Kannada News Now

1.8M Followers

`CET' ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : 8 ಕೃಪಾಂಕ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧಾರ!

10 Sep 2021.06:14 AM

ಬೆಂಗಳೂರು : ಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿ ನೀಡಿದ್ದು, ಸಿಇಟಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳಿಗೆ 8 ಕೃಪಾಂಕ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.

ನಾಡಿನ ಜನತೆಗೆ 'ಗೌರಿ-ಗಣೇಶ' ಹಬ್ಬದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ

ಅಗಸ್ಟ್ 28 ರಿಂದ 30 ರವರೆಗೆ ನಡೆದಿದ್ದ ಸಿಇಟಿ ಪರೀಕ್ಷೆಯನ್ನು 2,01,834 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಸೆ. 20 ರಂದು ಫಲಿತಾಂಶ ಪ್ರಕಟವಾಗಲಿದೆ. ಗಣಿತದಲ್ಲಿ 2 ಕೃಪಾಂಕ ಹಾಗೂ ಎ ಶ್ರೇಣಿ ಪ್ರಶ್ನೆ 21 ಮತ್ತು 37 ಕ್ಕೆ ಉತ್ತರಗಳ ಗೊಂದಲ ಇದೆ. ಜೀವಶಾಸ್ತ್ರದಲ್ಲಿ ಎ1 ಶ್ರೇಣಿಯ 40 ನೇ ಪ್ರಶ್ನೆ ಬಿ ಮತ್ತು ಡಿ ಆಯ್ಕೆಗಳೆರಡೂ ಸರಿ ಇದೆ.

Kisan Credit Card : ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ

ಈ ರೀತಿ ಸ್ವಯಂ ಘೋಷಿತವಾಗಿ ಕೆಇಎ 4 ದೋಷಗಳನ್ನು ಕಂಡು ಹಿಡಿದು ಅದಕ್ಕೆ ಕೃಪಾಂಕ ಘೋಷಣೆ ಮಾಡಿದೆ. ಸದ್ಯ ಘೋಷಣೆ ಮಾಡಿರುವ 4 ಹಾಗೂ ಮಾಡಬೇಕಿರುವ 4 ಸೇರಿ ಒಟ್ಟಾರೆ 8 ಕೃಪಾಂಕ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗಲಿದೆ ಎನ್ನಲಾಗಿದೆ.

ಆದಾಯ ತೆರಿದಾರರಿಗೆ ಬಿಗ್ ರಿಲೀಫ್‌ : ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಣೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags