ಬಿಸಿ ಸುದ್ದಿ

169k Followers

ಜುಲೈ 25 ರಂದು ನಡೆಯುವ ಕೆ-ಸೆಟ್ ಪರೀಕ್ಷೆ: ದಾವಣಗೆರೆಯಲ್ಲಿ 9 ಉಪಕೇಂದ್ರಗಳು.!

23 Jul 2021.07:34 AM

ದಾವಣಗೆರೆ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ (ಕೆ-ಸೆಟ್) ಪರೀಕ್ಷೆಯು ಜುಲೈ 25 ರಂದು ದಾವಣಗೆರೆ ನಗರದ 09 ವಿವಿಧ ಉಪಕೇಂದ್ರಗಳಲ್ಲಿ ನಡೆಯಲಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳೇ ಕುಡಿಯಲು ನೀರಿನ ಬಾಟಲಿ ತರಬೇಕು. ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಹಾಗೂ ಇನ್ನಿತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಅಂತರ್ಜಾಲ ತಾಣದಲ್ಲಿ ಪ್ರವೇಶ ಪತ್ರ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಅಂತರ್ಜಾಲ ತಾಣ https://kset.uni-mysore.ac.inನಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು.ಭಾವಚಿತ್ರವಿರುವ ಮೂಲ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಕು.

ಪ್ರವೇಶಪತ್ರವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ದಾವಣಗೆರೆ ವಿಶ್ವವಿದ್ಯಾಲಯ ಕೆ-ಸೆಟ್ ನೋಡಲ್ ಅಧಿಕಾರಿ ಪ್ರೊ.ಜೆ.ಕೆ.ರಾಜು ಎಂದು ತಿಳಿಸಿದ್ದಾರೆ.

ದಾವಣಗೆರೆ ನಗರದ ಕೆ-ಸೆಟ್ ಪರೀಕ್ಷಾ ಉಪಕೇಂದ್ರಗಳು: 1) ಎಸ್.ಬಿ.ಸಿ. ಫಸ್ಟ್ ಗ್ರೇಡ್ ಕಾಲೇಜ್ ಫಾರ್ ವೂಮೆನ್(ಅಥಣಿ ಕಾಲೇಜ್)ಎಸ್.ಎಸ್ ಲೇಔಟ್, 'ಎ' ಬ್ಲಾಕ್, 2) ಬಿ.ಎಸ್ ಚನ್ನಬಸಪ್ಪ ಫಸ್ಟ್ ಗ್ರೇಡ್ ಕಾಲೇಜ್ ಎಸ್.ಎಸ್ ಲೇಔಟ್, 'ಎ' ಬ್ಲಾಕ್, 3)ಬಾಪೂಜಿ ಇನ್‍ಸಿ ್ಟಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಾಜಿ (ಬಿ.ಐ.ಇ.ಟಿ.) ಶ್ಯಾಮನೂರ್ ರೋಡ್, 4)ಸರಕಾರಿ ಪ್ರಥಮ ದರ್ಜೆ ಕಾಲೇಜ್(ಜಿ.ಎಫ್.ಜಿ.ಸಿ) ಡೆಂಟಲ್ ಕಾಲೇಜ್ ರೋಡ್, 5)ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಡೆಂಟಲ್ ಕಾಲೇಜ್ ರೋಡ್, 6)ಎ.ವಿ.ಕಮಲಮ್ಮ ಕಾಲೇಜ್ ಫಾರ್ ವೂಮೆನ್ ಅಕ್ಕಮಹಾದೇವಿ ರೋಡ್, 7) ಜಿ.ಎಂ. ಇನ್‍ಸಿ ್ಟಟ್ಯೂಟ್ ಆಫ್ ಟೆಕ್ನಾಲಾಜಿ ಪಿ.ಬಿ ರೋಡ್, 8) ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಪಿ.ಬಿ ರೋಡ್, 9) ದವನ್-ನೂತನ್ ಅಲೆಯನ್ಸ್, (ಡಿಎನ್‍ಎ), ನೂತನ್ ಇನ್‍ಸ್ಟಿಟ್ಯೂಟ್‍ಆಫ್ ಮ್ಯಾನೇಜ್‍ಮೆಂಟ್ ಬಿಐಇಟಿ ರೋಡ್.

Post navigation

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,653 ಮಂದಿಗೆ ಸೋಂಕು ತಗುಲಿರುವುದು ದೃಢ ನಿನ್ನೆ ಬಿಜಿಕೆರೆಯಲ್ಲಿ 37 ಮಿ.ಮೀ ಮಳೆ ಇತರೆ ಭಾಗಗಳಲ್ಲಿ ಬಿದ್ದ ಮಳೆ ವರದಿ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: BC Suddi

#Hashtags