Kannada News Now

1.8M Followers

Karnataka SSLC Exam 2021 : ಕೊರೊನಾ ಆತಂಕದಿಂದ `SSLC' ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 3 ನೇ ವಾರದಲ್ಲಿ ಮತ್ತೆ ಪರೀಕ್ಷೆ

11 Aug 2021.05:53 AM

ಬೆಂಗಳೂರು : ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 3 ನೇ ವಾರದಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ವಾಹನ ಸವಾರರೇ ಗಮನಿಸಿ : ಇನ್ಮುಂದೆ ನಿಮ್ಮ ಮೇಲೆ ಕಣ್ಣಿಡುತ್ತೆ ʼಸ್ಪೀಡ್ ಟ್ರ್ಯಾಕರ್ ಕ್ಯಾಮೆರಾʼ..! ವೇಗವಾಗಿ ವಾಹನ ಓಡಿಸಿದ್ರೆ ಲೈಸನ್ಸ್‌ ರದ್ದು

ಕೊರೊನಾ ಆತಂಕದಿಂದ ಜುಲೈ 19, 21 ರಂದು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 3 ನೇ ವಾರದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಯತ್ನ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

ತಾಂತ್ರಿಕನ ಮಾತು ಕೇಳಿ ಮಾನವ ಬಲಿ ನೀಡಲು 8 ವರ್ಷದ ಬಾಲಕಿಯ ಹತ್ಯೆ: ನಾಲ್ವರ ಬಂಧನ

ಈಗಾಗಲೇ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದ 5063 ವಿದ್ಯಾರ್ಥಿಗಳು ಕೊರೊನಾ ಆತಂಕದಿಂದ ಪರೀಕ್ಷೆ ಬರೆದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 3 ನೇ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಯತ್ನವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

Corona Vaccine : ರಾಜ್ಯದ 9,10 ನೇ ತರಗತಿ ವಿದ್ಯಾರ್ಥಿಗಳ ತಂದೆ-ತಾಯಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ : ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

ಇನ್ನು ಎಸ್‌ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 8.76,581 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ವರ್ಷ A+ ಗ್ರೇಡ್ ಅನ್ನು 1,28,931 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಎ ಗ್ರೇಡ್ ಅನ್ನು 2,50,317 ವಿದ್ಯಾರ್ಥಿಗಳು ಪಡೆದಿದ್ದಾರೆ. ಬಿ ಗ್ರೇಡ್ ಅನ್ನು 2,87,684 ವಿದ್ಯಾರ್ಥಿಗಳು ಪಡೆದಿದ್ದಾರೆ. ಸಿ ಗ್ರೇಡ್ ಅನ್ನು 1,13,610 ವಿದ್ಯಾರ್ಥಿಗಳು ಆಗಿದ್ದಾರೆ. ಈ ಬಾರಿ 8,76,581 ವಿದ್ಯಾರ್ಥಿಗಳಲ್ಲಿ 4,72,643 ವಿದ್ಯಾರ್ಥಿಗಳು ಹಾಗೂ 4,01,282 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.

Weather Update : ರಾಜ್ಯದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ : ಕರಾವಳಿ, ಮಲೆನಾಡಿನಲ್ಲಿ ಹೈ ಅಲರ್ಟ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags