Kannada News Now

1.8M Followers

Karnataka New Minister List : ಹೀಗಿದೆ.. ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವಂತ ಸಂಭಾವ್ಯ ಸಚಿವರ ಪಟ್ಟಿ

04 Aug 2021.12:14 PM

ಬೆಂಗಳೂರು : ನಾನು ಪ್ರಮಾಣವಚನ ತೆಗೆದುಕೊಂಡ ಮೇಲೆ, ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಅಲ್ಲೇ ಸ್ಥಳದಲ್ಲಿಯೇ ಪರಿಹಾರವನ್ನು ಘೋಷಣೆ ಮಾಡಿದ್ದೇನೆ. ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ ಘೋಷಣೆ ಮಾಡಿದ್ದೇನೆ. ಸಾಮಾಜಿಕ ಭದ್ರತೆಯ ಯೋಜನೆಗಳ ಹಣವನ್ನು ಹೆಚ್ಚಿಗೆ ಮಾಡಿದ್ದೇನೆ. ಇದಾದ ನಂತ್ರ ಸಚಿವ ಸಂಪುಟದ ವಿಸ್ತರಣೆ ಕುರಿತಂತೆ ಬಿಜೆಪಿ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ನಾವು ನಿನ್ನೆ ರಾತ್ರಿ ಅಂತಿಮ ಸುತ್ತಿನ ಮಾತುಕತೆ ಆದ ಮೇಲೆ. ಇದೀಗ ಪಟ್ಟಿ ಅಂತಿಮಗೊಂಡಿದೆ. ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ. ಒಟ್ಟು 29 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಸಿಎಂ ಹುದ್ದೆಯನ್ನು ಈ ಬಾರಿ ಸೃಜಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Corona virus hike : ಮಂಗಳೂರು ವಿವಿ ಎಲ್ಲಾ ಪದವಿ ಕಾಲೇಜುಗಳ ಪರೀಕ್ಷೆಗಳು ಮುಂದೂಡಿಕೆ

ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ನಮ್ಮ ಪ್ರಧಾನ ಮಂತ್ರಿಗಳಾದಂತ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಮಾರ್ಗದಲ್ಲಿ ಈಗಾಗಲೇ ಹೇಳಿದಂತೆ ಜನಪರ ಆಡಳಿತ ಕೊಡುವ ಹಿನ್ನಲೆಯಲ್ಲಿ ಸಂಪುಟ ರಚನೆ ಮಾಡಲಾಗುತ್ತಿದೆ.

ಅಲ್ಲದೇ ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಈ ಸಂಪುಟ ರಚನೆಯಾಗಿದೆ. ಇದು ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ, ವಿಶ್ವಾಸ ಗಳಿಸಿ, ನೂತನವಾದಂತ ಒಳ್ಳೆಯ ಆಡಳಿತ ಕೊಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಇವತ್ತು ಪ್ರಮಾಣವಚನವನ್ನು 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕೃತವಾಗಿ ನೂತನ ಸಚಿವರ ಪಟ್ಟಿ ರಾಜಭವನದ ಕಚೇರಿಯಿಂದ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ ಎಂದರು.

ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲು ಯೋಗಿ ಸರ್ಕಾರ ತೀರ್ಮಾನ

ಇಂದಿನ ಸಚಿವ ಸಂಪುಟ ರಚನೆಯಲ್ಲಿ 8 ಲಿಂಗಾಯಿತ ಸಮುದಾಯದವರು, 7 ಒಕ್ಕಲಿಗ ಸಮುದಾಯದವರಿ, 7 OBC ಸಮುದಾಯದವರು, 3 SC, 1 ST, 1 ರೆಡ್ಡಿ, 1 ಮಹಿಳಾ ಮತ್ತು 1 ಬ್ರಾಹ್ಮಣ ಸಮುದಾಯದವರು ಸೇರಿದಂತೆ ಒಟ್ಟು 29 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಘೋಷಣೆ ಮಾಡಿದರು.

BIGG BREAKING NEWS : ನೂತನ ಸಚಿವರಾಗಿ ಇಂದು 29 ಶಾಸಕರು ಪ್ರಮಾಣವಚನ, ಡಿಸಿಎಂ ಹುದ್ದೆ ಸೃಷ್ಠಿ ಮಾಡಿಲ್ಲ - ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ನಾಯಕರು ನೇರವಾಗಿಯೇ ಮಾತನಾಡಿ ಹೇಳಿದ್ದಾರೆ. ಆ ಕುರಿತು ನಾನು ಏನೂ ಹೇಳೋದಿಲ್ಲ. ಪಟ್ಟಿ ಬಿಡುಗಡೆಯಾದ ನಂತ್ರ, ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದಾಗಿ ತಿಳಿಯಲಿದೆ. ಆದ್ರೇ.. ನಾನು ಇಷ್ಟು ಹೇಳಬಲ್ಲೇ.. ಈಗ ಏನ್ ರಾಜ್ಯಪಾಲರಿಗೆ ಪಟ್ಟಿ ಕಳುಹಿಸಲಾಗಿದೆಯೋ, ಅದರಲ್ಲಿ ವಿಜಯೇಂದ್ರ ಅವರ ಹೆಸರು ಇಲ್ಲ ಎಂಬುದಾಗಿ ತಿಳಿಸಲಾಗಿದೆ.

ಹೀಗಿದೆ.. ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವಂತ ಸಂಭಾವ್ಯ ಸಚಿವರ ಪಟ್ಟಿ

  1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
  2. ಆರ್.ಅಶೋಕ್- ಪದ್ಮನಾಭ ನಗರ
  3. ಬಿ.ಸಿ ಪಾಟೀಲ್ - ಹಿರೇಕೇರೂರು
  4. ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರಂ
  5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
  6. ಉಮೇಶ್ ಕತ್ತಿ- ಹುಕ್ಕೇರಿ
  7. ಎಸ್.ಟಿ.ಸೋಮಶೇಖರ್- ಯಶವಂತಪುರ
  8. ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ
  9. ಬೈರತಿ‌ ಬಸವರಾಜ - ಕೆ ಆರ್ ಪುರಂ
  10. ಮುರುಗೇಶ್ ನಿರಾಣಿ - ಬಿಳಿಗಿ
  11. ಶಿವರಾಂ ಹೆಬ್ಬಾರ್- ಯಲ್ಲಾಪುರ
  12. ಶಶಿಕಲಾ ಜೊಲ್ಲೆ- ನಿಪ್ಪಾಣಿ
  13. ಕೆಸಿ ನಾರಾಯಣ್ ಗೌಡ - ಕೆ‌ಆರ್ ಪೇಟೆ
  14. ಸುನೀಲ್ ಕುಮಾರ್ - ಕಾರ್ಕಳ
  15. ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ
  16. ಗೋವಿಂದ ಕಾರಜೋಳ-ಮುಧೋಳ
  17. ಮುನಿರತ್ನ- ಆರ್ ಆರ್ ನಗರ, ಬೆಂಗಳೂರು
  18. ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ
  19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್, ಬೆಂಗಳೂರು
  20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
  21. ಹಾಲಪ್ಪ ಆಚಾರ್ - ಯಲ್ಬುರ್ಗ
  22. ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ
  23. ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ
  24. ಪ್ರಭು ಚೌವ್ಹಾಣ್ - ಔರಾದ್
  25. ವಿ ಸೋಮಣ್ಣ - ಗೋವಿಂದ್ ರಾಜನಗರ, ಬೆಂಗಳೂರು
  26. ಎಸ್ ಅಂಗಾರ - ಸುಳ್ಯ
  27. ಆನಂದ್ ಸಿಂಗ್ - ಹೊಸಪೇಟೆ
  28. ಸಿ ಸಿ‌ ಪಾಟೀಲ್ - ನರಗುಂದ
  29. ಬಿ.ಸಿ.ನಾಗೇಶ್ - ತಿಪಟೂರು


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags