Kannada News Now

1.8M Followers

'ಶಿಕ್ಷಕರ ಹುದ್ದೆ'ಯ ಆಕಾಂಕ್ಷಿಗಳಿಗೆ ಬಹುಮುಖ್ಯ ಮಾಹಿತಿ : ಇನ್ಮುಂದೆ 'ರಾಷ್ಟ್ರೀಯ ಶಿಕ್ಷಣ ನೀತಿ'ಯಂತೆ ಶಿಕ್ಷಕರ ಆಯ್ಕೆ ಹೇಗೆ ಗೊತ್ತಾ.? ಇಲ್ಲಿದೆ ಮಾಹಿತಿ

25 Aug 2021.5:41 PM

ಬೆಂಗಳೂರು : ಆಗಸ್ಟ್.23, 2021ರಿಂದ ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ( NEP)-2020ರ ಅನುಸಾರವಾಗಿ ತರಗತಿ, ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಇನ್ಮುಂದೆ ಹೇಗೆ ನಡೆಯಲಿದೆ ಎನ್ನುವ ಬಗ್ಗೆ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಈ ಕೆಳಗಿನಂತಿದೆ.

BIG BREAKING NEWS : ಬೆಚ್ಚಿ ಬಿದ್ದ ಮೈಸೂರಿನ ಜನರು : ಸ್ನೇಹಿತನ ಜೊತೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಇನ್ಮುಂದೆ ಶಿಕ್ಷಕರ ಆಯ್ಕೆ ಪ್ರಕ್ರಿಯೆ NEPಯಂತೆ ಹೀಗೆ ನಡೆಯಲಿದೆ..

  • GPSTRನ 6ರಿಂದ 8ನೇ ತರಗತಿಯ ಶಿಕ್ಷಕರಾಗಲು ಬಿಎ, ಬಿಎಡ್, ಟಿಇಟಿ ಅಥವಾ ಪಿಯುಸಿ, ಡಿಇಡಿ, ಬಿಎ, ಟಿಇಟಿ ಆಗರಬೇಕಾಗುತ್ತದೆ.
  • HSTR 9, 10, 11 ಮತ್ತು 12ನೇ ತರಗತಿಗಳ ಶಿಕ್ಷಕರಾಗಲೂ, ಎಂ, ಬಿಎಡ್ ಆಗಿರಬೇಕು. ಇಲ್ಲಿ ಟಿಇಟಿ ಅವಶ್ಯಕತೆ ಇರೋದಿಲ್ಲ.
  • GPSTR ಮತ್ತು HSTR ಎರಡಕ್ಕೂ ವಯೋಮಾನದ ಮಿತಿ ಎಸ್ಸಿ, ಎಸ್ಟಿಗಳಿಗೆ 45 ವರ್ಷವಾದ್ರೇ.. ಒಬಿಸಿಗಳಿಗೆ 43, ಜನರಲ್ ಕೆಟಗರಿಯವರಿಗೆ 40 ವರ್ಷವಾಗಿದೆ.
  • GPSTR 6 ರಿಂದ 8ನೇ ತರಗತಿ ಶಿಕ್ಷಕರ ಹುದ್ದೆಗಳ ಆಯ್ಕೆಗಾಗಿ ಶೇ.10ರಷ್ಟು ಡಿಇಡಿ, ಬಿಇಡಿ ಅಂಕ. ಶೇ.15ರಷ್ಟು ಬಿಎ ಅಂಕ, ಶೇ.25ರಷ್ಟು ಟಿಇಟಿ ಅಂಕ ಹಾಗೂ ಶೇ.50ರಷ್ಟು ಸಿಇಟಿ ಅಂಕ ಸೇರಿ ಶೇ.100ರಷ್ಟು ಆಗಿದೆ. ಈ ವಿಧಾನದಲ್ಲಿ ಶಿಕ್ಷಕರ ಹುದ್ದೆಗೆ ಆಯ್ಕೆ ನಡೆಯಲಿದೆ.
  • HSTR ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಶೇ.20ರಷ್ಟು ಬಿಎ ಅಂಕ, ಶೇ.10ರಷ್ಟು ಎಂಎ ಅಂಕ, ಶೇ.60ರಷ್ಟು ಸಿಇಟಿ ಅಂಕ ಸೇರಿದಂತೆ ಶೇ.100ರಷ್ಟು ಅಂಕಗಳೊಂದಿಗೆ ಆಯ್ಕೆ ವಿಧಾನ ನಡೆಯಲಿದೆ.
  • GPSTRರ 6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಬಿಎನಲ್ಲಿ ಐಚ್ಛಿಕವಾಗಿ ವಿಷಯಗಳಲ್ಲಿ ಕಡ್ಡಾಯವಾಗಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳು ಕನಿಷ್ಟ ಶೇ.45 ಅಂಕ ಕಡ್ಡಾಯ. ಇತರರಿಗೆ ಶೇ.50ರಷ್ಟು ಅಂಕ ಪಡೆದಿರೋದು ಕಡ್ಡಾಯವಾಗಿದೆ.
  • HSTR ಪ್ರೌಢ ಶಾಲೆ ಶಿಕ್ಷಕರಾಗಲು ಎಂಎಯಲ್ಲಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳು ಶೇ.45ರಷ್ಟು ಅಂಕ, ಇತರೆ ಅಭ್ಯರ್ಥಿಗಳು ಶೇ.50 ಅಂಕ ಪಡೆದಿರೋದು ಕಡ್ಡಾಯವಾಗಿದೆ.
  • GPSTR ಶಾಲೆಗಳಲ್ಲಿನ ಸಮಾಜ, ವಿಜ್ಞಾನ, ಗಣಿತ ಶಿಕ್ಷಕರಾಗಲು ಸಾಮಾನ್ಯ ಜ್ಞಾನ-150 ಅಂಕ, ವಿವರಣಾತ್ಮಕ - 150, ಕನ್ನಡ -100 ಸೇರಿದಂತೆ ಒಟ್ಟು 400 ಅಂಕಗಳಿಗೆ ಮೂರು ಪತ್ರಿಕೆಗಳ ಸಿಇಟಿ ಪರೀಕ್ಷೆ ನಡೆಯಲಿದೆ. ಹೀಗೆ ನಡೆಯುವಂತ ಪತ್ರಿಕೆ-2 ಮತ್ತು 3ರಲ್ಲಿ ಕ್ರಮವಾಗಿ ಶೇ.50, 60 ಅಂಕ ಪಡೆದಿರಬೇಕಿದೆ.
  • GPSTR ಇಂಗ್ಲೀಷ್ ಶಿಕ್ಷಕರ ಹುದ್ದೆಗಾಗಿ ಸಾಮಾನ್ಯ ಜ್ಞಾನ 150, ಡಿಸ್ಕ್ರಿಪ್ಷನ್ ಪೇಪರ್ 150 ಅಂಕಗಳು ಸೇರಿದಂತೆ 300 ಅಂಕಗಳಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಇದರಲ್ಲಿ 2ನೇ ಪೇಪರ್ ನಲ್ಲಿ ಕಡ್ಡಾಯವಾಗಿ ಶೇ.50ರಷ್ಟು ಅಂಕ ಪಡೆಯಬೇಕಿದೆ.
  • ಇನ್ನೂ ಇಂಜಿನಿಯರಿಂಗ್ ನವರು ಆರ್ಕಿಟೆಕ್ಚರ್ ಒಂದು ಬಿಟ್ಟು ಯಾವುದೇ ಕೋರ್ಸ್ ಜೊತೆಗೆ ಗಣಿತ ಓದಿರಬೇಕು. ಇದಲ್ಲದೇ ಬಿಎಡ್, ಟಿಇಟಿ ಪರೀಕ್ಷೆ ಪಾಸ್ ಮಾಡಿರೋದು ಕಡ್ಡಾಯವಾಗಿದೆ.

'ರೈಲ್ವೆ ಪ್ರಯಾಣಿಕ'ರಿಗೆ ಗುಡ್ ನ್ಯೂಸ್ : ರಾಜ್ಯದ ಈ ಮಾರ್ಗಗಳಲ್ಲಿ, ಕಾಯ್ದಿರಿಸದ 'ವಿಶೇಷ ರೈಲುಗಳ ಸಂಚಾರ'

BREAKING NEWS : ರಾಫೆಲ್ ನಡಾಲ್ ಬಳಿಕ, ಯುಎಸ್ ಓಪನ್ ನಿಂದ ಹೊರಬಿದ್ದ 'ಸೆರೆನಾ ವಿಲಿಯಮ್ಸ್'



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags