ಕೊವಿಡ್ 19 ಸಾಂಕ್ರಾಮಿಕ ರೋಗ ಶೈಕ್ಷಣಿಕ ಕ್ಷೇತ್ರದ ಮೇಲೆ ತುಂಬ ವ್ಯತಿರಿಕ್ತ ಪರಿಣಾಮ ಬೀರಿದೆ. ಅದೆಷ್ಟೋ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಹಲವು ಉನ್ನತ ಶಿಕ್ಷಣದ, ವಿವಿಧ ವೃತ್ತಿಗಳ ಪ್ರವೇಶ ಪರೀಕ್ಷೆಗಳೇ ರದ್ದಾಗಿವೆ. ಇನ್ನು ಎಂಜನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮುಖ್ಯ ಪರೀಕ್ಷೆ-2021 ಮತ್ತು ನೀಟ್ -2021 ಪರೀಕ್ಷೆಗಳೂ ಮುಂದೂಡಲ್ಪಟ್ಟಿವೆ. ಲಕ್ಷಾಂತರ ವಿದ್ಯಾರ್ಥಿಗಳು ಈ ನೀಟ್ ಮತ್ತು ಜೆಇಇ ಪ್ರವೇಶ ಪರೀಕ್ಷೆಗಳಿಗಾಗಿ ಕಾಯುತ್ತಿದ್ದಾರೆ.
ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಕೆಲವು ವಾರಗಳ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನೀಟ್ 2021 (NEET 2021) ಪ್ರವೇಶ ಪರೀಕ್ಷೆ ಆಗಸ್ಟ್ 1ರಂದು ನಡೆಯಲಿದೆ. ಹಾಗೊಮ್ಮೆ ಈ ಪ್ರವೇಶ ಪರೀಕ್ಷೆ ಆಗಸ್ಟ್ 1ರಂದು ನಡೆಯುವುದು ನಿಶ್ಚಿತವಾದರೆ ಪರೀಕ್ಷಾರ್ಥಿಗಳು ಅಪ್ಲಿಕೇಶನ್ ಫಾರ್ಮ್ಗಳನ್ನು ಎನ್ಟಿಎಯ ಅಧಿಕೃತ ವೆಬ್ಸೈಟ್ neet.nta.nic.in.ನಲ್ಲಿ ಪಡೆಯಬಹುದು.
ನೀಟ್ 2021 (NEET-2021) ಪ್ರವೇಶ ಪರೀಕ್ಷೆ ಅಪ್ಲಿಕೇಶನ್ ಬಿಡುಗಡೆಯಾದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆಯನ್ನು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ಹೊರಡಿಸಿಲ್ಲ. ಆದರೆ ಪ್ರವೇಶ ಪರೀಕ್ಷೆಯ ಅಪ್ಲಿಕೇಶನ್ ಫಾರ್ಮ್ಗಳು ಇದೇ ವಾರದಲ್ಲಿಯೇ ಬಿಡುಗಡೆಯಾಗಲಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ಇನ್ನು ಕೆಲವೇ ದಿನಗಳಲ್ಲಿ ನೀಟ್ ಪ್ರವೇಶ ಪರೀಕ್ಷೆಯ ದಿನಾಂಕ ಮತ್ತು ಅಪ್ಲಿಕೇಶನ್ ಫಾರ್ಮ್ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಎನ್ಟಿಎ ಘೋಷಿಸಬಹುದು ಎಂದು ಹೇಳಲಾಗಿದೆ.
ಇನ್ನು ಜೆಇಇ ಮುಖ್ಯಪರೀಕ್ಷೆಯ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಸದ್ಯ ಜೆಇಇ ಮುಖ್ಯ ಪರೀಕ್ಷೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸೆಷನ್ಸ್ಗಳು ಮುಗಿದಿದ್ದು, ಏಪ್ರಿಲ್ ಮತ್ತು ಮೇ ಸೆಷನ್ಸ್ಗಳು ಮುಂದೂಡಲ್ಪಟ್ಟಿವೆ. ಅದನ್ನು ಯಾವಾಗ ನಡೆಸುವುದು ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಮಧ್ಯೆ ಜೆಇಇ 2021 ಮುಖ್ಯ ಪರೀಕ್ಷೆಯ ಏಪ್ರಿಲ್-ಮೇ ಸೆಷನ್ಸ್ಗಳ ಪರೀಕ್ಷೆ ಜುಲೈ ಮತ್ತು ಆಗಸ್ಟ್ನಲ್ಲಿ ನಡೆಯಲಿವೆ. ಅದೂ ಕೂಡ ಕೇವಲ 15 ದಿನಗಳ ಅಂತರದಲ್ಲಿ ನಡೆಯಲಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ 34,703 ಹೊಸ ಪ್ರಕರಣ ಪತ್ತೆ, 533 ಮಂದಿ ಸಾವು
Some Important Information about NTA NEET JEE Main 2021 Exams
The post ಜೆಇಇ, ನೀಟ್ 2021 ಪ್ರವೇಶ ಪರೀಕ್ಷೆಗಳು ಯಾವಾಗ ನಡೆಯಲಿವೆ? -ಇಲ್ಲಿದೆ ನೋಡಿ ಪ್ರಮುಖ ಮಾಹಿತಿ appeared first on TV9 Kannada.
Disclaimer
This story is auto-aggregated by a computer program and has not been created or edited by Dailyhunt Publisher: TV9 Kannada