Kannada News Now

1.8M Followers

ನವದೆಹಲಿಯ 'ಕರ್ನಾಟಕ ಭವನ'ದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ : ಹೀಗಿದೆ ದಾಖಲಾತಿ ಪರಿಶೀಲನೆ, ಪ್ರಾವೀಣ್ಯತೆ ಪರೀಕ್ಷೆ ವೇಳಾಪಟ್ಟಿ

17 Jul 2021.11:29 AM

ನವದೆಹಲಿ : ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಕಿಚನ್ ಮೇಟ್, ಸಹಾಯಕ ವ್ಯವಸ್ಥಾಪಕರು, ಸ್ವಾಗತಕಾರರು/ದೂರವಾಣಿ ಪ್ರವರ್ಧಕರು, ರೂಂ ಬಾಯ್/ಬೇರರ್, ಪ್ಯೂನ್-ಕಂ-ವಾಚ್ ಮೆನ್ ಹಾಗೂ ಗಾರ್ಡನರ್/ಸ್ವೀಪರ್ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಹೊರಡಿಸಲಾದ ಅಧಿಸೂಚನೆಯಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಅನ್ವಯಿಸುವ ಹುದ್ದೆಗಳ ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಗಾಗಿ 1:5ರ ಅನುಪಾತದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು www.karnatakabhavan.karnataka.gov.in ರಲ್ಲಿ ದಿನಾಂಕ:14-07-2021ರಂದು ಪ್ರಕಟಿಸಲಾಗಿದೆ.

BREAKING NEWS : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋ ಪ್ರಶ್ನೆಯೇ ಇಲ್ಲ - ಸಿಎಂ BS ಯಡಿಯೂರಪ್ಪ

ದಾಖಲೆ ಪರಿಶೀಲನೆ ಮತ್ತು ಪ್ರಾವೀಣ್ಯತೆ ಪರೀಕ್ಷಾ ವೇಳಾಪಟ್ಟಿ ಇಂತಿದೆ.

  • ಕಿಚನ್ ಮೇಟ್ ಹುದ್ದೆಗಾಗಿ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:29-07-2021ರ ಗುರುವಾರ ಬೆಳಿಗ್ಗೆ 9.30 ರಿಂದ ದಾಖಲೆ ಪರಿಶೀಲನೆ ನಡೆಯಲಿದ್ದು, ಅದೇ ದಿನ ಬೆಳಿಗ್ಗೆ 11 ರಿಂದ ಪ್ರಾವೀಣ್ಯತೆ ಪರೀಕ್ಷೆಯೂ ನಡೆಯಲಿದೆ.
  • ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:29-07-2021ರ ಗುರುವಾರ ಮದ್ಯಾನ್ಹ 2.30 ರಿಂದ ದಾಖಲೆ ಪರಿಶೀಲನೆ ನಡೆಯಲಿದೆ.
  • ಸ್ವಾಗತಕಾರರು / ದೂರವಾಣಿ ಪ್ರವರ್ಧಕರ ಹುದ್ದೆಗಾಗಿ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:29-07-2021ರ ಗುರುವಾರ ಮದ್ಯಾಹ್ನ 2.30 ರಿಂದ ದಾಖಲೆ ಪರಿಶೀಲನೆ ನಡೆಯಲಿದೆ.
  • ರೂಂ ಬಾಯ್ / ಬೇರರ್ ಹುದ್ದೆಗಾಗಿ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:30-07-2021ರ ಶುಕ್ರವಾರ ಬೆಳಿಗ್ಗೆ 9.30 ರಿಂದ ದಾಖಲೆ ಪರಿಶೀಲನೆ ನಡೆಯಲಿದ್ದು, ಅದೇ ದಿನ ಬೆಳಿಗ್ಗೆ 11 ಗಂಟೆಗೆ ಪ್ರಾವೀಣ್ಯತೆ ಪರೀಕ್ಷೆ ಇರಲಿದೆ.
  • ಪ್ಯೂನ್ -ಕಂ-ವಾಚ್ ಮೆನ್ ಹುದ್ದೆಗೆ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:30-07-2021ರ ಶುಕ್ರವಾರ ಮಧ್ಯಾಹ್ನ 2.30ರಿಂದ ದಾಖಲೆಗಳ ಪರಿಶೀಲನೆ ನಡೆಯಲಿದೆ.
  • ಗಾರ್ಡನರ್/ ಸ್ವೀಪರ್ ಹುದ್ದೆಗೆ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:30-07-2021ರಂದು ಶುಕ್ರವಾರ ಮಧ್ಯಾಹ್ನ 2.30 ರಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಗೆ ಪ್ರಕಟಿಸಿರುವ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ವೇಳಾಪಟ್ಟಿಯನುಸಾರ ದಾಖಲೆ ಪರಿಶೀಲನೆ ಮತ್ತು ಪ್ರಾವೀಣ್ಯತೆ ಪರೀಕ್ಷೆಗೆ ಹಾಜರಾಗುವುದು. ನೇಮಕಾತಿ ಅಧಿಸೂಚನೆಯ 7.2ರಲ್ಲಿ ಪ್ರಾವೀಣ್ಯತೆ ಪರೀಕ್ಷೆ ಶೀರ್ಷಿಕೆಯಡಿಯಲ್ಲಿ ತಿಳಿಸಿರುವಂತೆ, ನವದೆಹಲಿಯ ಕರ್ನಾಟಕ ಭವನವು ಅಭ್ಯರ್ಥಿಗಳೊಂದಿಗೆ ವೈಯಕ್ತಿಕವಾಗಿ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ.

ತೋಟಗಾರಿಕೆ ಇಲಾಖೆಯಿಂದ ಸಹಾಯಧನ, ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯ ಎಲ್ಲಾ ಮೂಲ ದಾಖಲೆಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗುವಂತೆಯೂ, ಪ್ರಾವೀಣ್ಯತೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಭಾವಚಿತ್ರವಿರುವ ಚುನಾವಣಾ ಐಡಿ, ಆಧಾರ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸ್ ಫೋರ್ಟ್, ಸರ್ಕಾರಿ ನೌಕರರ ಐಡಿ ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿಯನ್ನು ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಹಾಜರಪಡಿಸತಕ್ಕದ್ದೆಂದೂ, ತಪ್ಪಿದಲ್ಲಿ ಪ್ರಾವೀಣ್ಯತೆ ಪರೀಕ್ಷೆಗೆ ಪ್ರವೇಶ ನೀಡಲಾಗುವುದಿಲ್ಲ.

ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ದಾಖಲೆ ಪರಿಶೀಲನೆ ಮತ್ತು ಪ್ರಾವೀಣ್ಯತೆ ಪರೀಕ್ಷೆಗೆ ಸಹ ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆಯ್ಕೆಯಾಗಿದ್ದರೆ, ಅಂತಹವರು ಹುದ್ದೆಗಳ ಆಯ್ಕೆಯ ಆದ್ಯತೆಯನ್ನು (Preference) ಲಿಖಿತವಾಗಿ ಸಲ್ಲಿಸಬೇಕೇಂದು ತಿಳಿಸಿದೆ.

ದಾಖಲೆ ಪರಿಶೀಲನೆ ಹಾಗೂ ಅನ್ವಯಿಸುವ ಹುದ್ದೆಗಳಿಗಾಗಿ ನಡೆಸುವ ಪ್ರಾವೀಣ್ಯತೆ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಮತ್ತು ಪ್ರಾವೀಣ್ಯತೆ ಪರೀಕ್ಷೆಗಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದರೆ, ದಿನಾಂಕ:26-07-2021ರ ಸಂಜೆ 5.30ರೊಳಗಾಗಿ ಅಧ್ಯಕ್ಷರು, ನೇರ ನೇಮಕಾತಿ ಆಯ್ಕೆ ಸಮಿತಿ ಹಾಗು ಉಪ ನಿವಾಸಿ ಆಯುಕ್ತರು (ಎಚ್.ಕೆ), ಕರ್ನಾಟಕ ಭವನ, ಕಾವೇರಿ, ಸಂಖ್ಯೆ 10, ಕೌಟಿಲ್ಯ ಮಾರ್ಗ್, ಚಾಣಕ್ಯಪುರಿ, ನವದೆಹಲಿ-110021 ಇವರಿಗೆ ತಲುಪುವಂತೆ ಲಿಖಿತವಾಗಿ ಅಥವಾ dyrckb@gmail.com ಇ-ಮೇಲ್ ಮೂಲಕವೂ ಕಳುಹಿಸಬಹುದಾಗಿದೆ.

ಹೊಸ ನ್ಯಾಯಬೆಲೆ ಅಂಗಡಿ ತೆರೆಯೋದಕ್ಕೆ ಅರ್ಜಿ ಅಹ್ವಾನ

ನಿಗದಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧ್ಯಕ್ಷರು, ನೇರ ನೇಮಕಾತಿ ಆಯ‍್ಕೆ ಸಮಿತಿ ಹಾಗೂ ನವದೆಹಲಿಯ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತರೂ ಆದ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags