Kannada News Now

1.8M Followers

BIGGNEWS : ದೇಶದಲ್ಲಿ ಇದೇ ಮೊದಲು ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇ. 1 ರಷ್ಟು ಮೀಸಲಾತಿ, ರಾಜ್ಯ ಸರ್ಕಾರದಿಂದ ಆದೇಶ

21 Jul 2021.07:59 AM

ಬೆಂಗಳೂರು: ಸರ್ಕಾರಿ ಉದ್ಯೋಗಗಳಲ್ಲಿ ಟ್ರಾನ್ಸ್ ಜೆಂಡರ್ ಅಭ್ಯರ್ಥಿಗಳಿಗೆ 1 ಪ್ರತಿಶತ (ಅಡ್ಡವಾದ) ಮೀಸಲಾತಿಯನ್ನು ಒದಗಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಅಂತ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಟ್ರಾನ್ಸ್ ಜೆಂಡರ್ ಅಭ್ಯರ್ಥಿಗಳಿಗೆ ಈ ಮೀಸಲಾತಿಯು ಸಾಮಾನ್ಯ ಮೆರಿಟ್, ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗಗಳಲ್ಲಿ ಮೀಸಲಾತಿಗಳನ್ನು ಪಡೆದುಕೊಳ್ಳಲಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನು ಒಳಗೊಂಡಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ಜುಲೈ 6 ರಂದು ತೃತೀಯ ಲಿಂಗಿಗಳಿಗೆ ನೀಡುವ ಮೀಸಲಾತಿಗೆ ಸಂಬಂಧಪಟ್ಟಂಥೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದೆ. ಇದೇ ವೇಳೆ ಆ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು 2021 ಕ್ಕೆ ತಿದ್ದುಪಡಿ ಮಾಡಲಾಗಿದೆ.

ತಿದ್ದುಪಡಿಯ ಮೂಲಕ, ಲಿಂಗಪರಿವರ್ತಿತ ಸಮುದಾಯಕ್ಕೆ 1 ಪ್ರತಿಶತ ಅಡ್ಡವಾದ ಮೀಸಲಾತಿಯನ್ನು ಒದಗಿಸಲು ನಿಯಮ 9, ಉಪ ನಿಯಮ (1) (ಡಿ) ಅನ್ನು ಅಳವಡಿಸಲಾಗಿದೆ ಅಂತ ತಿಳಿಸಿದೆ.

ಅನುಮಾನ ಮೂಡಿಸಿದ ದ್ವಿತೀಯ ಪಿಯುಸಿ ಫಲಿತಾಂಶ, ವಿದ್ಯಾರ್ಥಿಗಳಿಗೆ ಮನಸ್ಸಿಗೆ ಬಂದ ಹಾಗೇ ಅಂಕ ನೀಡಿದ ಕಾಲೇಜುಗಳು….!?

ಗಮನಿಸಿ: ನಿಮ್ಮ ಆಧಾರ್ ಕಾರ್ಡ್‌ ಲಾಕ್-ಅನ್‌ಲಾಕ್‌ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸುಲಭವಾದ ಪ್ರಕ್ರಿಯೆ ಬಗ್ಗೆ ಮಾಹಿತಿ

ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಮತ್ತೆ ನಡೆಯಲಿರುವ ಪರೀಕ್ಷೆ ವೇಳಾಪಟ್ಟಿ ಹೀಗಿದೆ

ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರ ಆರ್ಭಟ : ಪೊಲೀಸ್ ಕಾನ್​​ಸ್ಟೇಬಲ್​ ಪತ್ನಿ, ಪುತ್ರಿಯ ಮೇಲೆ ಗುಂಡಿನ ದಾಳಿ







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags