Kannada News Now

1.8M Followers

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 'ಮಕ್ಕಳಿಗೆ' ರಾಜ್ಯ ಸರ್ಕಾರದಿಂದ 'ಬಿಗ್‌ ಗಿಫ್ಟ್‌': ವಿದ್ಯಾರ್ಥಿವೇತನದಲ್ಲಿ ಹೆಚ್ಚಳ, ಇಲ್ಲಿದೆ ಮಾಹಿತಿ

14 Aug 2021.7:07 PM

*ಅಕ್ಷರ

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕೆ ಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಹೀಗಿದೆ:

  • ಕೆಜಿ/ಪ್ರಿಕೆಜಿ/ನರ್ಸರಿ (ಮೂರರಿಂದ ಐದು) ರೂ.5000/
  • ಒಂದರಿಂದ ನಾಲ್ಕನೆ ತರಗತಿ ರೂ.5000/
  • ಐದರಿಂದ ಎಂಟನೆ ತರಗತಿ ರೂ.8000/
  • ಒಂಬತ್ತರಿಂದ ಹತ್ತನೇ ತರಗತಿ 10000/
  • ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಹೆಚ್ ಇತ್ಯಾದಿ ರೂ. 15000/
  • ಪಾಲಿಟೆಕ್‌/ಡಿಪ್ಲೋಮಾ/ಐಟಿಐ ರೂ20000/
  • ಬಿಎಸ್‌ಸಿ ನರ್ಸಿಂಗ್‌/ಜಿಎನ್‌ಎಂ/ಎಎನ್‌ಎಮ್‌/ಪ್ಯಾರಮೆಡಿಕಲ್‌ ರೂ 40000/
  • ಡಿಎಡ್‌ ರೂ 25000/
  • ಬಿಎಡ್‌ ರೂ 35000/
  • ಎಲ್‌ಎಲ್‌ಬಿ/ಎಎಲ್‌ಎಮ್‌ ರೂ 3000/
  • ಪದವಿ ತರಗತಿಗೆ ರೂ 25000/-
  • ಸ್ನಾಕೋತ್ತರ ಪದವಿ ತರಗತಿಗಳಿಗೆ 35000/-
  • ಎಂಜಿನೀಯರಿಂಗ್/ವೈದ್ಯಕೀಯರೂ. 50,000/- ಗಳ ಪ್ರೋತ್ಸಾಹ ಧನ ನೀಡಲಾಗುವುದು. (ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ ಶೇ.50 ಪ.ಜಾ / ಪ.ಪಂ ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು)
  • ಎಂಟೆಕ್‌/ಎಂಇ 60,000/-
  • ಮೆಡಿಕಲ್‌ 60,000/-
  • ಎಂಡಿ 75,000/-
  • ಪಿಹೆಚ್‌ಡಿ/ಎಂಫಿಎಲ್‌ 25000/

ವೆಬ್‌ಸೈಟ್‌ ವಿಳಾಸ: https://serviceonline.gov.in/karnataka

ಸಲ್ಲಿಸಬೇಕಾದ ದಾಖಲೆಗಳು
- ಮಂಡಳಿಯಲ್ಲಿ ನೋಂದಣಿಯಾಗಿರುವ ಕುರಿತು ದಾಖಲೆ (ಸ್ಮಾರ್ಟ್‌ಕಾರ್ಡ್‌ ಅಥವಾ ಗುರುತಿನ ಚೀಟಿಯ ದೃಢೀಕೃತ ಪ್ರತಿ)
- ವಿದ್ಯಾರ್ಥಿ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.

- ದೃಢೀಕೃತ ಅಂಕಪಟ್ಟಿ ಮತ್ತು ವ್ಯಾಸಂಗ ಪ್ರಮಾಣ ಪತ್ರ.
ಕಾರ್ಮಿಕರಿಗೆ ವೈದ್ಯಕೀಯ ನೆರವು : ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್‍ಪ್ಲಾಂಟೇಷನ್, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೊಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ ರೂ. 1,000/- ದಿಂದ ರೂ,10,000/-ವರೆಗೆ ಮತ್ತು ಆರೋಗ್ಯ ತಪಾಸಣೆಗೆ ರೂ. 500/-ರಿಂದ ರೂ. 1000/-ವರೆಗೆ ಧನ ಸಹಾಯ ನೀಡಲಾಗುವುದು. ಕಾರ್ಮಿಕರಿಗೆ ಕೆಲಸದ ವೇಳೆಯಲ್ಲಿ ಅಪಘಾತವಾದಲ್ಲಿ ಧನ ಸಹಾಯ: ಕನಿಷ್ಠ ರೂ. 1000/- ಗರಿಷ್ಠ ರೂ 3000/- ವರೆಗೆ ಧನ ಸಹಾಯ ನೀಡಲಾಗುವುದು. ಸೌಲಭ್ಯ ಪಡೆಯುವ ಕಾರ್ಮಿಕರು ಅಪಘಾತವಾದ 3 ತಿಂಗಳೊಳಗೆ ಅರ್ಜಿ ಸಲ್ಲಿಸತಕ್ಕದ್ದು.

BIGG BREAKING NEWS : ಕೊರೋನಾ 3ನೇ ಅಲೆ ತಡೆಗೆ ಸಿಎಂ ಬೊಮ್ಮಾಯಿ ಮಾಸ್ಟರ್ ಪ್ಲಾನ್ : ಶಾಲೆಗಳ ಆರಂಭಕ್ಕೂ ಗ್ರೀನ್ ಸಿಗ್ನಲ್

Unbelievable But True : ವಿಭಜನೆಯ ನಂತ್ರವೂ ಪಾಕಿಸ್ತಾನದಲ್ಲಿ ಒಂದು ವರ್ಷ ʼಭಾರತೀಯ ಕರೆನ್ಸಿʼ ಬಳಕೆಯಲ್ಲಿತ್ತು.!!



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags