Kannada News Now

1.8M Followers

ರಾಜ್ಯದಾದ್ಯಂತ ಆಗಸ್ಟ್ 22ರಂದು TET ಎಕ್ಸಾಂ, ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

20 Aug 2021.07:11 AM

*ಅಕ್ಷರ

ಬೆಂಗಳೂರು: ಇದೇ ತಿಂಗಳು ಅಂದ್ರೆ, 22,08.2021ರಂದು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ KARTET 2021 ಎಕ್ಸಾಂ ನಡೆಯಲಿದೆ. ಈ ನಡುವೆ ಕೋವಿಡ್‌ 19ರ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ಮತ್ತು ಆರೋಗ್ಯ ಇಲಾಖೆಯ ಅನುಮತಿಯನ್ನು ತೆಗೆದುಕೊಂಡು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಅನುಸರವಾಗಿ ಈಗಾಗಲೇ ಮಂಡಳಿ ಸಿದ್ದತೆಯನ್ನು ನಡೆಸುತ್ತಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಈ ನಡುವೆ ವಾರಾಂತ್ಯದ ಕರ್ಫ್ಯೂ ಹಾಗೂ ಸ್ಥಳೀಯ ನಿರ್ಬಂಧಗಳು ಜಾರಿಯಲ್ಲಿರುವ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ತಮ್ಮ ಹಾಲ್‌ಟಿಕೆಟ್‌ ಮತ್ತು ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಸ್ವಂತ/ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈ ಮೂಲಕ ಅಭ್ಯರ್ಥಿಗಳಲ್ಲಿನ ಭಯವನ್ನು ಹಾಗೂ ಅನುಮಾನಗಳಿಗೆ ತೆರೆ ಎಳೆದಿದ್ದಾರೆ,.ಇದೇ ವೇಳೆ ಇಲಾಖೆ ತನ್ನ ಸುತ್ತೋಲೆಯಲ್ಲಿ, KARTET 2021 ಪರೀಕ್ಷೆಗೆ ಸಂಬಂದಪಟ್ಟಂತೆ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆಗಳು ಇರೋದಿಲ್ಲ, ಯಾವುದೇ ರೀತಿಯ ಊಹಪೋಹ ಸುದ್ದಿಗಳನ್ನು ನಂಬಬೇಡಿ, ಇಲಾಖೆ ಹೊರಡಿಸುವ ಮಾಹಿತಿ ಮಾತ್ರ ಅಧಿಕೃತವಾಗಿರುತ್ತದೆ ಅಂತ ಹೇಳಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags