Kannada News Now

1.8M Followers

ಇನ್ನೂ 'ಕೊರೋನಾ ಲಸಿಕೆ ಪಡೆಯದ ಶಿಕ್ಷಕ'ರಿಗೆ ಬಿಗ್ ಶಾಕ್ : ಲಸಿಕೆ ಹಾಕಿಸಿಕೊಳ್ಳದೇ ಇದ್ರೇ.., 'ಕಡ್ಡಾಯ ರಜೆ' ಫಿಕ್ಸ್

28 Aug 2021.2:26 PM

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಶಾಲಾ-ಕಾಲೇಜು ಆರಂಭಗೊಂಡಿದೆ. ಹೀಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುತ್ತಿರುವಂತ ಶಿಕ್ಷಕರಿಗೆ ಕೊರೋನಾ ಲಸಿಕೆ ಪಡೆಯೋದು ಕಡ್ಡಾಯವಾಗಿದೆ. ಒಂದು ವೇಳೆ ಲಸಿಕೆ ಪಡೆಯದೇ ಇರೋದು ಶಿಕ್ಷಣ ಇಲಾಖೆ ಗಮನಕ್ಕೆ ಬಂದ್ರೇ..

ನಿಮಗೆ ಕಡ್ಡಾಯ ರಜೆ ಫಿಕ್ಸ್ ಆದಂತೆ ಆಗಿದೆ.

KCET-2021 Exam : 'ಸಿಇಟಿ ಪರೀಕ್ಷೆ' ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 20 ದಿನಗಳಲ್ಲೇ 'ಸಿಇಟಿ ಫಲಿತಾಂಶ' ಪ್ರಕಟ

ಈ ಸಂಬಂಧ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತಂತೆ ಜ್ಞಾಪನಾ ಹೊರಡಿಸಿದ್ದು, ಜೇವರ್ಗಿ ತಾಲೂಕಿನ ಸೊನ್ನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಶ್ಚಂದ್ರ ಅವರು ದಿನಾಂಕ 24-08-2021ರಿಂದ ಶಾಲೆಗೆ ಅನಧಿಕೃತ ಗೈರು ಹಾಜರಾಗಿದ್ದರು.

BIG BREAKING NEWS : ಈ ಬಾರಿ 20 ದಿನಗಳಲ್ಲೇ 'CET ಪರೀಕ್ಷೆ ಫಲಿತಾಂಶ' ಪ್ರಕಟ - ಸಚಿವ ಅಶ್ವತ್ಥನಾರಾಯಣ

ಹೀಗೆ ಗೈರು ಹಾಜರಾಗಿದ್ದಂತ ಅವರು, ಆನಂತ್ರ ಶಾಲಾ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಕೋರಿರುತ್ತಾರೆ. ಅವರು ನೀಡಿರುವಂತ ಅರ್ಜಿಯನ್ನು ಪರಿಶೀಲಿಸಲಾಗಿ, ಜೊತೆಗೆ ವಿಚಾರಿಸಲಾಗಿ ಅವರು ಇನ್ನೂ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದೇ ಇರೋದು ಕಚೇರಿಯ ಗಮನಕ್ಕೆ ಬಂದಿರುತ್ತದೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣ : ಆರೋಪಿಗಳ ಕ್ರೈಂ ಹಿಸ್ಟರಿಯೇ ಭಯಾನಕ

ಈ ಹಿನ್ನಲೆಯಲ್ಲಿ ಜೇವರ್ಗಿ ತಾಲೂಕಿನ ಸೊನ್ನದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸುಭಾಶ್ಚಂದ್ರ ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಸುತ್ತೋಲೆಯಂತೆ, ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದೇ, ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ಮತ್ತು ಕರ್ತವ್ಯ ನಿಷ್ಠೆ ಇಲ್ಲದಿರುದನ್ನು ಗೋಚರಿಸುತ್ತದೆ. ಆದುದರಿಂದ ಕರ್ನಾಟಕ ನಾಗರೀಕ ಸೇವಾ ( ನಡತೆ ) ನಿಯಮ 1966ರಂತೆ ದಿನಾಂಕ 07-01-2021ರ ನಿಯಮ-03 ಉಲ್ಲಂಘಿಸಿರೋ ಕಾರಣ, ಕಡ್ಡಾಯ ರಜೆಯ ಮೇಲೆ ಕಳುಹಿಸಿ, ಆದೇಶಿಸಿದ್ದಾರೆ.

BIG NEWS : 'ಮೈಸೂರು ಗ್ಯಾಂಗ್ ರೇಪ್' ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ : ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್, ಮುಂಬೈನತ್ತ ಪಯಣ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags