Oneindia

1.1M Followers

ನಿಮ್ಮನಿಮ್ಮ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಎಷ್ಟಿದೆ? ಇಲ್ಲಿದೆ ಪಟ್ಟಿ

16 Aug 2021.2:37 PM

ಕೊರೊನಾ ಎರಡನೇ ಅಲೆ ನಮ್ಮಿಂದ ದೂರವಾಗಿಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ (ಆಗಸ್ಟ್ 14) ಹೇಳಿದ್ದಾರೆ. ಮೂರನೇ ಅಲೆಯ ಬಗ್ಗೆ ಲಾಕ್ಡೌನ್ ಸದ್ಯಕ್ಕೆ ಇಲ್ಲ ಎನ್ನುವುದನ್ನೂ ಸಿಎಂ ಹೇಳಿದ್ದಾರೆ.

ಶಾಲಾ, ಕಾಲೇಜು ಆರಂಭದ ವಿಚಾರದಲ್ಲೂ ಸರಕಾರ ಅಂತಿಮ ನಿರ್ಧಾರಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗಿರುವ ಜಿಲ್ಲೆಯಲ್ಲಿ ಶಾಲೆ ಸದ್ಯಕ್ಕೆ ಆರಂಭವಾಗುತ್ತಿಲ್ಲ. ಮಿಕ್ಕೆಲ್ಲಾ ಜಿಲ್ಲೆಗಳಲ್ಲಿ ಆಗಸ್ಟ್ 23ರಂದು ಶಾಲೆ ಆರಂಭವಾಗಲಿದೆ. ಆ ಮೂಲಕ, ಮನೆಯಲ್ಲಿ ವರ್ಷದಿಂದ ಬಂಧಿಯಾಗಿದ್ದ ಮಕ್ಕಳು ಹೊರ ಬರಲಿದ್ದಾರೆ.

ಬೆಂಗಳೂರು ಹೊರವಲಯದ ವಾರ್ಡ್‌ಗಳಲ್ಲೇ ಕೊರೊನಾ ಹೆಚ್ಚಳ; ಕಾರಣವೇನು?

ಕೊರೊನಾ ಟಾಸ್ಕ್ ಫೋರ್ಸ್ ಕಮಿಟಿಯಲ್ಲಿದ್ದ ಸದಸ್ಯರ ಸಲಹೆಗೆ ಬೆಲೆ ಕೊಟ್ಟಿರುವ ಸಿಎಂ ಬೊಮ್ಮಾಯಿ, ಪ್ರತ್ಯೇಕ ಮಾರ್ಗಸೂಚಿಯ ಮೂಲಕ ಶಾಲೆ ಆರಂಭಿಸಲು ಅನುಮತಿ ನೀಡಿದ್ದಾರೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಕಮಿಟಿಯ ವರದಿಯ ಪ್ರಕಾರ ಸೆಪ್ಟಂಬರ್ ಐದರ ನಂತರ ಐದನೇ ಕ್ಲಾಸ್ ಆರಂಭಿಸಲು ಅನುಮತಿ ಸಿಗಬಹುದು. ಶಾಲೆ ಆರಂಭಿಸುವುದು ಸರಕಾರಕ್ಕಿರುವ ಬಹುದೊಡ್ಡ ಚಾಲೆಂಜ್ ಎಂದು ಹೇಳಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಗಟ್ಟಿ ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಹೇಳಿದ್ದಾರೆ.

ಇಡೀ ರಾಜ್ಯಕ್ಕೆ ಒಂದೇ ನಿಯಮ ಜಾರಿಗೆ ತರುವ ನಿರ್ಧಾರಕ್ಕೆ ಬೊಮ್ಮಾಯಿ ಸರಕಾರ ತಿಲಾಂಜಲಿ ಇಡುವ ಸಾಧ್ಯತೆಯಿದೆ. ಪಾಸಿಟಿವಿಟಿ ರೇಟ್ ಆಧಾರದ ಮೇಲೆ, ಕೊರೊನಾ ನಿರ್ಬಂಧನ ಹೇರುವ ನಿರ್ಧಾರಕ್ಕೆ ಸರಕಾರ ಬಂದಂತಿದೆ. ಅದು, ಲಾಕ್ಡೌನ್, ವೀಕೆಂಡ್ ಕರ್ಫ್ಯೂ ವಿಚಾರಕ್ಕೂ ಆಗಿರಬಹುದು. ಹಾಗಿದ್ದರೆ, ರಾಜ್ಯದ ಯಾವಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವಿಟಿ ರೇಟ್ ಇದೆ? ಮುಂದೆ ಓದಿ.. (ಒಂದು ವಾರದ ವರದಿಯ ಪ್ರಕಾರ)

ಕರ್ನಾಟಕದಲ್ಲಿ ಇನ್ನೂ 4.2 ಕೋಟಿ ವಯಸ್ಕರಿಗೆ ಸಂಪೂರ್ಣ ಲಸಿಕೆ ನೀಡಬೇಕಿದೆ

ಬೀದರ್ - ಶೇ. 0.16
ಚಿಕ್ಕಬಳ್ಳಾಪುರ - ಶೇ. .170
ತುಮಕೂರು - ಶೇ. 0.77
ಬೆಳಗಾವಿ - ಶೇ. 0.76
ಉತ್ತರ ಕನ್ನಡ - ಶೇ. 1.16
ಬೆಂಗಳೂರು ನಗರ - ಶೇ. 0.66
ಬೆಂಗಳೂರು ಗ್ರಾಮಾಂತರ - ಶೇ. 1.13

ಮಂಡ್ಯ - ಶೇ. 0.64
ರಾಮನಗರ - ಶೇ. 0.32
ಮೈಸೂರು - ಶೇ. 1.20
ಉಡುಪಿ - ಶೇ. 2.42
ಚಾಮರಾಜನಗರ - ಶೇ. 1.29
ಕೋಲಾರ - ಶೇ. 0.86
ದಕ್ಷಿಣ ಕನ್ನಡ - ಶೇ. 3.98

ಚಿಕ್ಕಬಳ್ಳಾಪುರ - ಶೇ. 0.17
ಕೊಪ್ಪಳ - ಶೇ. 0.24
ಯಾದಗೀರಿ - ಶೇ. 0.09
ಹಾವೇರಿ - ಶೇ. 0.13
ಚಿಕ್ಕಮಗಳೂರು - ಶೇ. 3.24
ಕೊಡಗು - ಶೇ. 2.71
ಹಾಸನ - ಶೇ. 2.23

ಶಿವಮೊಗ್ಗ - ಶೇ. 1.26
ಚಿತ್ರದುರ್ಗ - ಶೇ. 0.85
ದಾವಣಗೆರೆ - ಶೇ. 0.63
ಕಲಬರುಗಿ - ಶೇ. 0.33
ಗದಗ - ಶೇ. 0.14

ವಿಜಯಪುರ - ಶೇ. 0.08
ಧಾರವಾಡ - ಶೇ. 0.29
ರಾಯಚೂರು - ಶೇ. 2.40
ಬಾಗಲಕೋಟೆ - ಶೇ. 0.22
ಬಳ್ಳಾರಿ - ಶೇ. 0.22
ವಿಜಯನಗರ - ಶೇ. 0.88

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags