ಕನ್ನಡದುನಿಯಾ

1.6M Followers

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಆಯಿಲ್

24 Jul 2021.07:06 AM

ಉದ್ಯೋಗಕ್ಕಾಗಿ ಅರಸುತ್ತಿರುವ ಇಂಜಿನಿಯರ್​ ಪದವೀಧರರಿಗೆ ಶುಭ ಸುದ್ದಿಯೊಂದು ಕಾದಿದೆ. ಇಂಡಿಯನ್​ ಆಯಿಲ್​ ಕಾರ್ಪೋರೇಷನ್​​​ ಇಂಜಿನಿಯರ್​ ಪದವೀಧರರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು - www.iocl.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕೆಮಿಕಲ್​ ಇಂಜಿನಿಯರಿಂಗ್​, ಸಿವಿಲ್​ ಇಂಜಿನಿಯರಿಂಗ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​, ಇನ್​ಸ್ಟ್ರುಮೆಂಟೇಷನ್​​ ಇಂಜಿನಿಯರಿಂಗ್​ ಹಾಗೂ ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 26 ಕೊನೆಯ ದಿನಾಂಕವಾಗಿದೆ.

ಇಂಡಿಯನ್​ ಆಯಿಲ್​ ಕಾರ್ಪೋರೇಷನ್​​ ಹುದ್ದೆಗೆ ಅರ್ಜಿ ಸಲ್ಲಿಸುವವರು ಈ ಹಂತಗಳನ್ನ ಅನುಸರಿಸಿ :

www.iocl.com ವೆಬ್​ಸೈಟ್​ಗೆ ಭೇಟಿ ನೀಡಿ.

ಹೋಮ್​ ಪೇಜ್​ನಲ್ಲಿ 'What's New' ಮೇಲೆ ಕ್ಲಿಕ್​ ಮಾಡಿ.

ಇಲ್ಲಿ Recruitment of Engineers/Officers and Engagement as Graduate Apprentice Engineers in IOCL through GATE-2021'. ಎಂಬ ಆಯ್ಕೆ ಮೇಲೆ ಕ್ಲಿಕ್​ ಮಾಡಿ.

ಇಲ್ಲಿ ನಿಮಗೆ Click Here to Apply ಎಂಬ ಆಯ್ಕೆ ಕಾಣಸಿಗಲಿದೆ. ಇದರ ಮೇಲೆ ಕ್ಲಿಕ್​ ಮಾಡಿ.

New Registration ಆಯ್ಕೆಯ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಿ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಟೆಕ್​/ ಬಿಇ ವಿಭಾಗದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನ ಹೊಂದಿರಬೇಕು. ಇದು ಮಾತ್ರವಲ್ಲದೇ GATE 2021 ಪರೀಕ್ಷೆಯ ಒಂದು ವಿಭಾಗದಲ್ಲಿ ಅರ್ಹತೆ ಪಡೆದಿರಬೇಕು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags