Kannada News Now

1.8M Followers

ರಾಜ್ಯದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಭ್ಯಾಸ ಪುಸ್ತಕ ಬಿಡುಗಡೆ

07 Jul 2021.07:59 AM

ಬೆಂಗಳೂರು : ರಾಜ್ಯದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.

ಜುಲೈ 20 ರಿಂದ ಜೆಇಇ ಮೇನ್ಸ್ ಬಾಕಿ ಪರೀಕ್ಷೆ ಆರಂಭ, ಆಗಸ್ಟ್ ನಲ್ಲಿ ಫಲಿತಾಂಶ

ಸಾರ್ವಜನಿಕ ಶಿಕ್ಷಣ ಇಲಾಖೆಯು ರೂಪಿಸಿರುವ ಸೇತುಬಂಧ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಿದೆ. 1-3 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅಭ್ಯಾಸ ಹಾಳೆ ಹಾಗೂ 4-10 ನೇ ತರಗತಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳನ್ನು ರಿಲೀಸ್ ಮಾಡಿದೆ.

ನಿಮ್ಮ ಸಾವು ಯಾವಾಗ ಎಂದು ಹೇಳುತ್ತೆ ಈ ಕ್ಯಾಲ್ಕುಲೇಟರ್ … ಏನಿದು ಅಂತ ಕುತೂಹಲ ಇದ್ರೆ ಇದನ್ನ ಓದಿ..

1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ `ನಲಿಕಲಿ' ಅಭ್ಯಾಸ ಹಾಳೆಗಳನ್ನು ಮತ್ತು 4-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಚಿಸಿರುವ ಅಭ್ಯಾಸ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೆಬ್ ಸೈಟ್ http://dsert.kar.nic.in ನಲ್ಲಿ ಪಡೆಯಬಹುದಾಗಿದೆ.

`SSLC' ವಿದ್ಯಾರ್ಥಿಗಳೇ ಗಮನಿಸಿ : ಜುಲೈ15 ಮತ್ತು 17ರಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ 'ಅಣಕು ಪರೀಕ್ಷೆ'

1 ರಿಂದ 3 ನೇ ತರಗತಿವರೆಗಿನ ಮಕ್ಕಳಿಗೆ ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ ವಿಷಯದ ಕನ್ನಡ ಮಾಧ್ಯಮ ಅಭ್ಯಾಸ ಹಾಳೆ, 4 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ಉರ್ದು, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.

ಇಂದು ಕೇಂದ್ರ ಸಚಿವ ಸಂಪುಟ ಪುನರ್‌ರಚನೆ :ಜೆಡಿಯು ಮೋದಿ ಸರ್ಕಾರದ ಜೊತೆ ಸೇರ್ಪಡೆ ಸಾಧ್ಯತೆ !



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags