Kannada News Now

1.8M Followers

'ಅಂತರ ನಿಗಮ ವರ್ಗಾವಣೆ'ಯ ನಿರೀಕ್ಷೆಯಲ್ಲಿದ್ದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್ : ಸಂಭವನೀಯ ವರ್ಗಾವಣೆ ಪಟ್ಟಿ ರಿಲೀಸ್

19 Aug 2021.6:34 PM

ಬೆಂಗಳೂರು : ಸಾರಿಗೆ ನೌಕರರ ಪ್ರತಿಭಟನೆಯ ನಂತ್ರ, ಅಂತರ ನಿಗಮ ವರ್ಗಾವಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಈ ಬಳಿಕ, ಇದೀಗ ನಾಲ್ಕು ನಿಗಮದಿಂದ ಅರ್ಹ ನೌಕರರ ಸಂಭವನೀಯ ವರ್ಗಾವಣೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.

Big Breaking News : ಸ್ವಾತಂತ್ರ್ಯ ದಿನದ Rallyಯಲ್ಲಿ ರಾಷ್ಟ್ರಧ್ವಜ ಹಿಡಿದವರ ಮೇಲೆ ತಾಲಿಬಾನ್ ಉಗ್ರರ ಗುಂಡಿನ ಸುರಿಮಳೆ, ಹಲವರು ಸಾವು

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ, ಕ.ಕ.ರ.ಸಾ.ಸಂಸ್ಥೆ ಮತ್ತು ವಾ.ಕ.ರ.ಸಾ.ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕರೇತರ ಮತ್ತು ದರ್ಜೆ-4ರ ನೌಕರರು ಅಂತರ ನಿಗಮ ವರ್ಗಾವಣೆಗೆ ಸಲ್ಲಿಸಿರುವ ಅರ್ಜಿಗಳನ್ನು ದಿನಾಂಕ 23-03-2021ಗಳನ್ವಯ ಪರಿಶೀಲಿಸಿ, ತಯಾರಿಸಿರುವ ಅರ್ಹ ನೌಕರರ ಸಂಭವನೀಯ ವರ್ಗಾವಣೆ ಪಟ್ಟಿಯನ್ನು ನಿಗಮದ ವೆಬ್ ಸೈಟ್ ksrtc.karnataka.gov.in ನಲ್ಲಿ ಇಂದು ಪ್ರಕಟಿಸಲಾಗಿದೆ.

'ನಂದಿನಿ ಉತ್ಪನ್ನ'ಗಳ ಪ್ರಿಯರಿಗೆ ಗುಡ್ ನ್ಯೂಸ್ : 'ಶೇ.10ರ ರಿಯಾಯಿತಿ ದರ'ದಲ್ಲಿ 'ನಂದಿನಿ ಸಿಹಿ ತಿನಿಸು' ಮಾರಾಟ

ಸಂಭವನೀಯ ವರ್ಗಾವಣೆ ಪಟ್ಟಿಗೆ ಸಂಬಂಧಿಸಿದಂತೆ ಅರ್ಜಿದಾರ ನೌಕರರು ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ, ಅವುಗಳನ್ನು ನೇರವಾಗಿ ತಮ್ಮ ವಿಭಾಗದ ಆಡಳಿತಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಲು ದಿನಾಂಕ 20-08-2021 ( ಸಾರ್ವತ್ರಿಕ ರಜೆ ) ಹಾಗೂ ದಿನಾಂಕ 21-08-2021ರಂದು ಸಂಜೆ 5.30ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಂತ್ರ ಬಂದ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ. ನೇರವಾಗಿ ನಿಗಮದ ಕೇಂದ್ರ ಕಚೇರಿಗೆ ಸಲ್ಲಿಸುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸೋದಿಲ್ಲ ಎಂದು ತಿಳಿಸಿದ್ದಾರೆ.

'ಸಮಗ್ರ ಶಿಕ್ಷಣ ಯೋಜನೆ'ಯಡಿ ಕಾರ್ಯನಿರ್ವಹಿಸುತ್ತಿರುವ 'ಶಿಕ್ಷಕ'ರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 2ನೇ ಕಂತಿನ 4 ತಿಂಗಳ ಅನುದಾನ ಬಿಡುಗಡೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags