Kannada News Now

1.8M Followers

BIG NEWS : ಇಂದು ಮಧ್ಯಾಹ್ನ 2.15ಕ್ಕೆ 'ನೂತನ ಸಚಿವರ' ಪ್ರಮಾಣವಚನ ಫಿಕ್ಸ್ : ಇದು ಸಿಎಂ ಬೊಮ್ಮಾಯಿ ಸಂಪುಟಕ್ಕೆ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ

04 Aug 2021.05:56 AM

ಬೆಂಗಳೂರು : ಅಂತೂ ಇಂತು ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ( Karnataka New Minister Swearing ) ಸಮಾರಂಭ ನಡೆಯಲಿದೆ. ಈ ಮೂಲಕ ಸಿಎಂ ಬೊಮ್ನಾಯಿ ( Chief Minister Basavaraj Bommai ) ಸಂಪುಟಕ್ಕೆ ನೂತನ ಸಚಿವರು ಸೇರ್ಪಡೆಗೊಳ್ಳಲಿದ್ದಾರೆ.

BIG BREAKING NEWS : ಅಕ್ರಮ ಕಲ್ಲುಗಣಿಗಾರಿಕೆ ಹಿನ್ನಲೆ : ಮಂಡ್ಯ ಜಿಲ್ಲೆಯಾಧ್ಯಂತ 22 ಕಲ್ಲುಗಣಿಗಾರಿಕೆ ರದ್ದು

ದೆಹಲಿಗೆ ತೆರಳಿದ್ದಂತ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಿಗ್ಗೆ 6.10ರ ವಿಮಾನದಲ್ಲಿ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಇಂತಹ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನೂತನ ಸಚಿವ ಸಂಪುಟ ರಚನೆಗೆ ( Karnataka New Cabinet ) ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.

ಇದರ ಜೊತೆಗೆ ಸಂಪುಟ ರಚನೆಗೆ ಮೂರು ಸೂತ್ರಗಳನ್ನು ನೀಡಿದೆ. ಅದೆಂದರೇ, ಪ್ರಾದೇಶಿಕ ಸಮತೋಲನ, ಜಾತಿವಾರು ಪ್ರಾತಿನಿಧ್ಯತೆ, ಹೊಸಬರಿಗೆ ಆದ್ಯತೆ ನೀಡೋದಕ್ಕೆ ತಿಳಿಸಿದೆ.

Karnataka Corona Update : ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ : ಇಂದು 1,674 ಜನರಿಗೆ ಕೋವಿಡ್ ದೃಢ, 38 ಜನರು ಸಾವು

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಬುಧವಾರ ಬೆಳಿಗ್ಗೆ 6.30ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಇನ್ನೊಂದು ಎರಡು ಹೆಸರುಗಳನ್ನು ಆಡ್ ಮಾಡೋದು ಬಾಕಿ ಇದೆ. ಡಿಸಿಎಂ ಲೀಸ್ಟ್ ಫೈನಲ್ ಆಗಿಲ್ಲ. ಎಲ್ಲಾ ರೆಡಿ ಆದರೆ ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯದ 'ಸರ್ಕಾರಿ ನೌಕರ'ರಿಗೆ ಬಿಗ್ ಶಾಕ್ : 'ತಹಶೀಲ್ದಾರ್ ಗ್ರೇಡ್' ವೃಂದದ ಹುದ್ದೆಗೆ ನಿಯೋಜಿಸದಂತೆ ಸರ್ಕಾರ ಆದೇಶ

ಅಂದಹಾಗೇ.. ಈ ಬಗ್ಗೆ ಮಾತನಾಡಿರುವಂತ ಬಿ.ಸಿ.ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಇಂದು ಮಧ್ಯಾಹ್ನ 2.15ಕ್ಕೆ ಸಚಿವನಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಎಂದಿನಂತೆ ನಿಮ್ಮ ಸಹಕಾರ ಕ್ಷೇತ್ರದ ಜನತೆಯ ಆಶೀರ್ವಾದ ಇರಲಿ ಎಂಬುದಾಗಿ ತಿಳಿಸಿದ್ದಾರೆ.

ಹಾಗಾದರೆ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಸಂಪುಟಕ್ಕೆ ಸೇರುವ ಸಂಭವನೀಯ ಸಚಿವರ ಪಟ್ಟಿ

1 ಆರ್ - ಅಶೋಕ್
2 ಡಾ.ಅಶ್ವಥ್ ನಾರಾಯಣ
3 ಬೈರತಿ ಬಸವರಾಜು
4 ಎಸ್.ಟಿ.ಸೋಮಶೇಖರ್
5 ಮುನಿರತ್ನ
6 ಡಾ.ಕೆ ಸುಧಾಕರ್
7 ಶ್ರೀರಾಮುಲು
8 ಜೆ.ಸಿ.ಮಾಧುಸ್ವಾಮಿ
9 ಪೂರ್ಣಿಮಾ ಶ್ರೀನಿವಾಸ್
10 ಉಮೇಶ್ ಕತ್ತಿ
11 ರಾಜುಗೌಡ ನಾಯಕ್
12 ಬಿ.ಸಿ.ಪಾಟೀಲ್
13 ಅರವಿಂದ್ ಬೆಲ್ಲದ್ ಅಥವಾ ಶಂಕರ್ ಪಾಟೀಲ್ ಮುನೇನಕೊಪ್ಪ
14 ರೇಣುಕಾಚಾರ್ಯ ಅಥವಾ ಮಾಡಾಳ್ ವಿರೂಪಾಕ್ಷಪ್ಪ
15 ಆನಂದ್ ಸಿಂಗ್
16ಬಿ.ವೈ.ವಿಜೇಯೇಂದ್ರ
17 ಎಂ.ಪಿ.ಕುಮಾರಸ್ವಾಮಿ
18 ವಿ.ಸುನಿಲ್ ಕುಮಾರ್
19 ಎಸ್ ಅಂಗಾರ
20 ದತ್ತಾತ್ರೇಯ ಪಾಟೀಲ್ ರೇವೂರ
21 ಬಾಲಚಂದ್ರ ಜಾರಕಿಹೊಳಿ
22 ಈಶ್ವರಪ್ಪ ಅಥವಾ ಅರಗ ಜ್ಞಾನೇಂದ್ರ
23 ಕೆ.ಗೋಪಾಲಯ್ಯ
24 ಕೆ.ನಾರಾಯಣಗೌಡ
25 ಶಿವರಾಂ ಹೆಬ್ಬಾರ್ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿ
26 ಮುರುಗೇಶ್ ನಿರಾಣಿ

ಸಂಪುಟದಿಂದ ಯಾರಿಗೆ ಔಟ್.?

  • ಗೋವಿಂದ ಕಾರಜೋಳ
  • ಈಶ್ವರಪ್ಪ
  • ಸೋಮಣ್ಣ
  • ಸುರೇಶ್ ಕುಮಾರ್
  • ಕೋಟಾ ಶ್ರೀನಿವಾಸ ಪೂಜಾರಿ
  • ಶಶಿಕಲಾ ಜೊಲ್ಲೆ
  • ಪ್ರಭು ಚೌಹ್ವಾಣ್
  • ಸಿ.ಸಿ.ಪಾಟೀಲ್
  • ಲಕ್ಷ್ಮಣ್ ಸವಧಿ
  • ಶ್ರೀಮಂತ ಪಾಟೀಲ್


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags