ಕನ್ನಡದುನಿಯಾ

1.6M Followers

ಉದ್ಯೋಗಿಗಳಿಗೆ ಭರ್ಜರಿ ಖುಷಿ ಸುದ್ದಿ..! ಹೆಚ್ಚಾಗಲಿದೆ ನಿವೃತ್ತಿ ವಯಸ್ಸು

18 Aug 2021.06:50 AM

ಉದ್ಯೋಗಿಗಳಿಗೆ ಶೀಘ್ರದಲ್ಲಿಯೇ ಖುಷಿ ಸುದ್ದಿ ಸಿಗಲಿದೆ. ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ಸಲಹೆಯೊಂದನ್ನು ನೀಡಿದೆ.ಇದರಲ್ಲಿ, ಉದ್ಯೋಗಿಗಳ ಕೆಲಸದ ವಯಸ್ಸಿನ ಮಿತಿಯನ್ನು ಹೆಚ್ಚಿಸುವಂತೆ ಹೇಳಲಾಗಿದೆ. ನಿವೃತ್ತ ವಯಸ್ಸಿನ ಹೆಚ್ಚಳದ ಜೊತೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಆರಂಭಿಸುವಂತೆ ಹೇಳಲಾಗಿದೆ.

ವರದಿಯ ಪ್ರಕಾರ, ನೌಕರರಿಗೆ ಪ್ರತಿ ತಿಂಗಳು ಕನಿಷ್ಠ 2000 ರೂಪಾಯಿ ಪಿಂಚಣಿ ನೀಡಬೇಕೆಂದು ಸಲಹೆ ನೀಡಲಾಗಿದೆ. ಆರ್ಥಿಕ ಸಲಹಾ ಸಮಿತಿಯು ದೇಶದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಉತ್ತಮ ವ್ಯವಸ್ಥೆಗಳನ್ನು ಶಿಫಾರಸು ಮಾಡಿದೆ. ಸಾಮಾಜಿಕ ಭದ್ರತಾ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೆಲಸದ ವಯಸ್ಸಿನ ಮಿತಿ ಹೆಚ್ಚಳ ಮಾಡಬೇಕೆಂದು ಸಮಿತಿ ಹೇಳಿದೆ. ವರದಿಯು 50 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳ ಕೌಶಲ್ಯ ಅಭಿವೃದ್ಧಿಯ ಬಗ್ಗೆಯೂ ಹೇಳಿದೆ.

ಗಮನಿಸಬೇಕಾದ ಸಂಗತಿಯೆಂದರೆ, ವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟಸ್ 2019 ರ ಪ್ರಕಾರ, 2050 ರ ವೇಳೆಗೆ ಭಾರತದಲ್ಲಿ ಸುಮಾರು 32 ಕೋಟಿ ಹಿರಿಯ ನಾಗರಿಕರು ಇರಲಿದ್ದಾರೆ. ಅಂದರೆ, ದೇಶದ ಜನಸಂಖ್ಯೆಯ ಸುಮಾರು 19.5 ರಷ್ಟು ಜನರು ನಿವೃತ್ತರ ವರ್ಗಕ್ಕೆ ಸೇರಲಿದ್ದಾರೆ. 2019 ರಲ್ಲಿ, ಭಾರತದ ಜನಸಂಖ್ಯೆಯ ಸುಮಾರು ಶೇಕಡಾ 10ರಷ್ಟು ಜನರು ನಿವೃತ್ತ ವರ್ಗದಲ್ಲಿದ್ದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags