Kannada News Now

1.8M Followers

'BMTC ಪ್ರಯಾಣಿಕ'ರಿಗೆ ಗುಡ್ ನ್ಯೂಸ್ : ಮತ್ತೆ '6 ಹೊಸ ಮಾರ್ಗ'ಗಳಲ್ಲಿ 'ಬಿಎಂಟಿಸಿ ಬಸ್ ಸಂಚಾರ' ಆರಂಭ

03 Aug 2021.7:41 PM

ಬೆಂಗಳೂರು : ಈಗಾಗಲೇ ರಾಜ್ಯ ರಾಜಧಾನಿ ಮೂಲೆ ಮೂಲೆಗಳಿಗೂ ಸೇವೆ ಒದಗಿಸುತ್ತಿರುವಂತ ಬಿಎಂಟಿಸಿಯು, ಇದೀಗ 6 ಹೊಸ ಮಾರ್ಗಗಳಲ್ಲಿ ಒಟ್ಟು 20 ಸಾರಿಗೆ ಬಸ್ ಗಳೊಂದಿಗೆ ( BMTC Bus ) 223 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸುತ್ತಿದೆ. ಈ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ( BMTC Passenger ) ಗುಡ್ ನ್ಯೂಸ್ ನೀಡಿದೆ.

'ಸಾರಿಗೆ ಬಸ್ ಪ್ರಯಾಣಿಕ'ರೇ ಗಮನಿಸಿ : KSRTCಯಿಂದ 'ಬೆಂಗಳೂರು-ಹಂಪಿ-ತುಂಗಭದ್ರ ಡ್ಯಾಂ' ಟೂರ್ ಪ್ಯಾಕೇಜ್ ಘೋಷಣೆ

ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (Bengaluru Metropolitan Transport Corporation ) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷತೆ ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಬಿಎಂಟಿಸಿ ಒದಗಿಸುತ್ತಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಈ ಕೆಳಕಂಡ 6 ಹೊಸ ಮಾರ್ಗಗಳಲ್ಲಿ ( BMTC Bus New Rout ) ಒಟ್ಟು 20 ಸಾರಿಗೆಗಳು ಹಾಗೂ 223 ಸುತ್ತುವಳಿಗಳನ್ನು ಪ್ರಾರಂಭಿಸುತ್ತಿರುವುದಾಗಿ ತಿಳಿಸಿದೆ.

ರಾಜ್ಯದ 'ಸರ್ಕಾರಿ ನೌಕರ'ರಿಗೆ ಬಿಗ್ ಶಾಕ್ : 'ತಹಶೀಲ್ದಾರ್ ಗ್ರೇಡ್' ವೃಂದದ ಹುದ್ದೆಗೆ ನಿಯೋಜಿಸದಂತೆ ಸರ್ಕಾರ ಆದೇಶ

ಅಂದಹಾಗೇ 6 ಹೊಸ ನೂತನ ಮಾರ್ಗಗಳೆಂದರೇ 515, ಎಂಎಫ್-26, ಎಂಎಫ್-24, 410-ಹೆಚ್, 315-ಜಿ ಹಾಗೂ 345-ಎಫ್ ಮಾರ್ಗಸಂಖ್ಯೆಗಳಾಗಿವೆ. ಈ ಮೂಲಕ ಕೆಂಗೇರಿ ಟಿಟಿಎಂಸಿ, ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣ, ಶ್ರೀನಗರ, ಕೆ.ಆರ್.ಪುರಂ ಹಾಗೂ ಸೆಂಟ್ ಜಾನ್ಸ್ ಆಸ್ಪತ್ರೆಯ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Karnataka News Cabinet : ಸಿಎಂ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ : 24 ಜನರು ನಾಳೆ ಸಂಜೆ 5ಕ್ಕೆ ಪ್ರಮಾಣವಚನ ಸ್ವೀಕಾರ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags