ಕನ್ನಡದುನಿಯಾ

1.6M Followers

BIG NEWS: ವಿದ್ಯಾರ್ಥಿಗಳೇ ಗಮನಿಸಿ.! ಆ. 16 ರಿಂದ ಪಿಯುಸಿ ಆನ್ಲೈನ್ ಕ್ಲಾಸ್ ಆರಂಭ

11 Aug 2021.06:50 AM

ಬೆಂಗಳೂರು: ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರಕಟವಾದ ನಂತರ ಆಗಸ್ಟ್ 10 ರಿಂದಲೇ ಪ್ರಥಮ ಪಿಯುಸಿ ದಾಖಲಾತಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 31 ರವರೆಗೆ ದಂಡ ಶುಲ್ಕವಿಲ್ಲದೆ ಫಸ್ಟ್ ಪಿಯುಸಿಗೆ ಪ್ರವೇಶ ಪಡೆಯಬಹುದು.

ಸೆಪ್ಟಂಬರ್ 1 ರಿಂದ 11 ರವರೆಗೆ ವಿಳಂಬ ದಾಖಲಾತಿಗೆ 670 ರೂಪಾಯಿ ದಂಡ ಶುಲ್ಕದೊಂದಿಗೆ ಅವಕಾಶ ನೀಡಲಾಗಿದೆ.

2890 ರೂಪಾಯಿ ವಿಶೇಷ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 13 ರಿಂದ 25ರವರೆಗೆ ಅವಕಾಶ ನೀಡಲಾಗಿದ್ದು, ಆಗಸ್ಟ್ 16 ರಿಂದ ಆನ್ಲೈನ್ ತರಗತಿಗಳನ್ನು ಆರಂಭಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags