ಕನ್ನಡದುನಿಯಾ

1.6M Followers

5 ವರ್ಷದ ಬಾಲಕಿಗೆ ನೀಲಿಚಿತ್ರ ತೋರಿ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಒಂದು ವರ್ಷ ಜೈಲು

25 Aug 2021.07:34 AM

ಐದು ವರ್ಷದ ಬಾಲಕಿಗೆ ನೀಲಿ ಚಿತ್ರ ತೋರಿಸಿ ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಂಡ 30 ವರ್ಷ ವಯಸ್ಸಿನ ಶಿಶುಕಾಮಿಯೊಬ್ಬನಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ, 10,000 ರೂ.ಗಳ ದಂಡ ಹಾಕಿದೆ.

ನ್ಯಾಯಾಲಯದ ಮುಂದೆ ಹಾಜರಾಗಿ ತನಗಾದ ಅನ್ಯಾಯವನ್ನು ಹೇಳಿಕೊಂಡಾಗ ಆ ಮಗುವಿಗೆ ಕೇವಲ ಎಂಟು ವರ್ಷ ವಯಸ್ಸು.

ಈ ವ್ಯಕ್ತಿಯಿಂದ ಧಾರ್ಮಿಕ ಶಿಕ್ಷಣ ಪಡೆಯಲು ಹೋಗುತ್ತಿದ್ದದ್ದಾಗಿ ತಿಳಿಸಿದ ಬಾಲಕಿ, ಆ ವೇಳೆ ತನಗೆ ಕಿರುಕುಳ ನೀಡಿದ್ದಾಗಿ ಹೇಳಿಕೊಂಡಿದ್ದಾಳೆ. ನೀಲಿ ಚಿತ್ರಗಳನ್ನು ತನಗೆ ತೋರಿಸುತ್ತಿದ್ದ ವಿಚಾರವನ್ನು ತನ್ನದೇ ಸೀಮಿತ ಭಾಷೆಯಲ್ಲಿ ತಿಳಿಸಿದ ಬಾಲಕಿ, ತುಂಡುಡುಗೆಯಲ್ಲಿದ್ದ ಗಂಡಸರು ಹಾಗೂ ಹೆಂಗಸರು ಶಾಕಿಂಗ್ ಕೆಲಸಗಳನ್ನು ಮಾಡುತ್ತಿದ್ದರು ಎಂದಿದ್ದಾಳೆ.

ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಕ್ಯಾರೆಟ್ ಪುಡ್ಡಿಂಗ್

ಅಪ್ರಾಪ್ತ ವಯಸ್ಸಿನ ಬಾಲಕಿ, ಆಕೆ ತಾಯಿ ಹಾಗೂ ಪೊಲೀಸರು ಈ ಕೇಸಿನಲ್ಲಿ ಸಾಕ್ಷಿಗಳಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕನಾದ ಕಾಮುಕನಿಗೆ ವಿಧಿಸಿದ 10,000 ರೂಪಾಯಿ ದಂಡದಲ್ಲಿ 8,000 ರೂಪಾಯಿಯನ್ನು ಬಾಲಕಿಗೆ ಪರಿಹಾರವಾಗಿ ನೀಡಲಾಗುವುದು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags