Kannada News Now

1.8M Followers

BIG BREAKING NEWS : ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ರಾಜೀನಾಮೆ - ಸಿಎಂ ಯಡಿಯೂರಪ್ಪ ಘೋಷಣೆ

26 Jul 2021.12:02 PM

ವರದಿ : ವಸಂತ ಬಿ ಈಶ್ವರಗೆರೆ

ಬೆಂಗಳೂರು : 2 ವರ್ಷದ ಬಿಜೆಪಿ ಸಾಧಾನ ಸಮಾವೇಶದಲ್ಲೇ ಮುಖ್ಯಮಂತ್ರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದ ಮುಕ್ತಾಯದ ಬಳಿಕ, ಊಟದ ನಂತ್ರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಪಕ್ಷದ ಕಾರ್ಯಕ್ರಮದಲ್ಲೇ ಘೋಷಣೆ ಮಾಡಿದರು.

ಶಿಕಾರಿಪುರದಲ್ಲಿ ಸಂಘದ ಕಾರ್ಯಕರ್ತನಾಗಿ ಜೀವನ ಆರಂಭಿಸಿದೆ. ಆರ್ ಎಸ್ ಎಸ್ ಪ್ರಚಾರಕನಾಗಿ ಕಾರ್ಯ ಆರಂಭವಾಯಿತು. ಕ್ರಮೇಣ ಶಿಕಾರಿಪುರಸಭೆಗೆ ನಿಂತು, ಗೆದ್ದಿದ್ದೇನೆ. ಮನೆಯಿಂದ ಶಿಕಾರಿಪುರ ಕಚೇರಿಗೆ ತೆರಳಬೇಕಾದಂತ ಸಂದರ್ಭದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ನಾನು ಸತ್ತೇ ಹೋಗಿದ್ದೆ ಎನ್ನಲಾಗುತ್ತು. ಬದುಕಿದೆ.. ಅಂದೇ ಜನಸೇವೆ ಮಾಡುವಂತ ನಿರ್ಧಾರ ಮಾಡಿದೆ.

ನಮ್ಮ ಕುಟುಂಬಕ್ಕೂ ಇದನ್ನು ಅವತ್ತೇ ಹೇಳಿದೆ. ಅದರಂತೆ ರೈತರಪರ, ದಲಿತರ ಪರ ಹೋರಾಟ ಮಾಡಿದೆ ಎಂದರು.

ಹೀಗೆ ಕರ್ನಾಟಕ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಂತ ಕೆಲಸ ಮಾಡಿದ ಪರಿಣಾಮ, ಇವತ್ತು ಸಿಎಂ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಲು ಇಚ್ಚೆ ಪಡುತ್ತೇನೆ. ಅಂದು ಅಟಲ್ ಬಿಹಾರಿ ವಾಜಪೇಯಿ ಅವರು ನೀವು ದೆಹಲಿಗೆ ಬನ್ನಿ ಎಂದರು. ಆದ್ರೇ ನಾನು ಯಾವುದೇ ಕಾರಣಕ್ಕೂ ದೆಹಲಿಗೆ ಬರೋದಿಲ್ಲ. ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು ಎಂಬುದಾಗಿ ಇಲ್ಲಿಯೇ ಉಳಿದೆ. ಆ ಮೂಲಕ ಕೆಲಸ ಮಾಡಿದೆ. ಆ ಸಂದರ್ಭದಲ್ಲಿ ಪಕ್ಷದ ಹಿರಿಯರು ಬಂದಾಗ 200, 300 ಜನರು ಸೇರ್ತಾ ಇರಲಿಲ್ಲ. ಈಗ ಭಗವಂತನ ದಯೆಯಿಂದ ಒಬ್ಬರು ಇಬ್ಬರಿದ್ದವರು ಇಷ್ಟು ಪ್ರಮಾಣದಲ್ಲಿ ಬೆಳೆದಿದೆ ಎಂಬುದಾಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟರು.

ಇವತ್ತು ಇಲ್ಲಿ ನಾವು ಇದ್ದೇವೆ ಅಂದ್ರೇ.. ಈ ಪರಿಸ್ಥಿತಿಗೆ ಲಕ್ಷಾಂತರ ಜನ ಕಾರ್ಯಕರ್ತರೇ ಕಾರಣ. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಿಲ್ಲ. ಆದ್ರೇ ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ಮಾಡಿಕೊಟ್ಟರು. ಅವರು ನೀಡಿದಂತ ಕಾರಣ ಎರಡು ವರ್ಷ ಈ ರಾಜ್ಯದ ಜನರ ಸೇವೆ ಮಾಡಿದ್ದೇನೆ ಎಂಬುದಾಗಿ ಭಾವುಕರಾಗಿ ನುಡಿದರು.

ಇಂದು ಪಕ್ಷ ರಾಜ್ಯದಲ್ಲಿ ಸದೃಡವಾಗಿ ಬೆಳೆದಿದೆ. ಈಗಾಗಲೇ ನಾವೇನು ಸಾಧನೆ ಮಾಡಿದ್ದೇವೆ ಎನ್ನುವ ಬಗ್ಗೆ ನಿಮಗೆಲ್ಲಾ ಸವಿಸ್ತಾರವಾಗಿ ವೀಡಿಯೋ ಮೂಲಕ ತೆರೆದು ಇಡಲಾಗಿದೆ. ಪಕ್ಷ ಕರ್ನಾಟಕದಲ್ಲಿ ಬೆಳೆಯೋದಕ್ಕೆ ಕಾರಣವಾಗಿದೆ ಎಂಬುದಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟವಾದಂತ ಬಹುಮತವನ್ನು ಗಳಿಸೋದಕ್ಕೆ ಸಾಧ್ಯವಾಗಲಿಲ್ಲ. ಆದ್ರೇ ಮುಂಬರುವ ದಿನಗಳಲ್ಲಿ ಎಲ್ಲರೂ ಆ ನಿಟ್ಟಿನಲ್ಲಿ ಕೆಲಸ ಮಾಡೋಣ. ನೋಡಿ ಎಲ್ಲಾ ಸಂದರ್ಭದಲ್ಲಿಯೂ ಅಗ್ನಿ ಪರೀಕ್ಷೆ. ನಾನು ಅಧಿಕಾರವಹಿಸಿಕೊಂಡಾಗ 2 ತಿಂಗಳು ಅಧಿಕಾರ ಮಾಡೋದಕ್ಕೆ ಕೇಂದ್ರ ಬಿಡಲಿಲ್ಲ. ಈಗ ಕೋವಿಡ್ ಕಾರಣದಿಂದ ಕೆಲಸ ಮಾಡುವಂತೆ ಆಯ್ತು. ನಮ್ಮ ಅಧಿಕಾರಿಗಳು, ಸಿಎಸ್ ರವಿಕುಮಾರ್ ಸಹಕಾರದಿಂದಾಗಿ ಉತ್ತಮವಾಗಿ ಕೆಲಸ ಮಾಡುವಂತೆ ಆಯ್ತು ಎಂದರು.

ಇಂದು ಊಟವಾದ ಬಳಿಕ, ರಾಜಭವನಕ್ಕೆ ತೆರಳಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದರು. ಇದು ದುಖದಿಂದ ಅಲ್ಲ. ಸಂತೋಷದಿಂದ, ಖುಷಿಯಿಂದಲೇ ಇಂದು ರಾಜಭವನಕ್ಕೆ ತೆರಳಿ, ರಾಜೀನಾಮೆ ಸಲ್ಲಿಸುತ್ತೇನೆ ಎಂಬುದಾಗಿ ತಮ್ಮ ರಾಜೀನಾಮೆಯನ್ನು ನೀಡುವುದಾಗಿ ಘೋಷಣೆ ಮಾಡಿದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags