Kannada News Now

1.8M Followers

ರೈತರೇ, ʼPM Kisanʼ ಯೋಜನೆಯ 9ನೇ ಕಂತಿನ 2000 ರೂ. ಶೀಘ್ರ ಬಿಡುಗಡೆ.. ಪಟ್ಟಿಯಲ್ಲಿ ನಿಮ್ಮ ಹೆಸ್ರಿದ್ಯಾ? ಈ ರೀತಿ ಚೆಕ್‌ ಮಾಡಿ..!!

05 Jul 2021.4:03 PM

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಸರ್ಕಾರ ರೈತರಿಗೆ ವಾರ್ಷಿಕವಾಗಿ 6000 ರೂ. ಈ ಸಹಾಯವನ್ನ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಆಗಸ್ಟ್ 1, 2021 ರಿಂದ 9ನೇ ಕಂತು ರೈತರ ಖಾತೆಯಲ್ಲಿ ಬರಲು ಪ್ರಾರಂಭವಾಗುತ್ತೆ.

ಇದುವರೆಗೂ ದೇಶದ 10.90 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನ ಪಡೆದಿದ್ದಾರೆ. ಸರ್ಕಾರ ಈವರೆಗೆ 8 ಕಂತುಗಳನ್ನ ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿದೆ.

8ನೇ ಕಂತಿನಲ್ಲಿ ಸರ್ಕಾರ ಸುಮಾರು 9.5 ಕೋಟಿ ರೈತರಿಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಇನ್ನು ಆಗಸ್ಟ್‌ನಿಂದ 9ನೇ ಕಂತು ಬಿಡುಗಡೆ ಆಗಲಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? ಅನ್ನೋದನ್ನ ನೀವು ಹೇಗೆ ಪರಿಶೀಲಿಸಬೇಕು ಅನ್ನೋ ವಿವರ ಕೆಳಗಿನಂತಿದೆ.

ಎಷ್ಟೇ ಶಕ್ತಿಯುತ ರಾಷ್ಟ್ರವಾದರೂ ಇಂತಹ ಸವಾಲನ್ನು ಪ್ರತ್ಯೇಕವಾಗಿ ಪರಿಹರಿಸಲು‌ ಸಾಧ್ಯವಿಲ್ಲ: ಪ್ರಧಾನಿ ಮೋದಿ

ಈ ರೀತಿಯಾಗಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನ ಪರಿಶೀಲಿಸಿ..!
1. ಮೊದಲನೆಯದಾಗಿ ನೀವು ಪಿಎಂ ಕಿಸಾನ್ ಅವರ ಅಧಿಕೃತ ವೆಬ್‌ಸೈಟ್‌ https//pmkisan.gov.in ಗೆ ಭೇಟಿ ನೀಡಬೇಕು.
2. ಅದರ ಮುಖಪುಟದಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ನೋಡುತ್ತೀರಿ.
3. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ, ನೀವು ಫಲಾನುಭವಿಗಳ ಪಟ್ಟಿ ಆಯ್ಕೆಯನ್ನ .
4. ನಂತರ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆರಿಸಿ.
5. ಇದರ ನಂತರ ನೀವು ʼಗೆಟ್ ರಿಪೋರ್ಟ್ʼ . ಇದರ ನಂತ್ರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸುತ್ತದೆ. ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

'SSLC ವಿದ್ಯಾರ್ಥಿ'ಗಳೇ ಗಮನಿಸಿ : ಶಿಕ್ಷಣ ಇಲಾಖೆಯ 'ಈ ಆಪ್' ಹಾಕೊಳ್ಳಿ, ನಿಮ್ಮ 'ಪರೀಕ್ಷಾ ಸಿದ್ಧತೆ'ಗೆ ಉಪಯುಕ್ತ

ಹೆಸರುಗಳನ್ನು ಹೇಗೆ ನಿರ್ಧರಿಸಲಾಗುತ್ತದೆ..?
ಅರ್ಜಿಯಲ್ಲಿ ಲಗತ್ತಿಸಲಾದ ರೈತರ ಭೂ ದಾಖಲೆಗಳನ್ನ ಪರಿಶೀಲಿಸುತ್ತಾರೆ. ಇವುಗಳು ಸರಿಯಾಗಿ ಕಂಡುಬಂದರೆ, ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್‌ನಲ್ಲಿ ರೈತರ ಹೆಸರನ್ನ ಫಲಾನುಭವಿಗಳ ಪಟ್ಟಿಗೆ ಸೇರಿಸಲಾಗುತ್ತದೆ. ರೈತ ಕುಟುಂಬದ ಹೆಸರನ್ನ ಪೋರ್ಟಲ್‌ನಲ್ಲಿ ನೋಂದಾಯಿಸುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿದ ನಂತರವೇ ಪಿಎಂ ಸಮ್ಮಾನ್ ಯೋಜನೆಯ ಮೊತ್ತವನ್ನ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್ :‌ DA, DR ಸೇರಿ ಹಲವು ಬೇಡಿಕೆಗಳನ್ನ ಈಡೇರಿಸಿದ ಸರ್ಕಾರ

ಯೋಜನೆಯ ಲಾಭ ಯಾರು ಪಡೆಯುವುದಿಲ್ಲ
ಸರ್ಕಾರಿ ನೌಕರರು ಅಥವಾ ಆದಾಯ ತೆರಿಗೆ ಪಾವತಿಸುವ ರೈತರನ್ನ ಈ ಯೋಜನೆಗೆ ಅನರ್ಹ. ಇದಲ್ಲದೆ, ವೈದ್ಯರು, ಎಂಜಿನಿಯರ್‌ಗಳು, ಸಿಎಗಳು ಮತ್ತು 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ನೌಕರರು ಸಹ ಈ ಯೋಜನೆಗೆ ಸೇರಲು ಸಾಧ್ಯವಿಲ್ಲ.

ಮೊಬೈಲ್‌ ಬಳಕೆದಾರರೇ ಎಚ್ಚರ: ʼಫೇಸ್ ಬುಕ್ ಲಾಗಿನ್ ವಿವರʼ ಕದಿಯುತ್ತಿದ್ದ ʼ9 ಅಪ್ಲಿಕೇಶನ್ʼಗಳು ʼಗೂಗಲ್ ಸ್ಟೋರ್ʼನಿಂದ ಔಟ್‌



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags