Kannada News Now

1.8M Followers

7th Pay Commission : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್:‌ ಕೇಂದ್ರದಿಂದ ʼಮಕ್ಕಳ ಶಿಕ್ಷಣ ಭತ್ಯೆ ನಿಬಂಧನೆಗಳು ಸಡಿಲʼ

03 Jul 2021.1:12 PM

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಶುಭ ಸುದ್ದಿ ಸಿಕ್ಕಿದ್ದು, ತುಟ್ಟಿಭತ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಶುಕ್ರವಾರ ಸರ್ಕಾರಿ ನೌಕರರಿಗೆ ಮಕ್ಕಳ ಶಿಕ್ಷಣ ಭತ್ಯೆ (ಸಿಇಎ) ನಿಂಬಂಧನೆಗಳನ್ನ ಸಡಿಲಿಸಿದೆ.

Breaking : 15 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಬಾಲಿವುಡ್ ನಟ ಅಮೀರ್ ಖಾನ್ - ಕಿರಣ್ ರಾವ್

ಮಾಧ್ಯಮ ವರದಿಗಳ ಪ್ರಕಾರ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಸಂಬಂಧ ಕಚೇರಿ ಜ್ಞಾಪನಾ ಪತ್ರವನ್ನ ಬಿಡುಗಡೆ ಮಾಡಿದೆ ಮತ್ತು ಮಕ್ಕಳ ಶಿಕ್ಷಣ ಭತ್ಯೆ (ಸಿಇಎ) ನಿಬಂಧನೆಗಳನ್ನ ಸಡಿಲಿಸಲು ನಿರ್ಧರಿಸಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ವಿಶೇಷವೆಂದರೆ, 2020-21ರ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಲಾಕ್ ಡೌನ್ʼನಿಂದಾಗಿ ಕೇಂದ್ರ ಸರ್ಕಾರಿ ನೌಕರರು ಎದುರಿಸುತ್ತಿರುವ ತೊಂದರೆಗಳ ಹಿನ್ನೆಲೆಯಲ್ಲಿ ಕೇಂದ್ರದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ದೇಶಮುಖ್ ಗೆ ಜುಲೈ 5 ರಂದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ ಇಡಿ

ಸಾಮಾನ್ಯವಾಗಿ, ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಸಿಇಎ ಗೆ ಬದಲಾಗಿ ತಿಂಗಳಿಗೆ 2250 ರೂ. ಪಡೆಯುತ್ತಾರೆ. ಆದಾಗ್ಯೂ, ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್ ಡೌನ್ ಗಳಿಂದಾಗಿ, ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ಸಿಇಎ ಪಡೆಯಲು ತೊಂದರೆ ಎದುರಿಸುತ್ತಿದ್ದರು.

ಈಗ ಡಿಒಪಿಟಿ ಕಚೇರಿ ಜ್ಞಾಪನಾ ಪತ್ರವನ್ನ ಬಿಡುಗಡೆ ಮಾಡಿದೆ ಮತ್ತು ಸಿಇಎ ಕ್ಲೇಮುಗಳನ್ನ ಸಂಬಂಧಪಟ್ಟ ಉದ್ಯೋಗಿಗಳಿಂದ ಸ್ವಯಂ ಪ್ರಮಾಣೀಕರಣದ ಮೂಲಕ ಅಥವಾ ಫಲಿತಾಂಶ/ವರದಿ ಕಾರ್ಡ್ /ಶುಲ್ಕ ಪಾವತಿಯ ಇ-ಮೇಲ್/ಎಸ್ ಎಂಎಸ್ ಪ್ರಿಂಟ್ ಔಟ್ ಮೂಲಕ, ನಿಗದಿತ ಕ್ಲೇಮುಗಳ ವಿಧಾನಗಳ ಜೊತೆಗೆ ಮಾಡಬಹುದು ಎಂದು ಹೇಳಿದೆ.

ಬ್ರೇಕಿಂಗ್ ನ್ಯೂಸ್: ಚಿಲ್ಲರೆ ಮತ್ತು ಸಗಟು ವ್ಯಾಪಾರವನ್ನು ಎಂಎಸ್‌ಎಂಇ ವ್ಯಾಪ್ತಿಗೆ ತರಲು ಸರ್ಕಾರ ಅನುಮೋದನೆ

ಅಂದ್ಹಾಗೆ, ಈ ಸಡಿಲಿಕೆಯು ಮಾರ್ಚ್, 2020 ಮತ್ತು ಮಾರ್ಚ್, 2021 ಕ್ಕೆ ಕೊನೆಗೊಳ್ಳುವ ಶೈಕ್ಷಣಿಕ ವರ್ಷಗಳಿಗೆ ಮಾತ್ರ ಅನ್ವಯಿಸುತ್ತದೆ. 'ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಎಸ್ ಎಂ ಎಸ್ / ಇಮೇಲ್ ಮೂಲಕ ಶಾಲೆಯಿಂದ ಪೋಷಕರಿಗೆ ಫಲಿತಾಂಶ/ವರದಿ ಕಾರ್ಡ್ʼಗಳನ್ನು ಕಳುಹಿಸಲಾಗಿಲ್ಲ ಮತ್ತು ಶುಲ್ಕವನ್ನು ಆನ್ ಲೈನ್ ನಲ್ಲಿ ಠೇವಣಿ ಇಡಲಾಗುತ್ತಿದೆ ಮತ್ತು ಸಿಇಎ ಕ್ಲೇಮ್ ಮಾಡಲು ಪೋಷಕರಿಗೆ ತೊಂದರೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರಿ ನೌಕರರಿಂದ ಈ ಇಲಾಖೆ ಹಲವಾರು ಉಲ್ಲೇಖಗಳು / ಪ್ರಶ್ನೆಗಳನ್ನು ಸ್ವೀಕರಿಸುತ್ತಿದೆ' ಎಂದು ಡಿಒಪಿಟಿ 2021ರ ಜುಲೈ 1ರ ಕಚೇರಿ ಜ್ಞಾಪನಾ ಪತ್ರದಲ್ಲಿ ತಿಳಿಸಿದೆ.

'ಈ ವಿಷಯವನ್ನ ಪರಿಗಣಿಸಲಾಗಿದೆ ಮತ್ತು ಅದನ್ನ ನಿರ್ಧರಿಸಲಾಗಿದೆ. ಸಿಇಎ ಕ್ಲೇಮುಗಳನ್ನು ಸಂಬಂಧಪಟ್ಟ ಉದ್ಯೋಗಿಗಳಿಂದ ಮಾಡಿದ ಸ್ವಯಂ ಪ್ರಮಾಣೀಕರಣದ ಮೂಲಕ ಅಥವಾ ಫಲಿತಾಂಶ/ವರದಿ ಕಾರ್ಡ್/ಶುಲ್ಕ ಪಾವತಿಯ ಇ-ಮೇಲ್/ಎಸ್ ಎಂಎಸ್ ಪ್ರಿಂಟ್ ಔಟ್ ಮೂಲಕ, ಮಾರ್ಚ್, 2020 ಮತ್ತು ಮಾರ್ಚ್, 2021 ಕ್ಕೆ ಕೊನೆಗೊಳ್ಳುವ ಶೈಕ್ಷಣಿಕ ವರ್ಷಗಳಿಗೆ ಮಾತ್ರ ನಿಗದಿತ ಕ್ಲೇಮುಗಳ ವಿಧಾನಗಳ ಜೊತೆಗೆ ಪರಿಗಣಿಸಬಹುದು' ಎಂದು ಅದು ಹೇಳಿದೆ.

ಕೆಲಸಕ್ಕೆ ಸೇರಿ ಕೇವಲ 6 ತಿಂಗಳು ಆಗಿದ್ದರೆ EPF ನಿಂದ ಪಿಂಚಣಿ ಹಣ ತೆಗೆಯಬಹುದೇ?

ಇದಲ್ಲದೆ, ಕೇಂದ್ರ ಸರ್ಕಾರಿ ಸೇವಕರ ಪರವಾಗಿ ಈಗಾಗಲೇ ಇತ್ಯರ್ಥವಾಗಿರುವ ಸಿಇಎ ಕ್ಲೇಮ್ ಪ್ರಕರಣಗಳನ್ನು ಮತ್ತೆ ತೆರೆಯುವ ಅಗತ್ಯವಿಲ್ಲ ಎಂದು ಡಿಒಪಿಟಿ ಹೇಳಿದೆ.

7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಸಿಇಎಯನ್ನು ಉದ್ಯೋಗಿಗಳಿಗೆ ತಿಂಗಳಿಗೆ 2250 ರೂ.ಗಳ ದರದಲ್ಲಿ ಪಾವತಿಸಬೇಕು. ತಿಂಗಳಿಗೆ ಹಾಸ್ಟೆಲ್ ಸಬ್ಸಿಡಿಯ ದರ 6750 ರೂ. ಡಿಎ ಶೇಕಡಾ 50ರಷ್ಟು ಹೆಚ್ಚಿಸಿದಾಗಲೆಲ್ಲಾ ಸಿಇಎ ಮತ್ತು ಹಾಸ್ಟೆಲ್ ಸಬ್ಸಿಡಿಯನ್ನ ಶೇಕಡಾ 25ರಷ್ಟು ಹೆಚ್ಚಿಸಬೇಕು ಎಂದು 7ನೇ ವೇತನ ಆಯೋಗ ಶಿಫಾರಸು ಮಾಡಿದೆ.

Breaking News :‌ ಬಾಲಿವುಡ್‌ ನಟ ಅಮೀರ್ ಖಾನ್ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನ ಘೋಷಣೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags