Kannada News Now

1.8M Followers

BIG UPDATE : ನಾಳೆ 'SSLC ಫಲಿತಾಂಶ' ಪ್ರಕಟವಾಗಲ್ಲ - 'SSLC ಪರೀಕ್ಷಾ ಮಂಡಳಿ' ಸ್ಪಷ್ಟನೆ

06 Aug 2021.5:41 PM

ಬೆಂಗಳೂರು : ಜುಲೈ.19 ಮತ್ತು 22ರಂದು ಎರಡು ದಿನ ಕೊರೋನಾ ಆತಂಕದ ನಡುವೆಯೂ ಯಶಸ್ವಿಯಾಗಿ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ( SSLC Exam Result ) ನಾಳೆ ಪ್ರಕಟವಾಗಲಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದ್ರೇ.. ಆಗಸ್ಟ್ 7ರ ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ( SSLC Exam ) ಫಲಿತಾಂಶ ಪ್ರಕಟವಾಗೋದಿಲ್ಲ ಎಂಬುದಾಗಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ( Karnataka Secondary Education Examination Board ) ಸ್ಪಷ್ಟ ಪಡಿಸಿದೆ.

BIG NEWS : ಕೆಲ ಹೊತ್ತಿನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ : ಹೀಗಿದೆ ಸಂಭಾವ್ಯ ಖಾತೆ ಪಟ್ಟಿ

ಈ ಕುರಿತಂತೆ SSLC ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಾ ಅವರು ಮಾಹಿತಿ ನೀಡಿದ್ದು, ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಂತ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

ಆ ಕುರಿತಂತೆ ಸದ್ಯದಲ್ಲೇ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ನಾಳೆ ಪ್ರಕಟಗೊಳ್ಳಲಿದೆ ಎಂಬುದಾಗಿ ಹೇಳಲಾಗುತ್ತಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ, ಮುಂದೂಡಿಕೆಯಾದಂತೆ ಆಗಿದೆ.

ಮೈಸೂರು ವಿವಿ ಪ್ರಾಧ್ಯಾಪಕ ರಾಸಲೀಲೆ ಪುರಾಣಕ್ಕೆ ಬಿಗ್ ಟ್ವಿಸ್ಟ್ : ತನಿಖಾಧಿಕಾರಿಗಳ ಮುಂದೆ ಉಲ್ಟಾ ಹೊಡೆದ ಯುವತಿ

ಅಂದಹಾಗೇ ಕೊರೋನಾ 2ನೇ ಅಲೆಯ ಆರ್ಭಟದ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಜುಲೈ.19 ಮತ್ತು 22ರಂದು ಬಹು ಆಯ್ಕೆ ಮಾದರಿಯಲ್ಲಿ ನಡೆಸಲಾಗಿತ್ತು. ಈ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತದೆ ಎಂಬುದಾಗಿ ಹೇಳಲಾಗಿತ್ತು. ಆದ್ರೇ.. ನಾಳೆ ಪ್ರಕಟಗೊಳ್ಳುವುದಿಲ್ಲ ಎಂಬುದಾಗಿ ಎಸ್ ಎಸ್ ಎಲ್ ಸಿ ಬೋರ್ಡ್ ಸ್ಪಷ್ಟ ಪಡಿಸಿದೆ.

ಶಾಸಕ ಜಮೀರ್ ಅಹ್ಮದ್ ನಿವಾಸ, ಕಚೇರಿ ಮೇಲೆ ಇಡಿ ದಾಳಿ ಕುರಿತಂತೆ ಡಿಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ.?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags