Kannada News Now

1.8M Followers

'SSLC ವಿದ್ಯಾರ್ಥಿ'ಗಳೇ, 'ಪರೀಕ್ಷೆ' ಬಗ್ಗೆ ಅನುಮಾನ ಇವೆಯೇ.? ಹಾಗಿದ್ದರೇ ಈ ಕ್ರಮ ಅನುಸರಿಸಿ, 'ಶಿಕ್ಷಣ ಸಚಿವ'ರಿಂದಲೇ ಉತ್ತರ ಪಡೆಯಿರಿ.!

07 Jul 2021.11:33 AM

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಜುಲೈ.19 ಮತ್ತು 22ರಂದು ನಿಗದಿ ಪಡಿಸಲಾಗಿದೆ. ಈ ಬಾರಿ ಈ ಹಿಂದಿನಂತೆ ಪರೀಕ್ಷೆ ಇರದೇ, ಬಹು ಆಯ್ಕೆ ಮಾದರಿಯ ಪ್ರಶ್ನೆಗಳ ಮೂಲಕ ಪರೀಕ್ಷೆ ನಡೆಯಲಿದೆ. ಇಂತಹ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಾದಂತ ನಿಮಗೆ ಯಾವುದಾದ್ರೂ ಅನುಮಾನ ಇದ್ದರೇ, ಅಂತಹ ಅನುಮನಗಳನ್ನು ಶಿಕ್ಷಣ ಸಚಿವರೊಂದಿಗೆ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸೋ ಮೂಲಕ, ಉತ್ತರ ಪಡೆಯಬಹುದಾಗಿದೆ.

BIG BREAKING NEWS : ಈಶಾನ್ಯ ಸಾರಿಗೆ ನಿಗಮ(NEKRTC)ವನ್ನು 'ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ'ವೆಂದು ಮರುನಾಮಕರಣ

ಹೌದು.. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭಾಗಿಯಾಗುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪರೀಕ್ಷೆಗೆ ಮಕ್ಕಳು ಸಜ್ಜಾಗಿರುವ ಕುರಿತು ಮಕ್ಕಳೊಂದಿಗೆ ತಾವು ಮಾತನಾಡು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಜುಲೈ 9 ಮತ್ತು 14ರಂದು ಫೋನ್ ಇನ್ ಸಂವೇದನಾ ಕಾರ್ಯಕ್ರಮ ನಡೆಯಲಿದೆ.

ಪ್ರತಿಯೊಂದು ಜಿಲ್ಲೆಗಳಿಂದ 2000ಕ್ಕೂ ಹೆಚ್ಚು ಮಕ್ಕಳು ಈ ಸಂವೇದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದರು.

BREAKING NEWS : ದೇಶದಲ್ಲಿ ಒಂದೇ ದಿನ 43,733 ಕೊರೋನಾ ಪ್ರಕರಣ ದಾಖಲು, 930 ಜನ ಸಾವು

ಇನ್ನೂ ಪರೀಕ್ಷಾ ಸಿದ್ಧತೆ ಕುರಿತಂತೆ ವಿವರಣೆ ಪಡೆದ ಸುರೇಶ್ ಕುಮಾರ್, ಜುಲೈ 15 ಮತ್ತು 17ರಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆಗಳನ್ನು ನಡೆಸುವುದಕ್ಕೆ ಸೂಚನೆ ನೀಡಿ, ಪರೀಕ್ಷಾ ಕೇಂದ್ರ ಪ್ರವೇಶದಿಂದ ಹಿಡಿದು ಪರೀಕ್ಷಾ ಕೊಠಡಿ ಪ್ರವೇಶ ಹಾಗೆಯೇ ಪರೀಕ್ಷೆ ನಂತರ ಮಕ್ಕಳು ಸಾಮಾಜಿಕ ಅಂತರದ ಮೂಲಕ ಪರೀಕ್ಷಾ ಕೇಂದ್ರದಿಂದ ಹೊರಬರುವ ತನಕ ಎಲ್ಲ ರೀತಿಯ ಕ್ರಮಗಳನ್ನು ಪಾಲಿಸಬೇಕಿದೆ.

ಶಿಕ್ಷಕರು, ಉಪನ್ಯಾಸಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ : ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags