News18 ಕನ್ನಡ

400k Followers

Karnataka 2nd PUC Results 2021: 600ಕ್ಕೆ 600 ಅಂಕ ಪಡೆದ 2,239 ವಿದ್ಯಾರ್ಥಿಗಳು, ಫಲಿತಾಂಶದ ಸಂಪೂರ್ಣ ವಿವರ ಇಲ್ಲಿದೆ

20 Jul 2021.4:31 PM

2020-21ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್​​ಪ್ರಕಟಸಿದರು. ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ವಿವರಿಸಿದರು. ಎಸ್ ಎಸ್ ಎಲ್ ಸಿ, ಮೊದಲ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆ ಅಂಕ ಇದರ ಜೊತೆ ಕೃಪಾಂಕ ನೀಡಲಾಗಿದೆ. ಈ ಮೂರು ಅಂಶ ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.

ಎಸ್ ಎಸ್‌ಎಲ್‌ಸಿ ಯ ಶೇ.45ರಷ್ಟು, ಮೊದಲ ಪಿಯುಸಿ ಶೇ. 45, ದ್ವಿತೀಯ ಪಿಯುಸಿ ಶೇ.10, ಶೇ.5ರಷ್ಟು ಕೃಪಾಂಕ ನೀಡಿ ಫಲಿತಾಂಶ ನೀಡಲಾಗಿದೆ. ಸ್ಯಾಟ್ಸ್ ನಲ್ಲಿ ನೊಂದಾಯಿತಿ ವಿದ್ಯಾರ್ಥಿಗಳಿಗೆ ವವರ ಮೊಬೈಲ್ ಗೆ ಎಸ್ ಎಂ ಎಸ್ ಬರುತ್ತೆ. ತಜ್ಞರ‌ ವರದಿ ಆಧಾರದ ಮೇಲೆ ಫಲಿತಾಂಶ ನೀಡಲಾಗುತ್ತಿದೆ. 3 ಲಕ್ಷ 35 ಸಾವಿರ 138 ವಿದ್ಯಾರ್ಥಿಗಳು, 3 ಲಕ್ಷ 31 ಸಾವಿರದ 359 ವಿದ್ಯಾರ್ಥಿನಿಯರು ಒಟ್ಟು ಸೇರಿ ಒಟ್ಟು ಆರು ಲಕ್ಷ 66 ಸಾವಿರ 497 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. ಇನ್ನು ಹಳೆ ವಿದ್ಯಾರ್ಥಿಗಳು ಸೇರಿದಂತೆ 4 ಲಕ್ಷದ 50 ಸಾವಿರದ 706 ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣರಾಗಿದ್ದಾರೆ.

Karnataka 2nd PUC Results 2021:ದ್ವಿತೀಯ ಪಿಯು ಫಲಿತಾಂಶವನ್ನು ಸುಲಭವಾಗಿ ನೋಡುವ ವಿಧಾನ ಇಲ್ಲಿದೆ

ಡಿಸ್ಟಿಕ್ಷನ್ ಪಡೆದ ವಿದ್ಯಾರ್ಥಿಗಳು- 95 ಸಾವಿರದ 628 ವಿದ್ಯಾರ್ಥಿಗಳು
ಪ್ರಥಮ ದರ್ಜೆ- 3 ಲಕ್ಷದ 55 ಸಾವಿರದ 78 ವಿದ್ಯಾರ್ಥಿಗಳು
ದ್ವಿತೀಯ ದರ್ಜೆ- 1 ಲಕ್ಷದ 47 ಸಾವಿರದ 55 ವಿದ್ಯಾರ್ಥಿಗಳುತೃತೀಯ ದರ್ಜೆ- 68 ಸಾವಿರದ 729 ವಿದ್ಯಾರ್ಥಿಗಳು
ಫಲಿತಾಂಶ ತಡೆ ಹಿಡಿಯಲಾದ ವಿದ್ಯಾರ್ಥಿಗಳ ಸಂಖ್ಯೆ- 07
ಒಟ್ಟು 6 ಲಕ್ಷದ 66 ಸಾವಿರದ 497 ವಿದ್ಯಾರ್ಥಿಗಳು ಪಾಸ್

600 ಕ್ಕೆ 600 ಅಂಕ‌ ಗಳಿಕೆ


  1. ದಕ್ಷಿಣ ಕನ್ನಡ 445 ವಿದ್ಯಾರ್ಥಿಗಳು

  2. ಬೆಂಗಳೂರು ದಕ್ಷಿಣ 307

  3. ಬೆಂಗಳೂರು ಉತ್ತರ 261

  4. ಉಡುಪಿ 149

  5. ಹಾಸನ 104



2239 ವಿದ್ಯಾರ್ಥಿಗಳು 600ಕ್ಕೆ 600 ಅಂಕ‌ ಗಳಿಸಿದ್ದಾರೆ

ಕಲಾವಿಭಾಗ-18

ವಾಣಿಜ್ಯ ವಿಭಾಗ-292

ವಿಜ್ಞಾನ-1929

ಫಲಿತಾಂಶ ಬೇಡ ಎನ್ನುವವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪೂರಕ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31-07-21
ಕಚೇರಿಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ-02-08-21

ಪೂರಕ ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಆಗಸ್ಟ್ 19ರಿಂದ ಸೆ.3 ರವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ಇದರ ಮಧ್ಯೆ ಸಿಇಟಿ ಪರೀಕ್ಷೆ ಬರುವುದರಿಂದ ಸೆಪ್ಟೆಂಬರ್ ವರೆಗೆ ಪರೀಕ್ಷೆ ಮಾಡಲು ನಿರ್ಧಾರ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags