TV9 ಕನ್ನಡ

371k Followers

SBI Apprentice Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 6100 ಅಪ್ರೆಂಟಿಸ್ ಹುದ್ದೆಗಳಿಗೆ ಆಹ್ವಾನ

24 Jul 2021.1:41 PM

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ 6100ರಷ್ಟು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆ ಬಗ್ಗೆ ವಿವರಗಳು ಈ ಲೇಖನದಲ್ಲಿ ಇವೆ, ಅರ್ಜಿ ಹಾಕುವ ಮುನ್ನ ಗಮನಿಸಿ.

ಅಪ್ರೆಂಟಿಸ್ ಕಾಯ್ದೆ 1961ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಅಪ್ರೆಂಟಿಸ್​ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತದಾದ್ಯಂತ 6100ರಷ್ಟು ಹೆಚ್ಚು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಜುಲೈ 26 ಕೊನೆ ದಿನವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಲಿಂಕ್​ಗಳ ವಿವರ ಹೀಗಿವೆ:
https://nsdcindia.org/apprenticeship
https://apprenticeindia.org
https://bfsissc.com
https://bank.sbi/careers
https://www.sbi.co.in/careers

ಅಪ್ಲೈ ಮಾಡುವುದು ಹೇಗೆ: ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ನೋಂದಣಿ ಮಾಡಬೇಕು. bank.sbi/careers or www.sbi.co.in/careers

ವಯೋಮಿತಿ: ಅಭ್ಯರ್ಥಿಗಳು 20ರಿಂದ 28ರೊಳಗಿರಬೇಕು.

ವಿದ್ಯಾರ್ಹತೆ: ಅಭ್ಯರ್ಥಿಗಳು ನೋಂದಾಯಿತ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆಯಿಂದ ಪದವಿ ಮಾಡಿರಬೇಕು.

ಆಯ್ಕೆ ವಿಧಾನ: ಆನ್​ಲೈನ್​ನಲ್ಲಿ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ಇರುತ್ತದೆ. ಒಂದು ವೇಳೆ ಅರ್ಜಿ ಭರ್ತಿ ಮಾಡುವುದಕ್ಕೆ ಸಮಸ್ಯೆಗಳು ಇದ್ದಲ್ಲಿ ದೂರವಾಣಿ ಸಂಖ್ಯೆ- 022- 22820427 ಇದಕ್ಕೆ ಬೆಳಗ್ಗೆ 11ರಿಂದ ಸಂಜೆ 6 ಗಂಟೆ ಮಧ್ಯೆ ಕಾರ್ಯ ನಿರ್ವಹಣೆ ದಿನಗಳಲ್ಲಿ ಕರೆ ಮಾಡಬಹುದು. ಅಥವಾ https://cgrs.ibps.in ಇದಕ್ಕೆ ಅಹವಾಲು ಸಲ್ಲಿಸಬಹುದು. ಇಮೇಲ್ ಸಬ್ಜೆಕ್ಟ್​ನಲ್ಲಿ ‘Engagement of Apprentice in SBI’ ಎಂದಿರಬೇಕು.

ಇದನ್ನೂ ಓದಿ: India Post Recruitment 2021: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆಗೆ ಆಗಸ್ಟ್ 19 ಕೊನೆ ದಿನ

(State Bank Of India Apprentice 6100 Post Recruitment 2021)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags