Zee News ಕನ್ನಡ

352k Followers

Pan-Aadhaar Link: ಇದು ಕೊನೆಯ ಅವಕಾಶ , ಆಧಾರ್ ಗೆ ಸಂಬಂಧಿಸಿದ ಈ ಕೆಲಸ ಮಾಡದೆ ಹೋದರೆ ಕಟ್ಟಬೇಕು 10 ಸಾವಿರ ರೂ ದಂಡ

23 Aug 2021.6:07 PM

ನವದೆಹಲಿ : Pan-Aadhaar Link: ಪ್ಯಾನ್ ಕಾರ್ಡ್ ಇಲ್ಲದೆ ಯಾವ ಕೆಲಸವನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ಪ್ಯಾನ್ ಕಾರ್ಡ್ (Pan card) ನಿಷ್ಕ್ರಿಯವಾಗಿದ್ದರೆ ಎಲ್ಲಾ ಕೆಲಸಗಳು ಅಪೂರ್ಣವಾಗಿ ಉಳಿಯುತ್ತವೆ. ಹೀಗಿರುವಾಗ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, ಆದಷ್ಟು ಬೇಗ ಈ ಕೆಲಸ ಮಾಡಿ.

ಕೆಲವು ದಿನಗಳ ಹಿಂದೆಯೇ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಈ ಬಾರಿ ತಪ್ಪಿದರೆ ಕಟ್ಟಬೇಕು 10 ಸಾವಿರ ರೂ ದಂಡ :
ನಿಗದಿತ ಸಮಯದ ಮಿತಿಯೊಳಗೆ ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ (Pan-Aadhaar Link) ಮಾಡದಿದ್ದರೆ, 10,000 ರೂಗಳ ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಪ್ಯಾನ್-ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಇದಕ್ಕೂ ಮೊದಲೇ ಪ್ಯಾನ್ ಕಾರ್ಡ್ ಅನ್ನು ಆಧಾರ್ (Aadhaar) ಜೊತೆ ಲಿಂಕ್ ಮಾದಿಸುವುದು ಅನಿವಾರ್ಯ.

ಇದನ್ನೂ ಓದಿ : LIC ಗ್ರಾಹಕರೇ ಎಚ್ಚರ..! ಕೈ ತಪ್ಪಿ ಹೋಗಬಹುದು ಜೀವಮಾನದ ಸಂಪಾದನೆ, ತಿಳಿದಿರಲಿ ಈ ವಿಚಾರ

ಇದು ಅಂತಿಮ ದಿನಾಂಕ :
ಸೆಪ್ಟೆಂಬರ್ 30, 2021ರ ಒಳಗೆ ಪ್ಯಾನ್ (PAN Card) ಅನ್ನು ಆಧಾರ್ ಜೊತೆ ಲಿಂಕ್ ಮಾದಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ನಿಗದಿತ ಅವಧಿಯೊಳಗೆ ಯಾರಾದರೂ ತನ್ನ ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡದಿದ್ದರೆ, ಆತ ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಈಗ ಮನೆಯಲ್ಲಿ ಕುಳಿತುಕೊಂಡೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಸುಲಭವಾಗಿ ಲಿಂಕ್ ಮಾಡಬಹುದು.

ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆ :
1. ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲು, ಮೊದಲು ww.incometaxindiaefiling.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
2. ಈ ವೆಬ್‌ಸೈಟ್‌ನಲ್ಲಿ ನೀವು 'ಆಧಾರ್ ಲಿಂಕ್' ಆಯ್ಕೆ ಕಾಣಿಸುತ್ತದೆ
3. ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಪರದೆಯ ಮೇಲೆ ಹೊಸ ಪೇಜ್ ತೆರೆಯುತ್ತದೆ.
4. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಕೆಲವು ವೈಯಕ್ತಿಕ ಮಾಹಿತಿಯನ್ನು ತುಂಬಬೇಕು.
5. ಇದರ ನಂತರ, ನೀವು ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಜೊತೆಗೆ ಲಿಂಕ್ ಆಗುತ್ತದೆ.

ಇದನ್ನೂ ಓದಿ : Gold Price Today : 9000 ರೂ. ಯಷ್ಟು ಅಗ್ಗವಾಯಿತು ಚಿನ್ನ , ಇಂದಿನ ಬೆಲೆ ತಿಳಿಯಿರಿ

ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗಲಿದೆ?
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೇ ಹೋದರೆ, ಪ್ಯಾನ್ ಕಾರ್ಡ್ ಬಳಸಲು ಸಾಧ್ಯವಾಗುವುದಿಲ್ಲ. ಯಾಕಂದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಬ್ಯಾಂಕ್ ಖಾತೆ (Bank account) ತೆರೆಯುವಲ್ಲಿ, ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆದುಕೊಳ್ಳುವಲ್ಲಿ ಅಥವಾ ಯಾವುದೇ ರೀತಿಯ ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

/strong>

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags