Kannada News Now

1.8M Followers

BIGGNEWS: ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಆಗಸ್ಟ್‌ 23ರಿಂದ ಶುರು : ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಘೋಷಣೆ

09 Aug 2021.4:12 PM

*ಅಕ್ಷರ ಜೊತೆಗೆ ವಸಂತ್‌ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಆಗಸ್ಟ್‌ 23ರಿಂದ ಶುರುವಾಗಲಿದೆ ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಘೋಷಣೆ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಫ್ರೌಢ ಶಿಕ್ಷಣ ಮಂಡಳಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಫಲಿತಾಂಶ ಪ್ರಕಟಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು.

BIGG BREAKING NEWS : 'SSLC ಪರೀಕ್ಷೆ ಫಲಿತಾಂಶ' ಘೋಷಣೆ : ಶೇ.99.9ರಷ್ಟು ವಿದ್ಯಾರ್ಥಿಗಳು ಪಾಸ್ - ಶಿಕ್ಷಣ ಸಚಿವ ಬಿಸಿ ನಾಗೇಶ್

Breaking News : ಲವ್‌ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ದುರಂತ : ವಿದ್ಯುತ್‌ ತಂತಿ ಸ್ಪರ್ಶಿಸಿ ʼಸಹಾಯಕ ಫೈಟರ್‌ ವಿವೇಕ್ʼ‌ ಸಾವು

ಇದೇ ವೇಳೆ ಅವರು ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಲು ತಂದೆ -ತಾಯಿ ಹೆದರುತ್ತಿದ್ದಾರೆ ಅಂಥ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಾವುದೇ ರೀತಿಯಲ್ಲಿ ಅಡೆ ತಡೆ ಇಲ್ಲದೇ ಮಕ್ಕಳಲ್ಲಿ ಸೊಂಕು ಉಂಟಾಗಾದಂತೆ ನಡೆಸಲಾಗಿದೆ, ಯಶಸ್ವಿಯಾಗಿ ಕೂಡ ಪರೀಕ್ಷೆ ಮುಗಿದಿದೆ ಈ ಹಿನ್ನಲೆಯಲ್ಲಿ ಮಕ್ಕಳ ತಂದೆ-ತಾಯಿಯಗಳು ಶಾಲೆಗೆ ಕಳುಹಿಸುತ್ತಾರೆ ಎನ್ನುವ ನಂಬಿಕೆ ಇದೇ ಅಂತ ಹೇಳಿದರು.

ಇದೇ ವೇಳೆ ಶಾಲಾ ವೇಳೇಯಲ್ಲಿ ಎಲ್ಲಾ ಮಾರ್ಗಸೂಚನೆಗಳನ್ನು ಅನುಸರಿಸಲಾಗುವುದು ಅಂತ ಹೇಳಿದರು.
ಇನ್ನು ಈ ವೇಳೆ ಭಾಗವಹಿಸಿದ 99.9% ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಒಬ್ಬ ವಿದ್ಯಾರ್ಥಿ ತನ್ನ ಬದಲಿಗೆ ಬೇರೆಯವ್ರನ್ನ ಪರೀಕ್ಷೆ ಬರೆಯಲು ಕಳುಹಿಸಿದ್ದು, ಆತ ಸಿಕ್ಕಿಬಿದ್ದಿರೋದ್ರಿಂದ ಆ ವಿದ್ಯಾರ್ಥಿಯನ್ನ ಪರೀಕ್ಷೆಯಲ್ಲಿ ಫೇಲ್‌ ಮಾಡಲಾಗಿದೆ ಎಂದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags