Zee News ಕನ್ನಡ

352k Followers

Rail Ticket Booking: ರೈಲಿನಲ್ಲಿ ಟಿಕೆಟ್ ಬುಕ್ ಮಾಡಲು ಇನ್ಮುಂದೆ ಈ ದಾಖಲೆಗಳು ಅಗತ್ಯ! IRCTCಯಿಂದ ಸಿದ್ಧತೆ

24 Aug 2021.1:44 PM

ನವದೆಹಲಿ: IRCTC Booking Update - ರೈಲಿನಲ್ಲಿ ಪ್ರಯಾಣಿಸುವವರಿಗಾಗಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಒಂದು ORCTC ಖಾತೆಯಿಂದ ನೀವು ತಿಂಗಳಿಗೆ 6 ಟಿಕೆಟ್ ಗಳನ್ನೂ ಬುಕ್ ಮಾಡಬಹುದಾಗಿತ್ತು. ಹೆಚ್ಚಿನ ಟಿಕೆಟ್ ಗಳನ್ನೂ ಬುಕ್ ಮಾಡಲು ನೀವು ನಿಮ್ಮ ಖಾತೆಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬೇಕು.

ಆದರೆ, ಇನ್ಮುಂದೆ ರೈಲು ಟಿಕೆಟ್ ಕಾಯ್ದಿರಿಸುವ ಈ ವಿಧಾನ ಬದಲಾಗಲಿದೆ. ಹೌದು, ಇನ್ಮುಂದೆ ನೀವು ಇದೀಗ ಒಂದು ಟಿಕೆಟ್ ಬುಕ್ ಮಾಡಲು ಕೂಡ ಆಧಾರ್ ವಿವರಗಳನ್ನು ನೀಡಬೇಕಾಗಲಿದೆ.

IRCTCಯಿಂದ ಟಿಕೆಟ್ ಬುಕಿಂಗ್ ನ ಹೊಸ ಸಿಸ್ಟಂ
ಇನ್ಮುಂದೆ ಆನ್ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಹೋದರೆ IRCTC ನಿಮ್ಮಿಂದ PAN, ಆಧಾರ್ ಅಥವಾ ಪಾಸ್ಪೋರ್ಟ್ ಮಾಹಿತಿಯನ್ನು ಕೇಳಬಹುದು. ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ಸಿಸ್ಟಂನಿಂದ ಹೊರ ಹಾಕಲು IRCTC ಈ ಹೆಜ್ಜೆಯನ್ನು ಇಡುತ್ತಿದೆ. IRCTC ಹೊಸದೊಂದು ವ್ಯವಸ್ಥೆಯ ಮೇಲೆ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ನೀವು ಆಧಾರ್ ಹಾಗೂ ಪ್ಯಾನ್ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. IRCTC ವೆಬ್ ಸೈಟ್ ಹಾಗೂ ಆಪ್ ಮೂಲಕ ಟ್ರೇನ್ ಟಿಕೆಟ್ ಬುಕ್ ಮಾಡಲು ವೆಬ್ ಸೈಟ್ ಗೆ ಲಾಗಿನ್ ಮಾಡಲು ಆಧಾರ್, ಪ್ಯಾನ್ ಹಾಗೂ ಪಾಸ್ಪೋರ್ಟ್ ನಂಬರ್ ನಮೂದಿಸಬೇಕಾಗಲಿದೆ.

PAN, Aadhaar ಜೊತೆಗೆ ಲಿಂಕ್ ಆಗಲಿದೆ ರೈಲು ಟಿಕೆಟ್
ರೇಲ್ವೆ ಭದ್ರತಾ ಪಡೆಯ ನಿರ್ದೇಶಕ ಅರುಣ್ ಕುಮಾರ್ ಹೇಳುವ ಪ್ರಕಾರ, IRCTC ಜೊತೆಗೆ ಐಡೆಂಟಿಟಿ ಡಾಕ್ಯೂಮೆಂಟ್ಸ್ ಲಿಂಕ್ ಮಾಡಿಸುವ ಯೋಜನೆಯೊಂದರ ಮೇಲೆ ವೇಗವಾಗಿ ಕಾರ್ಯ ನಡೆಯುತ್ತಿದೆ. ಈ ಮೊದಲು ವಂಚನೆಯ ವಿರುದ್ಧ ಜರುಗಿಸಲಾಗುತ್ತಿದ್ದ ಕ್ರಮ ಕೇವಲ ಹ್ಯೂಮನ್ ಇಂಟೆಲಿಜೆನ್ಸ್ ಮೇಲೆ ಆಧಾರಿತವಾಗಿತ್ತು. ಆದರೆ, ಅದು ಅಷ್ಟೊಂದು ಪ್ರಭಾವಶಾಲಿಯಾಗಿರಲಿಲ್ಲ. ಹೀಗಾಗಿ ನಾವು ಟಿಕೆಟ್ ಗಾಗಿ ಲಾಗ್ ಇನ್ ಮಾಡುವ ವೇಳೆ ಅದನ್ನು ಪ್ಯಾನ್, ಆಧಾರ್ ಹಾಗೂ ಗುರುತಿನ ಇತರೆ ಧಾಕಲೆಗಳ ಜೊತೆಗೆ ಲಿಂಕ್ ಮಾಡಿಸುವ ನಿರ್ಧಾರ ಕೈಗೊಂಡಿದ್ದೇವೆ. ಇದರಿಂದ ನಾವು ಟಿಕೆಟ್ ಬುಕ್ಕಿಂಗ್ ನಲ್ಲಾಗುವ ವಂಚನೆಯನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ- IRCTC Offer: ಮಹಿಳಾ ಪ್ರಯಾಣಿಕರಿಗೆ ರಕ್ಷಾಬಂಧನ್ ಕೊಡುಗೆ ನೀಡಿದ ರೈಲ್ವೆ

ಈ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು
'ಇದಕ್ಕಾಗಿ ನಮಗೆ ಒಂದು ನೆಟ್ವರ್ಕ್ ತಯಾರಿಸುವ ಅಗತ್ಯತೆ ಇದೆ. ಆಧಾರ್ ಪ್ರಾಧಿಕಾರದ ಜೊತೆಗಿನ ನಮ್ಮ ಕೆಲಸ ಹತ್ತಿರ ಹತ್ತಿರ ಮುಗಿಯುತ್ತಾ ಬಂದಿದೆ. ಇದೆ ವ್ಯವಸ್ಥೆ ಒಂದೊಮ್ಮೆ ಸಿದ್ಧವಾಗ ಬಳಿಕ, ಅದನ್ನು ಜಾರಿಗೊಳಿಸಿ ಅದರ ಬಳಕೆಯನ್ನು ಆರಂಭಿಸಲಿದ್ದೇವೆ' ಎಂದು ಅರುಣ್ ಕುಮಾರ್ ಹೇಳಿದ್ದಾರೆ. '2019ರ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ದಲ್ಲಾಳಿಗಳ ವಿರುದ್ಧ ನಾವು ಕ್ರಮ ಜರುಗಿಸಲು ಆರಂಭಿಸಿದ್ದೆವು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 14357 ದಲ್ಲಾಳಿಗಳನ್ನು ಬಂಧಿಸಲಾಗಿದೆ. ಇದುವರೆಗೆ 28.34 ಕೋಟಿ ನಕಲಿ ಟಿಕೆಟ್ ಜಪ್ತಿ ಮಾಡಲಾಗಿದೆ ಎಂದು ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-Indian Railways: ನಿಮ್ಮ ರೈಲ್ವೆ ಟಿಕೆಟಿನಲ್ಲಿ ಬೇರೆ ವ್ಯಕ್ತಿಯೂ ಪ್ರಯಾಣಿಸಬಹುದೇ! ರೈಲ್ವೆಯ ಈ ಸೌಲಭ್ಯ ತಿಳಿಯಿರಿ

ರೈಲು ಭದ್ರತೆಯ ಆಪ್ ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ ಎಂದಿರುವ ಅರುಣ್ ಕುಮಾರ್, ಈ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ. 6049 ಸ್ಟೇಷನ್ ಗಳು ಹಾಗೂ ಎಲ್ಲಾ ಪ್ಯಾಸಿಂಜರ್ ಟ್ರೇನ್ ಕೋಚ್ ಗಳಲ್ಲಿ CCTV ಕ್ಯಾಮೆರಾ ಅಳವಡಿಸುವ ಯೋಜನೆಯ ಮೇಲೂ ಕೂಡ ತೀವ್ರ ಗತಿಯಲ್ಲಿ ಕೆಲಸ ಮುಂದುವರೆದಿದೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ-Train Ticket Booking: ಈಗ ಟ್ರೈನ್ ಟಿಕೆಟ್ ಬುಕಿಂಗ್ ವೇಳೆ ಈ ಮಾಹಿತಿ ನೀಡುವುದು ಕಡ್ಡಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags