Suvarna News

1.4M Followers

ಸೆಪ್ಬೆಂಬರ್ 5ಕ್ಕೆ ಯುಪಿಎಸ್‌ಸಿ ಇಪಿಎಫ್‌ಒ ಎಕ್ಸಾಮ್ ಫಿಕ್ಸ್

02 Jul 2021.12:18 PM

ನೌಕರರ ಭವಿಷ್ಯ ನಿಧಿ ಸಂಸ್ಥೆಗೆ ಆಯ್ಕೆಯಾಗಲು ಬಯಸಿದ್ದ ಅದೆಷ್ಟೋ ಅಭ್ಯರ್ಥಿಗಳ ಕನಸ್ಸಿಗೆ ಕೊರೊನಾ ಅಡ್ಡಗಾಲಾಕಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಬರೆಯಬೇಕು ಅನ್ನುವಷ್ಟರಲ್ಲಿ ಮಹಾಮಾರಿ ಆರ್ಭಟದಿಂದಾಗಿ, ನಿಗದಿಯಾಗಿದ್ದ ಪರೀಕ್ಷೆಗಳು ಮುಂದೂಡಿಕೆಯಾಗಿದ್ದವು. ಅದರಿಂದಾಗಿ ತೀವ್ರ ನಿರಾಸೆಗೊಂಡಿದ್ದ ಅಭ್ಯರ್ಥಿಗಳಿಗೆ ಈಗ ಯುಪಿಎಸ್ಸಿ ಗುಡ್ನ್ಯೂಸ್ ಕೊಟ್ಟಿದೆ.

ಸ್ಪೋರ್ಟ್ಸ್ ಕೋಟಾದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಆಗಿ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್ಸಿ) 2020ರ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನೇಮಕಾತಿ ಪರೀಕ್ಷೆಯ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 5, 2021 ರಂದು ಪರೀಕ್ಷೆ ನಡೆಸೋದಾಗಿ ಯುಪಿಎಸ್‌ಸಿ ಘೋಷಿಸಿದೆ. ಆಸಕ್ತ ಅಭ್ಯರ್ಥಿಗಳು upsc.gov.in. ನಲ್ಲಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

"ಜಾರಿ ಅಧಿಕಾರಿ-ಅಕೌಂಟ್ಸ್ ಅಧಿಕಾರಿ, ಇಪಿಎಫ್‌ಒ ಸೇರಿ ಒಟ್ಟು 421 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ 05.09.2021 ರಂದು ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆಗೆ ಇನ್ನು ಎರಡು ತಿಂಗಳು ಇರೋದ್ರಿಂದ ಅಭ್ಯರ್ಥಿಗಳು ಮತ್ತಷ್ಟು ಅಭ್ಯಾಸದಲ್ಲಿ ತೊಡಗಲು ಅವಕಾಶ ಸಿಕ್ಕಂತಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪರೀಕ್ಷೆಯನ್ನ ಮೇ ೯ರಂದೇ ನಡೆಸಲು ಈ ಮುಂಚೆ ತೀರ್ಮಾನಿಸಲಾಗಿತ್ತು. ಆದ್ರೆ ಕೋವಿಡ್ ೨ನೇ ಅಲೆಯ ಪರಿಸ್ಥಿತಿಯನ್ನು ಪರಿಶೀಲಿಸಿದ ಯುಪಿಎಸ್ಸಿ, ಪರೀಕ್ಷೆಯನ್ನು ಮುಂದಿನ ಸೂಚನೆ ಹೊರಡಿಸುವವರೆಗೂ ಮುಂದೂಡಿಕೆ ಮಾಡಿತು. ತ್ವರಿತವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳು, ಆರೋಗ್ಯ ಪರಿಗಣನೆ, ಸಾಮಾಜಿಕ ಭದ್ರತಾ ನಿಯಮಗಳು ಸೇರಿದಂತೆ ಲಾಕ್ಡೌನ್ ನಿರ್ಬಂಧ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಪರಿಸ್ಥಿತಿಯ ತೀವ್ರತೆಯನ್ನ ಗಂಭೀರವಾಗಿ ಪರಿಗಣಿಸಿತ್ತು. ಬಳಿಕ ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನ ನಡೆಸಲು ಸಾಧ್ಯವಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿತು. ಇದೀಗ ಕೊರೊನಾ ಸ್ಥಿತಿಗತಿ ಸುಧಾರಿಸಿದ್ದು, ಲಾಕ್ಡೌನ್ ನಿರ್ಬಂಧ ಸಡಿಲಿಸಿದ ಬೆನ್ನಲ್ಲೇ ಯುಪಿಎಸ್‌ಸಿ, ಇಪಿಎಫ್‌ಒ ನೇಮಕಾತಿ ಪ್ರಕ್ರಿಯೆಗೆ ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿದೆ.

ಸೆಪ್ಟೆಂಬರ್ 5 ರಂದು ಇಪಿಎಫ್‌ಒ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಇಪಿಎಫ್‌ಒ ಅಧಿಕಾರಿಗಳಾಗಿ ಆಯ್ಕೆಯಾಗಲು ಸಂದರ್ಶನದ ಸುತ್ತಿಗೆ ಹಾಜರಾಗಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಥವಾ ಅಕೌಂಟ್ ಅಧಿಕಾರಿಗಳಾಗಿ ನೇಮಿಸಲಾಗುವುದು.

ಆರ್ಥಿಕ ಹಿಂಜರಿತ ಉಂಟಾದ್ರೆ, ಯಾವೆಲ್ಲ ಉದ್ಯೋಗಳು ಉಳಿಯಲಿವೆ?

ಪರೀಕ್ಷೆಯ ಅವಧಿ ಎರಡು ಗಂಟೆ ಇರುತ್ತದೆ. ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಪ್ರಸಕ್ತ ವಿದ್ಯಾಮಾನ, ಭಾರತದ ಆರ್ಥಿಕತೆ, ಕೈಗಾರಿಕಾ ಸಂಬಂಧಗಳು, ಸಾಮಾನ್ಯ ಜ್ನಾನ ಹಾಗೂ ಕಂಪ್ಯೂಟರ್ ಬಗ್ಗೆ ಅಭ್ಯಾಸ ಮಾಡಿದ್ದರೆ ಒಳ್ಳೆಯದು. ಪರೀಕ್ಷೆಯು ವಸ್ತುನಿಷ್ಠ-ರೀತಿಯ ಮಾದರಿಯಲ್ಲಿದ್ದು, ಎಲ್ಲಾ ಪ್ರಶ್ನೆಗಳು ಸಮಾನ ಅಂಕಗಳನ್ನು ಹೊಂದಿರುತ್ತವೆ. ಹಿಂದಿ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲೂ ಪ್ರಶ್ನೆಪತ್ರಿಕೆ ಇರುತ್ತದೆ. ಒಟ್ಟು ೩೦೦ ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಕಟ್ ಆಫ್ ಮಾರ್ಕ್ಸ್ ಮಾಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ಮೂರನೇ ಒಂದು ಭಾಗದಷ್ಟು ಕಡಿತ ಮಾಡಲಾಗುತ್ತದೆ.

ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷೆಯ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರದ ಬಾಗಿಲನ್ನು ಮುಚ್ಚಲಾಗುತ್ತದೆ.

ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳಿಗೆ ತಮ್ಮ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕೇಳಲಾಗುತ್ತದೆ. ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಹುದ್ದೆಗಳಿಗೆ ಬೇಕಾದ ಎಲ್ಲಾ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ. ನೇಮಕಾತಿ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ 75:25 ಅನುಪಾತದಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

NCC ಸ್ಪೆಷಲ್ ಎಂಟ್ರಿ ಸ್ಕೀಮ್: ಸೇನೆ ಸೇರಲು ಸುವರ್ಣ ಅವಕಾಶ, ಅರ್ಜಿ ಹಾಕಿ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags