Kannada News Now

1.8M Followers

BIGG BREAKING NEWS : ಹಿರಿಯ ನಾಗರೀಕರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಗಿಫ್ಟ್ : ಗೌರವ ಧನ ಹೆಚ್ಚಳ

28 Jul 2021.2:14 PM

ಬೆಂಗಳೂರು : ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ, ಹಿರಿಯ ನಾಗರೀಕರಿಗೆ ಸಂದ್ಯಾಸುರಕ್ಷಾ ಯೋಜನೆಯ ಹಣವನ್ನು ರೂ.1000 ರಿಂದ ರೂ.1,200ಕ್ಕೆ ಹೆಚ್ಚಳ ಸೇರಿದಂತೆ ವಿವಿಧ ಭರ್ಜರಿ ಸಿಹಿಸುದ್ದಿಯನ್ನು ನೂತನ ಸಿಎಂ ಆಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ, ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಮೊದಲ ಕಾರ್ಯ ಕಡತಗಳಿಗೆ ಚುರುಕು ಮುಟ್ಟಿಸೋದು ಆಗಿದೆ. ಆ ಕೆಲಸವನ್ನು ಮೊದಲು ಮಾಡುತ್ತಿದ್ದೇನೆ. ಆದಷ್ಟು ಬೇಗ ಬಾಕಿ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ತಿಳಿಸಿದರು.

ಇನ್ನೂ ನಾನು ಜನಪರ ಕಾಳಜಿಯಿಂದ ಕೆಲಸ ಮಾಡೋ ಸಲುವಾಗಿ ಸಿಎಂ ಸ್ಥಾನಕ್ಕೆ ಬಂದಿದ್ದೇನೆ.

ಇದರ ಮೊದಲ ಭಾಗವಾಗಿ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ವಿದ್ಯಾರ್ಥಿ ವೇತನವನ್ನು ಘೋಷಣೆ ಮಾಡುತ್ತಿದ್ದೇನೆ. ಹಿರಿಯ ನಾಗರೀಕರಿಗೆ ನೀಡಲಾಗುತ್ತಿದ್ದಂತ ಸಂದ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ರೂ.1,000ದಿಂದ ರೂ.1,200ಕ್ಕೆ ಹೆಚ್ಚಳ ಮಾಡುತ್ತಿದ್ದೇನೆ. ವಿಧವಾ ವೇತನ ಹಾಲಿ ಇರುವಂತ 500 ರೂ ಗಳನ್ನು 800ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಅಂಗವಿಕಲರ ವೇತನದಡಿಯಲ್ಲಿ ಶೇ.40 ರಿಂದ 75ರಷ್ಟು ಅಂಗವಿಕಲರಿಗೆ ರೂ.600ರಿಂದ 800ಕ್ಕೆ ಏರಿಕೆ ಮಾಡಲಾಗುತ್ತಿದೆ. 3.66 ಸಾವಿರ ಅಂಗವಿಕಲರಿಗೆ ಇದರಿಂದ ಪ್ರಯೋಜನ ಆಗಲಿದೆ ಎಂಬುದಾಗಿ ತಿಳಿಸಿದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags