Kannada News Now

1.8M Followers

SSLC Supplementary Exam 2021 : 'SSLC ಪೂರಕ ಪರೀಕ್ಷೆ' ಕುರಿತಂತೆ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ : ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ, ಹೀಗಿದೆ ಪ್ರಮುಖ ದಿನಾಂಕಗಳು

18 Aug 2021.5:46 PM

ವರದಿ : ವಸಂತ ಬಿ ಈಶ್ವರಗೆರೆ

ಬೆಂಗಳೂರು : 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ( SSLC Supplementary Exam 2021 ) ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಠಿಯಿಂದ ಸರಳೀಕರಿ, ಸೆಪ್ಟೆಂಬರ್-2021ರಲ್ಲಿ ಎರಡು ದಿನಗಳಲ್ಲಿ ಪರೀಕ್ಷೆಯನ್ನ ನಡೆಸಲು ಸರ್ಕಾರ ಆದೇಶಿಸಿದೆ.

ಇಂತಹ ಪರೀಕ್ಷೆಗೆ ವಿದ್ಯಾರ್ಥಿಗಳೂ ಹಾಜರಾಗುವ ಸಂಬಂಧ, ಮಹತ್ವದ ಸೂಚನೆಯನ್ನು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.

BIGG BREAKING NEWS : ಆ.23ರಿಂದ 'ರಾಷ್ಟ್ರೀಯ ಶಿಕ್ಷಣ ನೀತಿ'ಯಡಿ ಪ್ರವೇಶ ಪ್ರಕ್ರಿಯೆ ಆರಂಭ - ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ

ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಾದಂತ ವಿ ಸುಮಂಗಳ ಅಧಿಸೂಚನೆ ಹೊರಡಿಸಿದ್ದು, ಕೋವಿಡ್-19 ಹಿನ್ನಯಲ್ಲಿ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಠಿಯಿಂದ ಸರಳೀಕರಿಸಿ, ಸೆಪ್ಟೆಂಬರ್-2021ರಲ್ಲಿ ಎರಡು ದಿನಗಳಲ್ಲಿ ( ಒಂದು ದಿನ ಕೋರ್ ವಿಷಯಗಳು, ಮತ್ತೊಂದು ದಿನ ಭಾಷಾ ವಿಷಯಗಳು ) ಪರೀಕ್ಷೆಯನ್ನು ನಡೆಸಲು ಸರ್ಕಾರವು ಆದೇಶಿಸಿದೆ.

BREAKING NEWS : 'ಸಚಿವ ಮುರುಗೇಶ್ ನಿರಾಣಿ'ಗೆ ಸಂಕಷ್ಟ : ಆಕ್ಷೇಪಾರ್ಹ ಸಂದೇಶ ಕುರಿತಂತೆ ತನಿಖೆಗೆ ಕೋರ್ಟ್ ಆದೇಶ

ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 2021ರಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ಕೆಳಕಂಡ ಕ್ರಮಗಳನ್ನು ಅನುಸರಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪೂರಕ ಪರೀಕ್ಷೆ ನೋಂದಣಿ

2020-21ನೇ ಸಾಲಿನ ಪೂರಕ ಪರೀಕ್ಷೆಗೆ ಕೆಳಕಂಡ ಅಭ್ಯರ್ಥಿಗಳನ್ನು ಮಾತ್ರ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

  • CCERF ( 2020-21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿ, ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರು ಹಾಜರಾದ ಮತ್ತು ನೋಂದಾಯಿಸದ ಅರ್ಹ ಶಾಲಾ ವಿದ್ಯಾರ್ಥಿಗಳು ಮಾತ್ರ )
  • CCERR ಏಪ್ರಿಲ್ -2019ರ ಮುಖ್ಯ ಪರೀಕ್ಷೆಯಿಂದ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ ಅರ್ಹ ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳು
  • CCEPF 2020-21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರುಹಾಜರಾದ ಅರ್ಹ ಖಾಸಗಿ ಅಭ್ಯರ್ಥಿಗಳು ಮಾತ್ರ
  • CCEPR ಏಪ್ರಿಲ್-2019ರ ಮುಖ್ಯ ಪರೀಕ್ಷೆಯಿಂದ ಪ್ರಥಮ ಬಾರಿಗೆ ನೋಂದಾಯಿಸಿ, ಅನುತ್ತೀರ್ಣರಾದ ಅರ್ಹ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು
  • NSR ಮತ್ತು NSPR ಪುನರಾವರ್ತಿತ ಅಭ್ಯರ್ಥಿಗಳು - 2011ಕ್ಕೂ ಹಿಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಅರ್ಹ ಪುರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ಹಾಗೂ ಏಪ್ರಿಲ್ - 2019ರಿಂದ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ ಅಭ್ಯರ್ಥಿಗಳು.

ವಿದ್ಯಾರ್ಥಿಗಳ ನೋಂದಣಿ ವಿಧಾನ

  • ಮೇಲಿನ ಕ್ರಮ ಸಂಖ್ಯೆ-1ರಲ್ಲಿ ವಿವರಿಸಿರುವ ಅರ್ಹ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಮಂಡಳಿಯ https://sslc.karnataka.gov.in/ ಜಾಲತಾಣದ ಶಾಲಾ ಲಾಗಿನ್ ಮೂಲಕ ನೋಂದಣಿ ಮಾಡುವುದು. ಶಾಲಾ ಲಾಗಿನ್ ನಲ್ಲಿ Registration For September 2021 Exam ಅನ್ನು ದಾಗ ಮೂರು ಸಬ್ ಮೆನುಗಳಿರುತ್ತವೆ.
  • New CCERF Candidate Registration
  • Update New CCERT Candidate Details
  • Repeater Candidates Registration

ಈ ಮೇಲ್ಕಂಡ ವಿಧಾನಗಳನ್ನು ಅನುಸರಿಸಿ, ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಪರೀಕ್ಷಾ ಶುಲ್ಕದ ವಿವರ

  • 2020-21ನೇ ಸಾಲಿನ ಮುಖ್ಯ ಪರೀಕ್ಷೆಗೆ ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ನೋಂದಾಯಿಸದ ಅರ್ಹ ಶಾಲಾ ವಿದ್ಯಾರ್ಥಿಗಳಿಗೆ - ಪರೀಕ್ಷಾ ಶುಲ್ಕ ರೂ.485 + ರೂ.22 ( ಲ್ಯಾಮಿನೇಷನ್ ಶುಲ್ಕ ) ಸೇರಿ ಒಟ್ಟು ರೂ.507 ಆಗಿದೆ.
  • ಪುನರಾವರ್ತಿತ ಅಭ್ಯರ್ಥಿಗಳಿಗೆ ( CCERR + CCEPR + NSR + NSPR ) ಒಂದು ವಿಷಯಕ್ಕಿ ಪ್ರತಿ ವಿದ್ಯಾರ್ಥಿಗೆ ರೂ.320, ಎರಡು ವಿಷಯಕ್ಕೆ ರೂ.386, ಮೂರು ವಿಷಯ ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ ರೂ.520
  • ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
  • ಕೋವಿಡ್-19 ಮತ್ತು ಇತರೆ ಅನಾರೋಗ್ಯ ಕಾರಣದಿಂದ 200-21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸದ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಶಾಲಾ ವಿದ್ಯಾರ್ಥಿಗಳಾಗಿ, ಪ್ರಥಮ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವರ್ಗದ ಹೆಣ್ಣುಮಕ್ಕಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯ್ತಿ ನೀಡಿದೆ.
  • 2020-21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರುಹಾಜರಾದ CCERF ಮತ್ತು CCEPF ವಿದ್ಯಾರ್ಥಿಗಳು ಈ ಪೂರಕ ಪರೀಕ್ಷೆಗೆ ನೋಂದಾಯಿಸಿದಲ್ಲಿ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಆನ್ ಲೈನ್ ನಲ್ಲಿ ಪರೀಕ್ಷಾ ಅರ್ಜಿಯನ್ನು ನೋಂದಾಯಿಸಲು ಹಾಗೂ ಶುಲ್ಕ ಪಾಲತಿಸಲು ನಿಗದಿಪಡಿಸಿದ ದಿನಾಂಕಗಳು

  • ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ CCERF, CCEPF, CCERR, CCEPR, NSR ಮತ್ತು NSPR ವಿದ್ಯಾರ್ಷಿಗಳ ಮಾಹಿತಿಯನ್ನು ದಿನಾಂಕ 19-08-2021ರಿಂದ ಅಪ್ ಲೋಡ್ ಮಾಡಲು ಆರಂಭಗೊಳ್ಳಲಿದೆ. ಮಾಹಿತಿಯನ್ನು ಅಪ್ ಲೋಡ್ ಮಾಡಲು ಕೊನೆಯ ದಿನಾಂಕ 30-08-2021 ಆಗಿದೆ.
  • ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ನಿಗದಿ ಪಡಿಸಿದ ದಿನಾಂಕ 31-08-2021 ಆಗಿದೆ. ಚಲನ್ ಮುಂದ್ರಿಸಿಕೊಂಡು ಬ್ಯಾಂಕ್ ಗೆ ಜಮೆ ಮಾಡಲು ನಿಗದಿ ಪಡಿಸಿದ ದಿನಾಂಕ 02-09-2021 ಆಗಿರುತ್ತದೆ.
  • 2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಹಳೆಯ ಪದ್ದತಿಯಂತೆ ಮಂಡಳಿಯ ನೆಫ್ಟ್ ಚಲನ್ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಾವತಿಸಲು ನಿಗದಿಪಡಿಸಿದ ಅಂತಿಮ ದಿನಾಂಕ 02-09-2021 ಆಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags