Kannada News Now

1.8M Followers

Degree College : ಆ.4ರಿಂದ ಡಿಗ್ರಿ ಕಾಲೇಜುಗಳ ಆರಂಭ, ಪ್ರವೇಶ ಪ್ರಕ್ರಿಯೆಯೂ ಪ್ರಾರಂಭ : ಹೀಗಿದೆ ಪದವಿ, ಪಿಜಿ ಪ್ರವೇಶ ಶುಲ್ಕ

01 Aug 2021.3:59 PM

ಬೆಂಗಳೂರು : ಆಗಸ್ಟ್ 4 ರಿಂದ ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್ ಗಳ ( Degree College Admission ) ಪ್ರವೇಶಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ( Department of Collegiate Education ) ಅನುಮತಿ ನೀಡಿದೆ.

BIGNEWS: ಅಪ್ರಾಪ್ತೆಯ ಕೈಹಿಡಿದು, ಪ್ರೀತಿಯನ್ನು ಹೇಳಿಕೊಳ್ಳುವುದು ಲೈಂಗಿಕ ಕಿರುಕುಳವಲ್ಲ : POCSO ನ್ಯಾಯಾಲಯ ಮಹತ್ವದ ಅಭಿಪ್ರಾಯ

ಆಗಸ್ಟ್ 4 ರಿಂದ ಎಲ್ಲ ಪದವಿ ಕಾಲೇಜುಗಳು 2021-22 ನೇ ಸಾಲಿನ ಪ್ರಥಮ ವರ್ಷದ ಪದವಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಅವಕಾಶ ನೀಡಲಾಗಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉನ್ನತ ಶಿಕ್ಷಣ ಇಲಾಖೆಯು ಇ ಆಡಳಿತ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದಲ್ಲಿ ಸಮಗ್ರ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆ ಯಡಿ ಪ್ರವೇಶ ಘಟಕ ರೂಪಿಸಿದೆ.

ಈ ಘಟಕದ ವೆಬ್ ಸೈಟ್ https://uuc.ms.karnataka.gov.in ಮೂಲಕವೇ ಎಲ್ಲ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ನಡೆಸಬೇಕೆಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದ ಅನುದಾನರಹಿತ 'ಶಾಲಾ ಶಿಕ್ಷಕರು, ಸಿಬ್ಬಂದಿ'ಗಳಿಗೆ ಸಿಹಿಸುದ್ದಿ : 'ಕೊರೋನಾ ವಿಶೇಷ ಪರಿಹಾರ ಧನ' ಬಿಡುಗಡೆಗೊಳಿಸಿ ಸರ್ಕಾರ ಆದೇಶ

ಇನ್ನು ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಪ್ರವೇಶಕ್ಕೆ ಸುಮಾರು 900 ರೂ. ಸ್ನಾತಕೋತ್ತರ ಕೋರ್ಸ್ ಗಳ ( PG Course ) ಪ್ರವೇಶಕ್ಕೆ 2,800 ರೂ. ಪ್ರವೇಶ ಶುಲ್ಕವನ್ನು ( Admission Fee ) ನಿಗದಿಪಡಿಸಲಾಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags