Kannada News Now

1.8M Followers

Pradhan Mantri Fasal Bima Yojana : ರೈತರೇ.. ನೀವು ಮಾಡಿಸೋ 'ಈ ಯೋಜನೆ'ಯಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ಇಲ್ಲಿದೆ ಮಾಹಿತಿ

25 Jul 2021.3:29 PM

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ದೇಶದ ರೈತರಿಗೆ ಫಸಲು ಕೈಕೊಟ್ಟಾಗ, ಬೆಳೆ ಹಾನಿಯ ಪರಿಹಾರಕ್ಕಾಗಿ, ಕೇಂದ್ರ ಸರ್ಕಾರದಿಂದ ರೂಪಿಸಿದಂತ ಯೋಜನೆಯೇ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಾಗಿದೆ. ಈ ಒಂದು ಯೋಜನೆಯಿಂದ, ರೈತರು ತಾವು ಬೆಳೆದಂತ ಬೆಳೆ ( Crop ), ಬಾರದೇ ಇದ್ದರೂ, ಸಂಕಷ್ಟಕ್ಕೆ ಸಿಲುಕೋದ್ರಿಂದ ತಪ್ಪಿಸಲು ಉಪಯೋಗಕಾರಿಯಾಗಿದೆ. ಹಾಗಾದ್ರೇ.. ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ( Pradhan Mantri Fasal Bima Yojana)ಯಿಂದ ರೈತರಿಗೆ ಆಗುವಂತ ಪ್ರಯೋಜನಗಳು ಏನೆಲ್ಲಾ ಎನ್ನುವ ಬಗ್ಗೆ, ಮುಂದೆ ಓದಿ..

College Reopen in Karnataka : ನಾಳೆಯಿಂದ ರಾಜ್ಯಾಧ್ಯಂತ 'ಕಾಲೇಜು ಓಪನ್' : 'ತರಗತಿಗೆ ಹಾಜರಿ'ಗೆ ಈ ನಿಮಯಗಳು ಕಡ್ಡಾಯ.!

ಕೇಂದ್ರ ಸರ್ಕಾರ ರೈತರು ಬೆಳೆಗೆ ಹಾನಿಯಾದರೇ, ಹೊಲದ ಸ್ಥಳದಲ್ಲೇ ಕ್ಲೈಮ್ ಪಾವತಿಗಾಗಿ ಜಾರಿಗೆ ತಂದಿರುವಂತ ಮಹತ್ವದ ಯೋಜನೆಯಲ್ಲಿ ಒಂದು ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಾಗಿದೆ.

ರೈತರು ಈ ಯೋಜನೆಯನ್ನು ಮಾಡಿಸಿದ್ದಲ್ಲಿ, ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

CM BS Yediyurappa : ತೀವ್ರ ಕುತೂಲಹ ಮೂಡಿಸಿದ 'ನಾಳಿನ ಸಿಎಂ ಯಡಿಯೂರಪ್ಪ' ಅವರ 'ಅಧಿಕೃತ ಕಾರ್ಯಕ್ರಮ ಪಟ್ಟಿ'.!

ಹಾಗಾದ್ರೇ.. ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಿಂದ ಏನೆಲ್ಲಾ ಉಪಯೋಗ

  • ಅಲಿಕಲ್ಲು, ಭೂ ಕುಸಿತ ಮತ್ತು ಜಲಾವರಣ ಕಾರಣಗಳಿಂದ ನಿಮ್ಮ ಬೆಳೆಗೆ ಹಾನಿಯಾದ್ರೇ, ಹೊಲದ ಸ್ಥಳದಲ್ಲೇ ನೀವು ಮಾಡಿಸಿದಂತ ಬೆಳೆ ವಿಮೆ( crop insurance ) ಕ್ಲೈಮ್ ಪಾವತಿಸಲ್ಪಡುತ್ತದೆ.
  • ಬೆಳೆಯ ಕಟಾವು ಮಾಡಿದ ನಂತ್ರ, ಮುಂದಿನ 14 ದಿನಗಳ ತನಕ ಹೊಲದಲ್ಲಿ ಒಣಗುವ ಸಲುವಾಗಿ ಕಟಾವು ಮಾಡಿದ ಬೆಳೆಗೆ ಹವಾಮಾನ ವೈಪರಿತ್ಯ, ಸುಂಟರಗಾಳಿಯಿಂದ ಕೂಡಿದ ಮಳೆ, ಅಕಾಲಿಕ ಮಳೆಯಿಂದ ಹಾನಿಯಾದರೂ ಕ್ಲೈಮ್ ಪಾವತಿಸಲ್ಪಡುತ್ತದೆ.
  • ಈ ಮೇಲೆ ನೀಡಲಾದ ಎರಡೂ ಪರಿಸ್ಥಿತಿಗಳಲ್ಲೂ ವಿಮೆಗೆ ಒಳಪಟ್ಟ ರೈತರು 48 ಗಂಟೆಗಳೊಳಗಾಗಿ ವಿಮಾ ಕಂಪನಿ( Insurance Company ), ಬ್ಯಾಂಕ್ ಅಥವಾ ಕೃಷಿ ಇಲಾಖೆ ( Agriculture Department ) ಮೂಲಕ ದೂರು ದಾಖಲಿಸುವುದು ಅನಿವಾರ್ಯವಾಗಿದೆ.
  • ಗ್ರಾಮದಲ್ಲಿ ಅಧಿಸೂಚಿತ ಬೆಳೆಯ ಸರಾಸರಿ ಉತ್ಪನ್ನವು ಪೂರ್ವ ನಿರ್ಧಾರಿತ ಬೆಳೆಗಿಂತ ಕಡಿಮೆಯಾದ್ರೇ, ಕ್ಲೈಮ್ ಗ್ರಾಮದ ಎಲ್ಲಾ ರೈತರಿಗೆ ಸಿಗುತ್ತದೆ.
  • ಯೋಜನೆಯು ಎಲ್ಲಾ ಸಾಲ ಪಡೆದ ರೈತರಿಗೆ ಅನಿವಾರ್ಯವಾಗಿದೆ. ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದೆ.
  • ಸಾಲ ಪಡೆದ ರೈತರು ತಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಕೊನೆಯ ದಿನಾಂಕದ ಮೊದಲು ತಮ್ಮ ಖಾತೆಯಿಂದ ವಿಮೆಯ ಮೊತ್ತವನ್ನು ಕಡಿತ ಮಾಡಲಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.
  • ಸಾಲ ಪಡೆಯದ ರೈತರು, ವಿಮೆ ಮಾಡಿಸಿಕೊಳ್ಳಲು ಕಂಪನಿಯ ಪ್ರತಿನಿಧಿ, ಏಜೆಂಟ್, CSC ಸೆಂಟರ್ ಅಥವಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸತಕ್ಕದ್ದು.

Pradhan Mantri Fasal Bima Yojana Benefits

Karnataka Next CM : ಇಂದು ಸಂಜೆ 'ಸಿಎಂ ರಾಜೀನಾಮೆ' ಆದೇಶ ಫಿಕ್ಸ್ : 'BSY ನಂತ್ರ' ಯಾರಾಗಲಿದ್ದಾರೆ 'ನೂತನ CM'.?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags