ವಿಜಯವಾಣಿ

505k Followers

ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ನೇಮಕಾತಿ: 46 ಹುದ್ದೆಗಳಿಗೆ ಆಹ್ವಾನ

26 Jul 2021.1:36 PM

ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ)ಯಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಇಲಾಖೆಗಳ ಕೇಂದ್ರ ಕಚೇರಿ ಅಥವಾ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ದಾಖಲೆ/ ಪ್ರಮಾಣಪತ್ರಗಳು ಹಿಂದಿ ಅಥವಾ ಇಂಗ್ಲಿಷ್​ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಆ ದಾಖಲೆಗಳಿಗೆ ಗೆಜೆಟೆಡ್​ ಅಧಿಕಾರಿ/ ನೋಟರಿ ದೃಢೀಕರಣ ಮಾಡಿದ ಪ್ರತಿ ಸಲ್ಲಿಸಬೇಕು.

ಹುದ್ದೆ ವಿವರ
* ಅಸಿಸ್ಟೆಂಟ್​ ಡೈರೆಕ್ಟರ್​ 3
ರಿದಾಬಾದ್​ನ ಕೇಂದ್ರ ರಸಗೊಬ್ಬರ ಗುಣಮಟ್ಟ ನಿಯಂತ್ರಣ ಮತ್ತು ತರಬೇತಿ ಸಂಸ್ಥೆ (ಸಿಎ​ಕ್ಯುಸಿಟಿಐ)ಯಲ್ಲಿ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ.

* ಅಸಿಸ್ಟೆಂಟ್​ ಡೈರೆಕ್ಟರ್​ (ವೀಡ್​ ಸೈನ್ಸ್​) 1
ರಿದಾಬಾದ್​ನಲ್ಲಿರುವ ಸಸ್ಯ ಸಂರಕ್ಷಣೆ ಮತ್ತು ಕ್ವಾರಂಟೈನ್​ ಹಾಗೂ ಶೇಖರಣಾ ನಿರ್ದೇಶನಾಲಯದಲ್ಲಿ ಹುದ್ದೆ ಇದ್ದು, ಕೃಷಿ (ಅಗ್ರೋನೋಮಿ)ಯಲ್ಲಿ ಎಂಎಸ್ಸಿ ಪದವಿ ಪಡೆದಿರುವ 3 ವರ್ಷದ ವೃತ್ತಿ ಅನುಭವ ಇರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು.

* ರಿಸರ್ಚ್​ ಆಫೀಸರ್​ (ಇಂಪ್ಲಿಮೆಂಟೇಷನ್​) 8
ಗೃಹ ವ್ಯವಹಾರ ಸಚಿವಾಲಯದ ಅಧಿಕೃತ ಭಾಷೆಗಳ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇಂಗ್ಲಿಷ್​ ಒಂದು ವಿಷಯವಾಗಿ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಗರಿಷ್ಠ 30 ವರ್ಷ ವಯೋಮಿತಿ ನಿಗದಿಯಾಗಿದೆ.

* ಸೀನಿಯರ್​ ಗ್ರೇಡ್​ (ಮಾಹಿತಿ ಮತ್ತು ಪ್ರಸಾರ ಸೇವೆ ಹಿಂದಿ, ಇಂಗ್ಲಿಷ್​, ಪಂಜಾಬಿ, ತೆಲುಗು, ಒರಿಯಾ, ಬೆಂಗಾಲಿ, ಮರಾಠಿ, ಗುಜರಾತಿ, ಅಸ್ಸಾಮಿ, ಮಣಿಪುರಿ) 34
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಭಾರತೀಯ ಮಾಹಿತಿ ಸೇವೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮಾಸ್​ಕಮ್ಯುನಿಕೇಷನ್​, ರ್ಜನಲಿಸಂನಲ್ಲಿ ಪದವಿ/ ಡಿಪ್ಲೊಮಾ/ ಸ್ನಾತಕೋತ್ತರ ಪದವಿ ಪಡೆದಿರುವ ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಒಬ್ಬ ಅಭ್ಯರ್ಥಿ ಎಷ್ಟು ಭಾಷೆಗೆ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು, ಆ ಭಾಷೆಯನ್ನು 10ನೇ ತರಗತಿ ವರೆಗೆ ಅಧ್ಯಯನ ಮಾಡಿರಬೇಕು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ವೃತ್ತಿ ಅನುಭವ ಆಧರಿಸಿ ಶಾರ್ಟ್​ ಲಿಸ್ಟ್​ ಸಿದ್ಧಪಡಿಸಲಾಗುವುದು. ನಂತರ ನೇಮಕಾತಿ ಪರೀೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಥವಾ ಕೇವಲ ಸಂದರ್ಶನ ಮೂಲಕವೂ ಆಯ್ಕೆ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 12.8.2021
ಅಧಿಸೂಚನೆಗೆ: https://bit.ly/371oUZc
ಮಾಹಿತಿಗೆ: https://www.upsc.gov.in

ಐಪಿಎಸ್​ ಅಧಿಕಾರಿ ಚನ್ನಣ್ಣನವರ್ ನನ್ನಣ್ಣ ಎಂದು ಭಕ್ತರಿಂದ ಲಕ್ಷ ಲಕ್ಷ ಲಪಟಾಯಿಸಿ ಎಸ್ಕೇಪ್​ ಆದ ಅರ್ಚಕ! 20 ಗುಂಡು ಎದೆ ಸೀಳಿದರೂ 17 ಪಾಕಿಗಳ ಸದೆಬಡಿದ ಯೋಧನ ಮೈ ನವಿರೇಳಿಸುವ ಘಟನೆಯಿದು…
Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags