ಕನ್ನಡದುನಿಯಾ

1.6M Followers

1 ರಿಂದ 10 ನೇ ತರಗತಿಯ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

24 Jul 2021.05:58 AM

ಧಾರವಾಡ: 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (1 ರಿಂದ 10 ನೇ ತರಗತಿ ವರೆಗೆ) ವಿದ್ಯಾರ್ಥಿ ವೇತನಕ್ಕಾಗಿ ssp.karnataka.gov.in ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ವಿದ್ಯಾರ್ಥಿ ವೇತನ ಮಂಜೂರು ಮಾಡಲು ಪರಿಶಿಷ್ಟ ಜಾತಿ, ಪ.ವರ್ಗದ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿ ಪ್ರಕ್ರಿಯೆಗೆ ವೆಬ್ ಸೈಟ್ ವಿಳಾಸ ssp.karnataka.gov.in ನಲ್ಲಿ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುವುದು.

ಒಂದು ವೇಳೆ ಬೇರೆ ಸ್ಕೀಂನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಯ ಶಿಷ್ಯ ವೇತನ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

Pre matric (I & X) scholarship For SC Students-Karnataka. Prematric (I & X) scholarship For ST Students-Karnataka ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಹಾಯವಾಣಿ ಸಮಾಜ ಕಲ್ಯಾಣ ಇಲಾಖೆ-080-22340956, 9480843005, ಪರಿಶಿಷ್ಟ ವರ್ಗಗಳ ನಿರ್ದೇಶನಾಲಯ-080-22261789 ನ್ನು ಸಂಪರ್ಕಿಸಬಹುದು.

2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಧಾರವಾಡ ತಾಲೂಕಿನ ವಿವಿಧ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳು ಮೇಲೆ ನಮೂದಿಸಿದ ನಿರ್ದೇಶನಗಳಂತೆ ಆನ್‍ಲೈನ್‍ನಲ್ಲಿ ತುಂಬಿದ ಅರ್ಜಿಯ ಪ್ರತಿಯನ್ನು ಪಡೆದು ಅವಶ್ಯಕ ದಾಖಲಾತಿಗಳೊಂದಿಗೆ ಸಂಬಂದಿಸಿದ ಶಾಲಾ ಮುಖ್ಯೋಪಾಧ್ಯಯರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ:0836-2440194 ಗೆ ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags