Kannada News Now

1.8M Followers

ವಾಟ್ಸಾಪ್ ನಲ್ಲಿನ 'ಡಿಲಿಟ್ ಫಾರ್ ಎವೆರಿವನ್' ಮಾಡಿದ ನಂತರವೂ ಮೆಸೇಜ್ ಓದಬಹುದು, ಗೊತ್ತೇ..?

07 Sep 2021.7:12 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋದರೇ ವಿವಿಧ ಆಪ್ ಗಳನ್ನು ನೋಡಬಹುದು. ಹಾಗೆಯೇ ವಾಟ್ಸಾಪ್ ಕೂಡಾ ಆಪ್ ಡೇಟ್ ಆಗುತ್ತಿರುತ್ತದೆ. ಇದೀಗ ವಾಟ್ಸಾಪ್‌ನಲ್ಲಿ 'ಡಿಲಿಟ್ ಫಾರ್ ಎವೆರಿವನ್' ಮತ್ತು ಡಿಲೀಟ್ ಫಾರ್ ಮಿ ಎಂಬ ಹೊಸ ಆಯ್ಕೆಯನ್ನ ಸೇರಿಸಲಾಗಿದೆ.‌ ಹೀಗಾಗಿ ನಾವು ಕಣ್ತಪ್ಪಿ ಕಳುಹಿಸುವ ಮೆಸೇಜ್ ಗಳನ್ನ ಯಾರೂ ಓದದಂತೆ ಡಿಲೀಟ್ ಮಾಡಬಹುದು.

ಆದರೆ ಈ ಆಯ್ಕೆ ನಿಜವಾಗಿಯೂ ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆ ಉದ್ಬವವಾಗಿದೆ. ಯಾಕೆಂದರೆ ಮೆಸೇಜನ್ನು ಡಿಲೀಟ್ ಮಾಡಿದರೂ ಅದನ್ನು ಮತ್ತೆ ಓದಲು ಸಾಧ್ಯವಂತೆ. ಹೀಗಂತ ಸ್ಪೇನಿನ ಟೆಕ್ ಬ್ಲಾಗ್‌ ಹೇಳಿದೆ.

ವಾಟ್ಸಾಪ್ ಚಾಟ್‌ನಲ್ಲಿ ಬೇರೊಬ್ಬ ವ್ಯಕ್ತಿಯು ಮೆಸೇಜ್ , ವಿಡಿಯೋವನ್ನ ಡಿಲಿಟ್ ಮಾಡಿದ್ದರೂ ಇದನ್ನ ಮತ್ತೆ ನೋಡಬಹುದಂತೆ. ಈ ವಿಧಾನವನ್ನು ಕಂಡು ಹಿಡಿಯಲಾಗಿದೆ. ಬರುವ ಮೆಸೇಜ್ ಗೆ ಸಂಬಂಧಿಸಿದಂತೆ ನಿಮ್ಮ ಫೋನ್‌ನಲ್ಲಿ ನೋಟಿಫಿಕೇಷನ್ ಬರುತ್ತದೆ. ಆಗ ಆಯಂಡ್ರಾಯ್ಡಾ ಹ್ಯಾಂಡ್ ಸೆಟ್‌ನ ನೋಟಿಫಿಕೇಷನ್ ಲಾಗ್‌ನಿಂದ ಸಂದೇಶವನ್ನು ಮರಳಿ ಪಡೆಯಬಹುದು. ಆದರೆ ನೋಟಿಫಿಕೇಷನ್ ಬಾರದಿದ್ದರೆ ಸಂದೇಶವು ಬಂದಾಗ ನೀವು ಚಾಟ್ ಅನ್ನು ಓಪನ್ ಅಥವಾ ಆಯಕ್ಟಿವ್ ಆಗಿ ಇಟ್ಟಿದ್ದರೆ ಈ ವಿಧಾನವು ಉಪಯೋಗಕ್ಕೆ ಬರಲ್ಲ.
ಡಿಲೀಟ್ ಆದ ಸಂದೇಶಗಳನ್ನು ನೋಡಲು ಮಾರ್ಗಗಳಿವೆ.

* ಕ್ಲೀನರ್ ಬಳಸಿ ನೋಟಿಫಿಕೇಷನ್ ಲಾಗ್ ಅನ್ನು ಅಳಿಸಿದರೆ ಸಂದೇಶವನ್ನು ಮತ್ತೆ ನೋಡುವುದಕ್ಕಾಗಲ್ಲ. ನೀವು ಫೋನ್‌ನ್ನು ರಿಸ್ಟಾರ್ಟ್ ಮಾಡಿದರೂ ಸಂದೇಶಗಳನ್ನು ಮತ್ತೆ ಓದುವುದಕ್ಕೆ, ನೋಡುವುದಕ್ಕೆ ಆಗುವುದಿಲ್ಲ. ಟೆಕ್ಸ್ಟ್ ಮೆಸೇಜ್‌ಗಳನ್ನು ಮಾತ್ರ ಮರಳಿ ಪಡೆಯಬಹುದು. ರವಾನಿಸಿದ್ದ ವ್ಯಕ್ತಿಯು ಚಿತ್ರ ಅಥವಾ ವೀಡಿಯೊ ಸಂದೇಶಗಳನ್ನು ಡಿಲಿಟ್ ಮಾಡಿದ್ದರೆ 'ದಿಸ್ ಮೆಸೇಜ್ ವಾಸ್ ಡಿಲಿಟೆಡ್' ಎಂಬ ಮಾಮೂಲು ಸಂದೇಶವು ಕಾಣಿಸಿಕೊಳ್ಳುತ್ತದೆ.

* ಮ್ಯಾನ್ಯುವಲ್ ಆಗಿ ನೋಟಿಫಿಕೇಷನ್ ಲಾಗ್‌ನ್ನು ಪ್ರವೇಶಿಸುವುದು ಎರಡನೇ ಮಾರ್ಗ. ನಿಮ್ಮ ಮೊಬೈಲ್‌ನ ಹೋಮ್‌ಸ್ಕ್ರೀನ್‌ನ್ನು ಸುದೀರ್ಘವಾಗಿ ಒತ್ತಿ ವಿಜೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಸೆಟಿಂಗ್ಸ್ ವಿಜೆಟ್ ಸಿಗುವವರೆಗೂ ಸ್ಕ್ರೋಲ್ ಮಾಡಿ ಅದನ್ನು ನಿಮ್ಮ ಹೋಮ್ ಸ್ಕ್ರೀನ್ ಮೇಲೆ ಎಳೆಯಿರಿ. ಆಯ್ಕೆ ಮಾಡಿಕೊಳ್ಳಲು ಹಲವಾರು ಪರ್ಯಾಯಗಳಿರುವ ಹೊಸದೊಂದು ಆಪ್ಶನ್ ತೆರೆದುಕೊಳ್ಳುತ್ತದೆ. ಮತ್ತು ಇದರಲ್ಲಿ ನೋಟಿಫಿಕೇಷನ್ ಲಾಗ್‌ನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿಂದ ಈ ಸೆಟಿಂಗ್ಸ್ ವಿಜೆಟ್ ನಿಮ್ಮನ್ನು ನೇರವಾಗಿ ನೋಟಿಫಿಕೇಷನ್ ಹಿಸ್ಟರಿಗೆ ಕರೆದೊಯ್ಯುತ್ತದೆ. ನೋಟಿಫಿಕೇಷನ್ ಲಾಗ್‌ನ್ನು ಓಪನ್ ಮಾಡಿದರೆ ಎಲ್ಲ ನೋಟಿಫಿಕೇಷನ್‌ಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ.

* ಮೋಟೊ ಮತ್ತು ಪಿಕ್ಸೆಲ್‌ನಂತಹ 'ಪ್ಯೂರ್' ಆಯಂಡ್ರಾಯ್ಡಾ ಫೋನ್‌ಗಳಲ್ಲಿ ಸೆಟಿಂಗ್ಸ್ ವಿಜೆಟ್ ಮೊದಲೇ ಹೋಮ್ ಸ್ಕ್ರೀನ್‌ಗೆ ಸೇರ್ಪಡೆಯಾಗಿರುತ್ತದೆ ಮತ್ತು ಅಲ್ಲಿ ನೋಟಿಫಿಕೇಷನ್ ರಿಜಿಸ್ಟ್ರಿಯನ್ನು ಕಾಣಬಹುದು.
ಈ ಎಲ್ಲ ವಿಧಾನಗಳು ಆಯಂಡ್ರಾಯ್ಡಾ 6 ಮತ್ತು ಹೆಚ್ಚಿನ ಆವೃತ್ತಿಗಳಲ್ಲಿ ಮಾತ್ರ ಕೆಲಸ ಮಾಡುತ್ತವೆ.

* ನೋಟಿಫಿಕೇಷನ್ ಆಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ ಅದನ್ನು ಓಪನ್ ಮಾಡಿ ವಾಟ್ಸಾಪ್ ಐಕನ್‌ಗಾಗಿ ಹುಡುಕಿದರೆ ಡಿಲಿಟ್ ಆದ ಎಲ್ಲ ಸಂದೇಶಗಳನ್ನು ಓದಬಹುದು. ಮೆಸೇಜ್ ನ ಮೊದಲ 100 ಅಕ್ಷರಗಳನ್ನು ಮಾತ್ರ ಕಾಣಬಹುದು. ಹಾಗೆಯೇ ನೋಟಿಫಿಕೇಷನ್ ಲಾಗ್ ಕೆಲವೇ ಗಂಟೆಗಳ ಅವಧಿಗೆ ಸಂದೇಶವನ್ನು ಸೇವ್ ಮಾಡಿರುತ್ತದೆ. ಹೀಗಾಗಿ ಸುದೀರ್ಘ ಅವಧಿಯ ಬಳಿಕ ಡಿಲಿಟ್ ಆದ ಸಂದೇಶಗಳನ್ನು ಮತ್ತೆ ಪಡೆಯುವುದಕ್ಕೆ ಆಗುವುದಿಲ್ಲ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags