Kannada News Now

1.8M Followers

Big Breaking News: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ 'ಬಿಗ್‌ ಗಿಫ್ಟ್‌' 2022 ರವರೆಗೆ PF ಪಾಲು ನೀಡಲು ಗ್ರೀನ್‌ ಸಿಗ್ನಲ್‌

21 Aug 2021.6:28 PM

ನವದೆಹಲಿ: ಉದ್ಯೋಗ ಕಳೆದುಕೊಂಡ ಜನರಿಗೆ ಉದ್ಯೋಗದಾತ ಹಾಗೂ ಉದ್ಯೋಗಿಯ ಭವಿಷ್ಯ ನಿಧಿಯ (ಪಿಎಫ್) ಪಾಲನ್ನು 2022 ರವರೆಗೆ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂಥ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಉದ್ಯೋಗ ಕಳೆದುಕೊಂಡಿರುವ ಅಂದ್ರೆ ಇಪಿಎಫ್‌ಒದಲ್ಲಿ ನೋಂದಣಿಯಾಗಿರುವ ಔಪಚಾರಿಕ ವಲಯದಲ್ಲಿ ಮತ್ತೆ ಸಣ್ಣ ಪ್ರಮಾಣದ ಕೆಲಸಕ್ಕೆ ಮರಳಿ ಕರೆಸಿಕೊಳ್ಳುವ ಜನರಿಗೆ ಕೇಂದ್ರ ಸರ್ಕಾರವು ಉದ್ಯೋಗದಾತ ಹಾಗೂ ಉದ್ಯೋಗಿಯ ಪಿಎಫ್ ಪಾಲನ್ನು 2022 ರವರೆಗೆ ಪಾವತಿಸುತ್ತದೆ ಅಂಥ ಅವರು ಇದೇ ವೇಳೆ ಹೇಳಿದ್ದಾರೆ.

ಇದೇ ವೇಳೆ ಅವರು ಮಾತನಾಡಿ, . 2020ರಲ್ಲಿ ನಾವು ಎಂಜಿಎನ್ ಆರ್ ಇಜಿಎ ಬಜೆಟ್ ಅನ್ನು 60,000 ಕೋಟಿ ರೂ.ಗಳಿಂದ ಸುಮಾರು 1 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದ್ದೇವೆ ಅಂಥ ಹೇಳಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags