ಈ ಸಂಜೆ

803k Followers

ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು..!

15 Aug 2021.1:19 PM

ತುಮಕೂರು, ಆ.15- ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಹಳೆ ವಿದ್ಯಾರ್ಥಿ ಸೇರಿದಂತೆ ಮೂವರು ವಿದ್ಯಾರ್ಥಿಗಳು ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಹಳೆ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಕೋರಾ ಪೊ ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕರಿಕೆರೆ ಗ್ರಾಮದ ಚಂದನ್ (16) ಮೃತಪಟ್ಟ ಹಳೆ ವಿದ್ಯಾರ್ಥಿ.
ಇತಾನು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಂದನ್ ಹಾಗೂ ಇದೇ ಶಾಲೆಯಲ್ಲಿ 10ನೆ ತರಗತಿ ವ್ಯಾಸಂಗ ಮಾಡುತ್ತಿರುವ ಪವನ್ ಮತ್ತು ಶಶಾಂಕ್ ಜತೆ ಇಂದು ಬೆಳಗ್ಗೆ ಶಾಲೆ ಬಳಿ ಬಂದಿದ್ದಾನೆ.

ಆ ಸಂದರ್ಭದಲ್ಲಿ ಶಿಕ್ಷಕರು ಧ್ವಜಸ್ತಂಭ ನಿಲ್ಲಿಸಲು ಹೇಳಿದ್ದಾರೆ. ಅದೇ ಉತ್ಸುಕದಲ್ಲಿದ್ದ ಈ ಮೂವರು ಧ್ವಜಸ್ತಂಭ ನಿಲ್ಲಿಸುವ ವೇಳೆ ಮೇಲೆ ಹಾದು ಹೋಗಿದ್ದ 75 ಕೆ.ವಿ. ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಸ್ಪರ್ಶಿಸಿದೆ.

ತಕ್ಷಣ ಇವರು ಕೂಗಿಕೊಂಡಿದ್ದಾರೆ. ಶಾಲೆಯಲ್ಲಿದ್ದ ಶಿಕ್ಷಕರು ಹೊರಗೆ ಬರುವಷ್ಟರಲ್ಲಿಯೇ ನೋಡು ನೋಡುತ್ತಿದ್ದಂತೆ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನ ಜತೆಯಲ್ಲಿದ್ದ ಪವನ್ ಮತ್ತು ಶಶಾಂಕ್ ಗಂಭೀರ ಗಾಯಗೊಂಡಿದ್ದು , ತಕ್ಷಣ ಇವರನ್ನು ಶಿಕ್ಷಕರು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸುದ್ದಿ ತಿಳಿದ ಬಾಲಕರ ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ಬಳಿ ಜಮಾಯಿಸಿ ಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಾತುರಿಯಲ್ಲಿ ಧ್ವಜಾರೋಹಣ ನೆರವೇರಿಸಲು ಮಕ್ಕಳಿಂದ ಧ್ವಜಸ್ತಂಭ ನಿಲ್ಲಿಸಲು ಹೇಳಿರುವುದು ಅವರ ನಿರ್ಲಕ್ಷ್ಯಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದು ಕೋರಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹರೀಶ್, ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ರಂಗಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಪಂ ಪಿಡಿಒಗಳು , ಶಿಕ್ಷಣ ಇಲಾಖೆಯ ಅಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದರು. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags