ವಿಜಯವಾಣಿ

505k Followers

ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಹೆಣ್ಣುಮಕ್ಕಳಿಗೂ ಪ್ರವೇಶಾವಕಾಶ

15 Aug 2021.11:17 AM

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ ಭಾರತವು ಲೈಂಗಿಕ ಸಮಾನತೆಯತ್ತ ಹೊಸ ಹೆಜ್ಜೆ ಇಡಲಿದೆ. ಈವರೆಗೆ ಬಾಲಕರಿಗೆ ಮಾತ್ರ ಪ್ರವೇಶಾವಕಾಶ ನೀಡುತ್ತಿದ್ದ ದೇಶದ ಪ್ರತಿಷ್ಠಿತ ಸೈನಿಕ ಶಾಲೆಗಳ ಬಾಗಿಲುಗಳು, ಇನ್ನು ಮುಂದೆ ಬಾಲಕಿಯರಿಗೂ ತೆರೆದಿವೆ. ಇಂದು ದೆಹಲಿಯ ಕೆಂಪುಕೋಟೆಯಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.

'ಲಕ್ಷಾಂತರ ಹೆಣ್ಣುಮಕ್ಕಳಿಂದ ತಮಗೂ ಸೈನಿಕ ಶಾಲೆಯಲ್ಲಿ ಓದುವ ಆಸೆಯಿದೆ ಎಂಬ ಸಂದೇಶಗಳು ಬರುತ್ತಿದ್ದವು. ಸೈನಿಕ ಶಾಲೆಗಳ ಬಾಗಿಲು ಅವರಿಗೂ ತೆರೆಯಬೇಕು' ಎಂದ ಮೋದಿ, ಎರಡೂವರೆ ವರ್ಷಗಳ ಹಿಂದೆ ಮಿಜೊರಾಂನ ಸೈನಿಕ ಶಾಲೆಯನ್ನು ಪ್ರಾಯೋಗಿಕವಾಗಿ ಬಾಲಕಿಯರಿಗೆ ತೆರೆಯಲಾಯಿತು. ಈಗ ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲೂ ಹೆಣ್ಣುಮಕ್ಕಳಿಗೆ ಅವಕಾಶ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಹಲವು ಅಭಿವೃದ್ಧಿ ಯೋಜನೆ ಘೋಷಣೆ

ಅತ್ಯಂತ ಶಿಸ್ತುಬದ್ಧ ಶಿಕ್ಷಣ ಒದಗಿಸುವ ಮಾದರಿ ಶಾಲೆಗಳಾದ ಸೈನಿಕ ಶಾಲೆಗಳನ್ನು ಭಾರತದ ರಕ್ಷಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಸೈನಿಕ್​ ಸ್ಕೂಲ್ಸ್​ ಸೊಸೈಟಿ ನಡೆಸುತ್ತದೆ. ರಕ್ಷಣಾ ಪಡೆಗಳಲ್ಲಿ ಉನ್ನತ ಅಧಿಕಾರಿಗಳಾಗಿ ಭವಿಷ್ಯ ರೂಪಿಸಿಕೊಳ್ಳಲು ಈ ಶಾಲೆಗಳು ಉತ್ತಮ ವೇದಿಕೆಗಳಾಗಿವೆ. ದೇಶಾದ್ಯಂತ 33 ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶಾವಕಾಶ ನೀಡಲಾಗುತ್ತದೆ.

'ಶಿಕ್ಷಣವಿರಲಿ, ಕ್ರೀಡೆಗಳಿರಲಿ, ಬೋರ್ಡ್​ ಫಲಿತಾಂಶಗಳಾಗಲಿ ಅಥವಾ ಒಲಿಂಪಿಕ್ಸ್​ ಪದಕಗಳಾಗಲಿ, ಎಲ್ಲದರಲ್ಲೂ ನಮ್ಮ ಹೆಣ್ಣುಮಕ್ಕಳು ಮಹತ್ತರ ಸಾಧನೆ ತೋರಿಸುತ್ತಿರುವುದು ರಾಷ್ಟ್ರಕ್ಕೆ ಗರ್ವದ ವಿಚಾರ. ಇಂದು ಭಾರತದ ಹೆಣ್ಣುಮಕ್ಕಳು ತಮ್ಮ ಸ್ಥಾನವನ್ನು ಗಳಿಸಲು ಉತ್ಸುಕರಾಗಿದ್ದಾರೆ' ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್)

ಅಂತರಿಕ್ಷಕ್ಕೆ ಮಾನವಯಾನ ನಡೆಸುವ 4ನೇ ರಾಷ್ಟ್ರವಾಗಲಿದೆ, ಭಾರತ : ರಾಷ್ಟ್ರಪತಿ ಕೋವಿಂದ್​

ಸೋಂಕು ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಆಗಸ್ಟ್​ 23 ರಿಂದ ಶಾಲೆ ಆರಂಭ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags