Kannada News Now

1.8M Followers

School Re-Open : ಶಾಲೆ ರೀ ಓಪನ್‍ಗೆ ತಜ್ಞರಿಂದ ಗ್ರೀನ್ ಸಿಗ್ನಲ್ : ಆದರೆ ಈ ಷರತ್ತುಗಳು ಅನ್ವಯ

02 Aug 2021.06:47 AM

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಶಾಲೆಗಳು ಶುರುವಾಗೋದು ಅನುಮಾನ ಮೂಡಿಸಿದ್ದು, ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ಬೇಸರ ಮೂಡಿಸುತ್ತಿದೆ ಕೂಡ. ಆನ್‌ಲೈನ್‌ ತರಗತಿಯಿಂದಾಗಿ ಮಕ್ಕಳು ಮೊಬೈಲ್‌ ಅನ್ನು ತೆಗೆದುಕೊಳ್ಳುವುದಕ್ಕೂ ಕೂಡ ಆಗದೇ ಇರುವುದು ಹೆಚ್ಚಾಗುತ್ತಿದೆ. ಈ ನಡುವೆ ಸಲಹಾ ಸಮಿತಿ ಸದಸ್ಯ ಮತ್ತು ಹಿರಿಯ ತಜ್ಞ ವೈದ್ಯರಾದ ಡಾ. ಗಿರಿಧರ್ ಬಾಬು ಸೂಚನೆ ನೀಡಿದ್ದು, ಅವುಗಳು ಹೀಗಿದೆ.

ಸ್ಕೂಲ್ ಓಪನ್ ಆದರೆ ನಿಯಮಗಳು ಹೇಗಿರಬೇಕು ಗೊತ್ತಾ?

. ಯುನಿವರ್ಸಲ್ ಫೇಸ್ ಮಾಸ್ಕ್ ಬಳಕೆ
, ಕಿಕ್ಕಿರಿದ ತರಗತಿಗಳು ಮತ್ತು ಸಾಮಾನ್ಯ ಪ್ರದೇಶಗಳನ್ನು ಕಡಿಮೆ ಮಾಡುವ ಮೂಲಕ ದೈಹಿಕ ಅಂತರವನ್ನು ಹೆಚ್ಚಿಸುವುದು
. ಜನಸಂದಣಿಯನ್ನು ತಡೆಯಲು ಹೈಬ್ರಿಡ್ ಹಾಜರಾತಿ ಮಾದರಿಗಳನ್ನು ಬಳಸುವುದು,
ಕೋಣೆಯಲ್ಲಿ ಗಾಳಿಯು ಹೆಚ್ಚು ಇರುವಂತೆ ನೋಡಿಕೊಳ್ಳುವುದು
ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಪ್ರತ್ಯೇಕಿಸಲು ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸುವುದು
ಆನ್‍ಲೈನ್ ಶಿಕ್ಷಣಕ್ಕಾಗಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆಯ್ಕೆಗಳನ್ನು ನೀಡಬೇಕು
ಸಿಬ್ಬಂದಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags