Kannada News Now

1.8M Followers

Unlock 4.0 rules for Karnataka : ರಾಜ್ಯ ಸರ್ಕಾರದಿಂದ 'ಅನ್ ಲಾಕ್ 4.0' ಮಾರ್ಗಸೂಚಿ ಪ್ರಕಟ : ಇಲ್ಲಿದೆ ಪುಲ್ ಡೀಟೆಲ್ಸ್

18 Jul 2021.2:33 PM

ವರದಿ : ವಸಂತ ಬಿ ಈಶ್ವರಗೆರೆ

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಇಂತಹ ಸಭೆಯಲ್ಲಿ ಕೈಗೊಂಡಂತ ನಿರ್ಣಯಗಳ ಕುರಿತಂತೆ ರಾಜ್ಯ ಸರ್ಕಾರದಿಂದ Karnataka Unlock 4.0 ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

BIGG BREAKING NEWS : ಜುಲೈ.26ರಿಂದ 'ಪದವಿ ಕಾಲೇಜು' ಆರಂಭಕ್ಕೆ, ನಾಳೆಯಿಂದ 'ಚಿತ್ರಮಂದಿರ'ಗಳ ಓಪನ್ ಗೆ 'ರಾಜ್ಯ ಸರ್ಕಾರ' ಅನುಮತಿ

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ನೂತನ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳ ಆದೇಶವನ್ನು ಹೊರಡಿಸಿದ್ದು, ಈ Unlock 4.0 ಮಾರ್ಗಸೂಚಿಯಂತೆ ರಾಜ್ಯಾಧ್ಯಂತ ರಾತ್ರಿ ಕರ್ಪ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಗಧಿ ಪಡಿಸಲಾಗಿದೆ.

ಚಿಕ್ಕಮಗಳೂರು : 'ಚಾರ್ಮಾಡಿ ಘಾಟಿ ರಸ್ತೆ'ಯಲ್ಲೇ 'ಪುಂಡರ ಮೋಜು-ಮಸ್ತಿ', 'ಟ್ರಾಫಿಕ್ ಜಾಮ್'ನಿಂದ 'ವಾಹನ ಸವಾರ'ರು ಹೈರಾಣು

ಇನ್ನೂ ಸಿನಿಮಾ ಹಾಲ್, ಮಲ್ಟಿ ಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ ಮತ್ತು ಸಿಮಿಲರ್ ಪ್ಲೇಸ್ ಗಳನ್ನು ಶೇ.50ರಷ್ಟು ಜನರೊಂದಿಗೆ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.

BREAKING NEWS : 'ರಾಜ್ಯ ಸರ್ಕಾರ'ದಿಂದ ನಾಳೆಯಿಂದ 'ಥಿಯೇಟರ್', ಜು.26ರಿಂದ 'ಪದವಿ ಕಾಲೇಜು'ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್

ಇದಷ್ಟೇ ಅಲ್ಲದೇ ಕಾಲೇಜ್ ಮತ್ತು ಇನ್ ಸ್ಟಿಟ್ಯೂಷನ್ ಗಳನ್ನು ಡಿಪಾರ್ಟಮ್ಮೆಂಟ್ ಆಫ್ ಹೈಯರ್ ಎಜುಕೇಷನ್ ನಿರ್ದೇಶನದಂತೆ ದಿನಾಂಕ 26-07-2021ರಿಂದ ತೆರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ಕೋವಿಡ್ ಮಾರ್ಗಸೂಚಿ ಕ್ರಮಗಳ ಪಾಲನೆಯೊಂದಿಗೆ ತೆರೆಯೋದಕ್ಕೆ ಅನುಮತಿಸಿದೆ. ಅಲ್ಲದೇ ಕಾಲೇಜಿಗೆ ಆಗಮಿಸುವಂತ ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತು ನಾನ್ ಟೀಚಿಂಗ್ ಸ್ಟಾಫ್ ಗಳು ಕಡ್ಡಾಯವಾಗಿ ಒಂದು ಡೋಸ್ ಕೊರೋನಾ ಲಸಿಕೆ ಪಡೆದಿರೋ ಮಾನದಂಡವನ್ನು ನಿಗದಿಪಡಿಸಿದೆ. ವಿದ್ಯಾರ್ಥಿಗಳ ಹಾಜರಾತಿ ಐಚ್ಛಿಕವಾಗಿರುತ್ತದೆ ಎಂದು ತಿಳಿಸಿದೆ.

ಟೋಕಿಯೊ ಒಲಿಂಪಿಕ್ಸ್ ಗ್ರಾಮದಲ್ಲಿ ಇಬ್ಬರು ಆಥ್ಲೇಟ್ಸ್ ಗಳಿಗೆ ಕೊರೋನಾ ಪಾಸಿಟಿವ್

ದೀರ್ಘಕಾಲೀನ ತಾಂತ್ರಿಕ ಕೋರ್ಸ್ ಗಳು ಸೇರಿದಂತೆ ಎಲ್ಲಾ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲನೆಯ ನಿಯಮಕ್ಕೆ ಒಳಪಟ್ಟು ಅನುಮತಿಸಲಾಗಿದೆ. ಆದ್ರೇ ವಿದ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ /ಇತರ ಸಿಬ್ಬಂದಿ ಕೋವಿಡ್-19 ಲಸಿಕೆಯ ಒಂದು ಡೋಸ್ ಗೆ ಪಡೆದಿರೋದಿಗೆ ಮಾತ್ರ ಕಾಲೇಜಿಗೆ ಹಾಜರಾಗಲು ಅನುಮತಿಸಲಾಗಿದೆ.

ಬಳ್ಳಾರಿಯಲ್ಲಿ ಭಾರೀ ಮಳೆಯ ನೀರಿನಲ್ಲಿ ಕೊಚ್ಚಿಹೋದ ಮೇಕೆಗಳು.!

ಮುಂದಿನ ಆದೇಶದವರೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವಂತ ಪ್ರಯಾಣಿಕರಿಗೆ ದಿನಾಂಕ 03-07 ರ ಆದೇಶದಲ್ಲಿ ಜಾರಿಗೊಳಿಸಿದಂತ ಮಾರ್ಗಸೂಚಿ ಕ್ರಮಗಳೇ ಮುಂದುವರೆಯಲಿವೆ. ಇದೀಗ ಹೊರಡಿಸಿರುವಂತ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳು ದಿನಾಂಕ 02-08-2021ರವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

( Unlock 4.0 rules for Karnataka : What is allowed, what is not )



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags