Kannada News Now

1.8M Followers

ಮಕ್ಕಳನ್ನು ಕೊರೋನಾದಿಂದ ರಕ್ಷಿಸಲು ಮಹತ್ವದ ಘೋಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ : ಏನದು ಗೊತ್ತಾ.?

12 Aug 2021.2:08 PM

ಮಂಗಳೂರು : ರಾಜ್ಯದಲ್ಲಿ ಕೊರೋನಾ 3ನೇ ಅಲೆಯ ಆರಂಭಟ ಶುರುವಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ 10ರವರೆಗೆ ಹತ್ತೇ ದಿನಗಳಲ್ಲಿ 505 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಕ್ಕಳನ್ನು ಕೊರೋನಾದಿಂದ ರಕ್ಷಿಸೋದಕ್ಕೆ ಮಹತ್ವದ ಘೋಷಣೆ ಮಾಡಿದ್ದಾರೆ.

ಅಚ್ಚರಿ ಆದ್ರೂ ಸತ್ಯ..! ಬೆಂಗಳೂರಿನಲ್ಲಿ ಒಂದೇ ಮೊಬೈಲ್ ಸಂಖ್ಯೆ ಕೊಟ್ಟು, 12 ಅಪರಿಚಿತರು ಕೋವಿಡ್ ಟೆಸ್ಟ್.!

ಹೌದು.. ರಾಜ್ಯಾಧ್ಯಂತ ಕೊರೋನಾ 3ನೇ ಅಲೆಯ ಭೀತಿಯ ಸಂದರ್ಭದಲ್ಲಿಯೇ, ಮಕ್ಕಳನ್ನು ಕೋವಿಡ್ ನಿಂದ ರಕ್ಷಿಸೋದಕ್ಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಮಕ್ಕಳ ಐಸಿಯು ಸಂಖ್ಯೆಯನ್ನು ಹೆಚ್ಚಿಸೋದ್ರ ಜೊತೆಗೆ, ಈಗಿರುವಂತ ಐಸಿಯುವಿನಲ್ಲಿ ಶೇ.50ರಷ್ಟು ಮಕ್ಕಳಿಗಾಗಿಯೇ ಮೀಸಲಿಡಲು ನಿರ್ಧರಿಸಿರೋದಾಗಿ ತಿಳಿಸಿದ್ದಾರೆ.

BIG BREAKING NEWS : 'ಟ್ವಿಟ್ಟರ್ ನಿಯಮ' ಉಲ್ಲಂಘಿಸಿದ ಆರೋಪ : 'ಕಾಂಗ್ರೆಸ್ ಪಕ್ಷ'ದ ಅಧಿಕೃತ ಟ್ಟಿಟ್ಟರ್ ಖಾತೆ ಲಾಕ್

ಈ ಕುರಿತಂತೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಕ್ಕಳಿಗೆ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ಆಯಾ ಪ್ರದೇಶದಲ್ಲಿಯೇ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳಿಗಾಗಿ ಐಸಿಯು ಆಸ್ಪತ್ರೆಗಳನ್ನು ಹೆಚ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

BIGG NEWS : ಬೆಂಗಳೂರಿನ 'ಮಕ್ಕಳ ಪೋಷಕ'ರೇ ಹುಷಾರ್..! ಕೊರೋನಾ 3ನೇ ಅಲೆ ಸ್ಟಾರ್ಟ್, 505 ಮಕ್ಕಳಿಗೆ ಕೋವಿಡ್ ದೃಢ

ಇನ್ನೂ ಮಕ್ಕಳನ್ನು ಕೊರೋನಾದಿಂದ ದೂರವಿಡಲು ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲು ಸೂಚಿಸಲಾಗಿದೆ. ಇಮ್ಯುನಿಟಿ ಸದೃಢಗೊಳಿಸುವಂತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೌಷ್ಠಿಕ ಕೊರತೆಯಾಗದಂತೆ ಕ್ರಮ ಕೈಗೊಂಡು, ಮಕ್ಕಳನ್ನು ಕೊರೋನಾದಿಂದ ರಕ್ಷಿಸುವಂತ ಕೆಲಸ ಮಾಡಲಾಗುತ್ತದೆ. ಮಕ್ಕಳನ್ನು ಕೋವಿಡ್ ಸೋಂಕಿನಿಂದ ದೂರ ಉಳಿಸಲು ಪ್ರತಿ ಗ್ರಾಮದಲ್ಲಿಯೂ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳುವ ಮೂಲಕ, ಮಹತ್ವದ ಘೋಷಣೆ ಮಾಡಿದ್ದಾರೆ.

Pension Scheme : ನಿವೃತ್ತಿಯ ನಂತ್ರ ನೀವು ಮಾಸಿಕ 2 ಲಕ್ಷ ಪಿಂಚಣಿ, 4 ಕೋಟಿ ಉಳಿತಾಯ ಪಡೆಯಬೇಕಾ.? ಹಾಗಿದ್ದರೇ ಈ ಸುದ್ದಿ ಓದಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags