ಕನ್ನಡದುನಿಯಾ

1.6M Followers

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: DRDO ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

07 Jul 2021.5:50 PM

ಯುದ್ಧ ವಾಹನಗಳ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ, ಡಿಆರ್​ಡಿಒ ಅಪ್ರೆಂಟಿಸ್​ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಡಿಆರ್​ಡಿಓ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಜುಲೈ 20ನೇ ತಾರೀಖಿನವರೆಗೆ ಕಾಲಾವಕಾಶ ನೀಡಲಾಗಿದೆ. ಒಟ್ಟು 57 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು mhrdnats.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳನ್ನ ಆಧರಿಸಿ ಅಭ್ಯರ್ಥಿಗಳ ಪಟ್ಟಿಯನ್ನ ಶಾರ್ಟ್​ ಲಿಸ್ಟ್​ ಮಾಡಲಾಗುತ್ತದೆ.

ಗ್ರ್ಯಾಜುಯೇಟ್​ ಅಪ್ರೆಂಟಿಸ್​ ಹಾಗೂ ಟೆಕ್ನಿಷಿಯನ್​ (ಡಿಪ್ಲೋಮಾ ) ಗಳೆಂಬ ಎರಡು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಗ್ರ್ಯಾಜುಯೇಟ್​ ಅಪ್ರೆಂಟಿಸ್​​ ಹುದ್ದೆಗೆ 31 ಮಂದಿ ಹಾಗೂ ಟೆಕ್ನಿಷಿಯನ್​ ಹುದ್ದೆಗೆ 26 ಮಂದಿಯನ್ನ ಆಯ್ಕೆ ಮಾಡೋದಾಗಿ ಡಿಆರ್​ಡಿಓ ಹೇಳಿದೆ.

ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇ ಮೇಲ್​ ಮೂಲಕ ಮಾಹಿತಿ ನೀಡಲಾಗುತ್ತದೆ.

ಜುಲೈ 5ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಈ ಪ್ರಕ್ರಿಯೆ ಜುಲೈ 20ರವರೆಗೆ ಮುಂದುವರಿಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್​ಸೈಟ್​ಗೆ ಲಾಗಿನ್​ ಆಗುವ ಮೂಲಕ ಮಾಹಿತಿ ಪಡೆಯಬಹುದಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags