೋಬರ್

ಅಪ್ಲಿಕೇಶನ್ ಮೋಡ್- ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ ಮೂಲಕ

https://www.cbse.gov.in/Scholarship/Webpages/Guidelines%20and%20AF.html

ಅಲ್ಪಸಂಖ್ಯಾತರಿಗೆ ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ

ಭಾರತ ಸರ್ಕಾರದ ಅಲ್ಪಸಂಖ್ಯಾತ ಸಚಿವಾಲಯ ನೀಡುವ ಈ ವಿದ್ಯಾರ್ಥಿ ವೇತನದ ಉದ್ದೇಶ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಧ್ವನಿ ನೀಡುವುದು ಮತ್ತು ಶಿಕ್ಷಣದ ಮಟ್ಟವನ್ನು ಹೆಚ್ಚಿಸುವುದಾಗಿದೆ. ಈ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 50 ರಷ್ಟು ಅಂಕ ಪಡೆದಿರಬೇಕು. ಅಲ್ಲದೆ, ವಾರ್ಷಿಕ ಕುಟುಂಬದ ಆದಾಯವು 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಅರ್ಹತೆ - ಅಲ್ಪಸಂಖ್ಯಾತ ವಿದ್ಯಾರ್ಥಿಗಳು

ವಿದ್ಯಾರ್ಥಿ ವೇತನ - ಪ್ರವೇಶ ಶುಲ್ಕ, ಬೋಧನಾ ಶುಲ್ಕ, ನಿರ್ವಹಣೆ ಭತ್ಯೆ.

ಅರ್ಜಿ ಸಲ್ಲಿಕೆ - ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ.

https://scholarships.gov.in/

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ

ಈ ವಿದ್ಯಾರ್ಥಿವೇತನವನ್ನು ವಿಕಲಚೇತನರ ಸಬಲೀಕರಣ ಇಲಾಖೆಯಿಂದ ನೀಡಲಾಗುತ್ತದೆ. 9 ಅಥವಾ 10 ನೇ ತರಗತಿಯಲ್ಲಿ ವಿಶೇಷ ಚೇತನರ ಅಧ್ಯಯನಕ್ಕೆ ನೆರವು ನೀಡುವುದು ಇದರ ಉದ್ದೇಶ. ಈ ವಿದ್ಯಾರ್ಥಿವೇತನದ ಪ್ರಯೋಜನವು 40 ಪ್ರತಿಶತ ಅಥವಾ ಹೆಚ್ಚಿನ ಅಂಗವಿಕಲ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಇದರ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ನಿರ್ವಹಣೆ ಭತ್ಯೆ, ಅಂಗವೈಕಲ್ಯ ಭತ್ಯೆ ಮತ್ತು ಪುಸ್ತಕ ಅನುದಾನ ಸಿಗುತ್ತದೆ.

ವಿದ್ಯಾರ್ಥಿವೇತನ- ನಿರ್ವಹಣೆ ಭತ್ಯೆ, ಅಂಗವೈಕಲ್ಯ ಭತ್ಯೆ ಮತ್ತು ಪುಸ್ತಕ ಅನುದಾನ.

ಅರ್ಜಿ ಸಲ್ಲಿಕೆ - ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ.

https://disabilityaffairs.gov.in

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags