Kannada News Now

1.8M Followers

`e-RUPIʼ ಮೂಲಕ ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಪಡೆಯಬಹುದು! ಹೇಗೆ ಗೊತ್ತಾ?

04 Aug 2021.06:38 AM

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ್ರು ನಿನ್ನೆ (ಆಗಸ್ಟ್ 2) ಡಿಜಿಟಲ್ ಪಾವತಿ ಪರಿಹಾರ ಇ-ರೂಪಿ (e-RUPI)ಯನ್ನ ಬಿಡುಗಡೆ ಮಾಡಿದ ನಂತ್ರ, ಬಡವರಿಗೆ ಕೊರೊನಾ ಲಸಿಕೆ ಪಡೆಯಲು ಸಹಾಯ ಮಾಡುತ್ತೆ ಎಂದು ಹೇಳಿದ್ರು. ಆದ್ರೆ, ಅದ್ಹೇಗೆ ಗೊತ್ತಾ?

ಜೂನ್ʼನಲ್ಲಿ ಕೇಂದ್ರ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಶುಲ್ಕವನ್ನ ನಿಗದಿಪಡಿಸಿದ್ದು, ನಂತ್ರ ಬಡವರ ಲಸಿಕೆಯನ್ನ ಖಚಿತಪಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ಇ-ವೋಚರ್‌ಗಳನ್ನ ತರುತ್ತವೆ ಎಂದು ಸರ್ಕಾರ ಹೇಳಿತ್ತು. ಇ-ರೂಪಾಯಿ ಅದೇ ಎಲೆಕ್ಟ್ರಾನಿಕ್ ವೋಚರ್ ಆಗಿದೆ.

ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಅನ್ನು ಸ್ಕ್ಯಾನ್ ಮಾಡಲಾಗುತ್ತೆ. ಅದ್ರಂತೆ, ಯಾರು ಬೇಕಾದರೂ ಬಡವರಿಗೆ ಇ-ರೂಪಾಯಿ ನೀಡಬಹುದು.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಈ ವರ್ಗಾಯಿಸಲಾಗದ ಇ-ವೋಚರ್ ಅನ್ನು ಯಾರಿಗೆ ನೀಡಲಾಗಿದೆಯೋ ಅದೇ ಫಲಾನುಭವಿ ಬಳಸಬಹುದು. ಫಲಾನುಭವಿಯ ಮೊಬೈಲ್ʼಗೆ ಇ-ರೂಪಾಯಿ ಕಳುಹಿಸಲಾಗುತ್ತದೆ. ಇದು QR ಕೋಡ್ ಅಥವಾ SMS ಕೋಡ್ ರೂಪದಲ್ಲಿರುತ್ತದೆ. ಅವುಗಳನ್ನು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಪರಿಶೀಲನೆಗಾಗಿ ಫಲಾನುಭವಿಯ ಮೊಬೈಲ್ ಸಂಖ್ಯೆಗೆ ಕೋಡ್ ಕಳುಹಿಸಲಾಗುತ್ತದೆ.

ಅಪ್ಪ-ಮಗ ಸೇರಿ ಲೂಟಿ ಮಾಡಿದ್ರು ಅಂತಾ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ತೆಗೆದ್ರು : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

Fit India Quiz 2021 : ಶಾಲಾ ಮಕ್ಕಳಿಗೆ ಭರ್ಜರಿ ಗುಡ್‌ ನ್ಯೂಸ್‌ : ʼಕೇಂದ್ರ ಸರ್ಕಾರʼದಿಂದ ರಸಪ್ರಶ್ನೆ ಸ್ಪರ್ಧೆ, 3 ಕೋಟಿ ಬಹುಮಾನ..! ಶೀಘ್ರವೇ ನೋಂದಾಣಿ ಆರಂಭ

ಪರಿಶೀಲನೆಯ ನಂತ್ರ, ವೋಚರ್ ಅನ್ನು ರಿಡೀಮ್ ಮಾಡಲಾಗುತ್ತದೆ ಮತ್ತು ಪಾವತಿ ಮಾಡಲಾಗುತ್ತದೆ. ಬಡವರು ಖಾಸಗಿ ಕೇಂದ್ರದಲ್ಲಿ ಲಸಿಕೆ ಪಡೆಯಲು ಕಾರ್ಪೊರೇಟ್‌ಗಳು ಇದನ್ನ ಬಳಸಬಹುದು. ಸರ್ಕಾರಿ ಸಂಸ್ಥೆಗಳು ಅಥವಾ ಯಾವುದೇ ಸೇವಾ ಪೂರೈಕೆದಾರರು ತಮ್ಮ ಪಾಲುದಾರ ಬ್ಯಾಂಕ್‌ಗಳ ಸಹಾಯದಿಂದ ಇ-ರೂಪಾಯಿ ವೋಚರ್‌ಗಳನ್ನು ಉತ್ಪಾದಿಸಬಹುದು.

ಅನೇಕ ಸೇವೆಗಳಿಗೆ ಬಳಸಬಹುದು..!
ಇ-ರೂಪಾಯಿ ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿಯ ಸಾಧನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ತಲುಪಿಸಲಾಗುತ್ತದೆ. ಇದನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪಾಲುದಾರ ಬ್ಯಾಂಕುಗಳು ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಔಷಧಿ ಮತ್ತು ಪೌಷ್ಟಿಕಾಂಶದ ನೆರವು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಔಷಧಗಳ ಪತ್ತೆ, ರಸಗೊಬ್ಬರ ಸಬ್ಸಿಡಿಗಳ ಅಡಿಯಲ್ಲಿ ಸೇವೆಗಳನ್ನು ಒದಗಿಸಲು ಇ-ರೂಪಾಯಿ ಬಳಸಬಹುದು. ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್‌ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಪಡೆಯಬಹುದು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags