Kannada News Now

1.8M Followers

BIG NEWS : ಕೊರೊನಾ ಭೀತಿ : ಆಗಸ್ಟ್ 15 ರ ಬಳಿಕ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ?

12 Aug 2021.11:56 AM

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

'ಪ್ರೋತ್ಸಾಹ ಧನ' : 'ಅಲ್ಪಸಂಖ್ಯಾತ ಸಮುದಾಯ'ದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗಿದ್ದು, ಶ್ರಾವಣ ಮಾಸದ ಸೋಮವಾರ ಮತ್ತು ಭೀಮನ ಅಮಾವಾಸ್ಯೆ ದಿನ ಜನ ದೇವಸ್ಥಾನಗಳಿಗೆ ಲಗ್ಗೆ ಇಟ್ಟಿದ್ದರು. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

Aadhar Card update : ಇನ್ಮುಂದೆ ಮನೆಯಲ್ಲೇ ಆಧಾರ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು!

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾದ್ರೆ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಬಳಿಕ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಪ್ರಕರಣ : ಸತೀಶ್ ರೆಡ್ಡಿ ಮನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ, ಪರಿಶೀಲನೆ

ರಾಜ್ಯದಲ್ಲಿ ಮಹಾಮಾರಿ ಕೊರೋನಾ 3ನೇ ಅಲೆಯ ( Corona 3rd Wave ) ಭೀತಿ ಶುರುವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೋವಿಡ್-19 3ನೇ ಅಲೆಯ ಹೊಡೆತ ಹೆಚ್ಚಾಗಿದೆ. ಮಕ್ಕಳಲ್ಲಿಯೇ ಹೆಚ್ಚು ಈ ಬಾರಿ ಕೊರೋನಾ ಕೇಸ್ ಪತ್ತೆಯಾಗಿರೋದು ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಸಿಲಿಕಾನ್ ಸಿಟಿಯ ಜನರಲ್ಲಿ ಆತಂಕ ಉಂಟು ಮಾಡಿದೆ.

BIG BREAKING NEWS : 'ಟ್ವಿಟ್ಟರ್ ನಿಯಮ' ಉಲ್ಲಂಘಿಸಿದ ಆರೋಪ : 'ಕಾಂಗ್ರೆಸ್ ಪಕ್ಷ'ದ ಅಧಿಕೃತ ಟ್ಟಿಟ್ಟರ್ ಖಾತೆ ಲಾಕ್

ಕಳೆದ ಆಗಸ್ಟ್ 1 ರಿಂದ 10ರವರೆಗೆ, ಬೆಂಗಳೂರಿನಲ್ಲಿ 10 ದಿನದಲ್ಲಿ 505 ಮಕ್ಕಳಿಗೆ ಕೊರೋನಾ ಸೋಂಕು ( Corona Virus ) ತಗುಲಿದೆ. ಇವರಲ್ಲಿ 246 ಹೆಣ್ಣ ಮಕ್ಕಳು, 259 ಗಂಡು ಮಕ್ಕಳು ಸೇರಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags